19.8 C
Bengaluru
Monday, December 23, 2024

“ಕಳುವಾಗಿದ್ದ 2,500 ಮೊಬೈಲ್ ಗಳನ್ನು ಕೇವಲ ಎರಡೇ ವಾರದಲ್ಲಿ ಹಿಂತಿರುಗಿಸಿದ ಕರ್ನಾಟಕ ಪೊಲೀಸರು:

ಬೆಂಗಳೂರು: ಮಾರ್ಚ್ 10:ಕಳೆದ ಎರಡು ವಾರಗಳಲ್ಲಿ ಕದ್ದ ಅಥವಾ ಕಳೆದುಹೋದ ಸುಮಾರು 2,500 ಮೊಬೈಲ್ ಫೋನ್ ಗಳನ್ನು ಕೇಂದ್ರ ಸಲಕರಣೆ ಗುರುತಿಸುವಿಕೆ ನೋಂದಣಿ (ಸಿಇಐಆರ್) ಸಹಾಯದಿಂದ ಪತ್ತೆ ಮಾಡಿ ಅವುಗಳನ್ನು ಅವುಗಳ ಮಾಲೀಕರಿಗೆ ಹಿಂತಿರುಗಿಸುವಲ್ಲಿ ಕರ್ನಾಟಕ ಪೊಲೀಸರು ದಾಖಲೆಯನ್ನು ಬರೆದಿದ್ದಾರೆ.

ಕೇಂದ್ರ ಸಲಕರಣೆ ಗುರುತಿಸುವಿಕೆ ನೋಂದಣಿ (ಸಿಇಐಆರ್) ವ್ಯವಸ್ಥೆಯಲ್ಲಿ ಕದ್ದ ಸಾಧನಗಳನ್ನು ನಿಷ್ಕ್ರಿಯಗೊಳಿಸಬಹುದಾಗಿದ್ದು, ನಿಷ್ಕ್ರಿಯಗೊಂಡ ಅವುಗಳನ್ನು ಬಳಸಲು ಪ್ರಯತ್ನಿಸಿದಾಗ ಪೊಲೀಸರಿಗೆ ಎಚ್ಚರಿಕೆ ನೀಡುತ್ತದೆ.

CEIR ಪೋರ್ಟಲ್ ನಲ್ಲಿ ಕಳುವಾದ ಮೊಬೈಲ್ ಮತ್ತು ಅದರ ಮಾಲೀಕರಿಗೆ ಸಂಬಂಧಿಸಿದ ಎಲ್ಲಾ ವಿವರರಗಳನ್ನು ಒದಗಿಸಿ ದೂರ ನೀಡಬೇಕಾಗುತ್ತದೆ. ನಂತರ ಮೊಬೈಲ್ ಸ್ವಯಂಚಾಲಿತವಾಗಿ ನಿಷ್ಕ್ರಿಯಗೊಳುತ್ತದೆ. ಆ ಮೊಬೈಲ್ ಅನ್ನು ಕದ್ದಿರುವ ಅಥವಾ ತೆಗೆದುಕೊಂಡಿರುವ ವ್ಯಕ್ತಿ ಹೊಸ ಸಿಮ್ ಕಾರ್ಡ್ ಅನ್ನು ಹಾಕಿ ಮೊಬೈಲ್ ಅನ್ನು ಬಳಸಲು ಪ್ರಯತ್ನಿಸಿದರೆ ಆ ಹೊಸ ಸಿಮ್ ನಂಬರ್ ಮತ್ತು ಉಪಯೋಗಿಸುತ್ತಿರುವ ಸ್ಥಳದ ಕುರಿತು CEIR ಪೋರ್ಟಲ್ ನಿಂದ ಪೊಲೀಸರಿಗೆ ಎಚ್ಚರಿಕೆಯನ್ನು ಸಂದೇಶದ ಜೊತೆಗೆ ಹೊಸ ಬಳಕೆದಾರನ ವಿವರಗಳು ಸಹ ಲಭ್ಯವಾಗುತ್ತದೆ.

ನಂತರ ಪೊಲೀಸರು ಎಚ್ದೆತ್ತುಕೊಂಡು ಬಳಕೆದಾರನ ಮೊಬೈಲ್ ಸಂಖ್ಯೆಗೆ ಕರೆ ಮಾಡಿ, ಆತನಿಗೆ ತಾನು ಉಪಯೋಗಿಸುತ್ತಿರುವ ಮೊಬೈಲ್ ಕದ್ದ ಮೊಬೈಲ್ ಎಂದು ತಿಳಿ ಹೇಳಿ ಹಿಂದಿರುಗಿಸುವಂತೆ ತಿಳಿಸುತ್ತಾರೆ. ಕದ್ದವರು ಅಥವಾ ತೆಗೆದುಕೊಂಡವರು ಅದನ್ನು ಹಿಂತಿರುಗಿಸಬೇಕು ಇಲ್ಲದಿದ್ದರೆ ಕಾನೂನು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಇದರಲ್ಲಿ ಅಲವರು ಪೊಲೀಸರಿಗೆ ಎದರಿ ತಮ್ಮಬಳಿ ಇರುವ ಕಳ್ಳತನವಾದ ಮೊಬೈಲ್ ಗಳನ್ನು ಕೊರಿಯರ್ ಗಳ ಮೂಲಕ ಪೊಲೀಸರಿಗೆ ಹಿಂತಿರುಗಿಸುತ್ತಾರೆ. ದೆಹಲಿ ಮತ್ತು ಮುಂಬೈ ನಂತರ ಕರ್ನಾಟಕವು CEIR ಅನ್ನು ಜಾರಿಗೆ ತಂದಿರುವ ಮೂರನೇ ರಾಜ್ಯವಾಗಿದೆ ಎಂದು ಕರ್ನಾಟಕ ಪೊಲೀಸ್ ಮಹಾನಿರ್ದೇಶಕ ಮತ್ತು ಪೊಲೀಸ್ ಮಹಾನಿರೀಕ್ಷಕ ಪ್ರವೀಣ್ ಸೂದ್ ತಿಳಿಸಿದ್ದಾರೆ.

ಈ ಪೊರ್ಟಲ್ ಅನ್ನು ಫೆಬ್ರವರಿ ಮಧ್ಯದಿಂದ ಜಾರಿಗೆ ತಂದಿದ್ದು ಅಂದಿನಿಂದ ನಾವು ಕನಿಷ್ಟ 2,500 ಮೊಬೈಲ್ ಫೋನ್ ಗಳನ್ನು ಅವುಗಳ ಮಾಲೀಕರಿಗೆ ಹಿಂತಿರುಗಿಸಿದ್ದೇವೆ. ಅವುಗಳಲ್ಲಿ ಸುಮಾರು 2,000 ಬೆಂಗಳೂರಿನಲ್ಲಿ ಮತ್ತು ಉಳಿದವುಗಳನ್ನು ವಿವಿಧ ಜಿಲ್ಲೆಗಳಲ್ಲಿ ಪತ್ತೆಹಚ್ಚಲಾಗಿದೆ” ಎಂದು ಅವರು ಹೇಳಿದ್ದಾರೆ.
ಕಳುವಾದ ತಮ್ಮ ಮೊಬೈಲ್ ಬಗ್ಗೆ ದೂರು ದಾಖಲಿಸಲು CEIR ಪೋರ್ಟಲ್ ಗೆ ಲಾಗಿನ್ ಆಗುವ ಬಗ್ಗೆ ತಿಳಿದಿಲ್ಲದವರು ತಮ್ಮ ಹತ್ತಿರದ ಯಾವುದೇ ಪೊಲೀಸ್ ಠಾಣೆಗೆ ಹೋಗಿ ಅಲ್ಲಿನ ಸಿಬ್ಬಂದಿಗಳ ಸಹಾಯವನ್ನು ಪಡೆಯಬಹುದು.

ಹುಬ್ಬಳ್ಳಿ-ಧಾರವಾಡದ ಪೊಲೀಸ್ ಕಮಿಷನರ್ ರವರಾಗಿರುವ ರಮಣ್ ಗುಪ್ತಾ ಅವರು ಕಳೆದ ಎರಡು ವಾರಗಳಲ್ಲಿ ಸುಮಾರು 40 ಫೋನ್ ಗಳನ್ನು ಮಾಲೀಕರಿಗೆ ಹಿಂತಿರುಗಿಸಿ 50 ಫೋನ್ ಗಳನ್ನು ಪತ್ತೆಹಚ್ಚಲಾಗಿದ್ದು ಅವುಗಳನ್ನು ಶೀಘ್ರದಲ್ಲೇ ಹಿಂತಿರುಗಿಸಲಾಗುವುದು ಎಂದು ತಿಳಿಸಿದ್ದಾರೆ. ಅಲ್ಲದೆ ಮೊಬೈಲ್ ಕಳೆದುಕೊಂಡ ಹುಬ್ಬಳ್ಳಿ-ಧಾರವಾಡದ ನಾಗರಿಕರು ಕಳೆದು ಹೋದ ಫೋನ್ ಗಳ ವಿವರಗಳನ್ನು ವಾಟ್ಸಾಪ್ ಸಂಖ್ಯೆಗೆ -8277952828 ಮೂಲಕ ಸಂದೇಶ ಕಳುಹಿಸುವ ಮೂಲಕ ಅಪ್ ಲೋಡ್ ಮಾಡಬಹುದು. ಈ ಸಂಖ್ಯೆಗೆ ‘ಹಾಯ್’ ಸಂದೇಶ ಕಳುಹಿಸುವ ವ್ಯಕ್ತಿಗೆ ಭರ್ತಿ ಮಾಡಬೇಕಾದ ಫಾರ್ಮ್ ನೊಂದಿಗೆ ಲಿಂಕ್ ಕಳುಹಿಸಲಾಗುತ್ತದೆ. ಅದನ್ನು ಫಿಲ್ ಮಾಡಿದ ನಂತರ ಸಂಬಂಧ ಪಟ್ಟವರು ಮುಂದಿನ ಕ್ರಮವನ್ನು ಕೈಗೊಳ್ಳುತ್ತಾರೆ. ಗದಗ ಜಿಲ್ಲೆಯವರು 8277969900 ಸಂಖ್ಯೆಯನ್ನು ಉಪಯೋಗಿಸಬಹುದಾಗಿದೆ.

ಮೊಬೈಲ್ ಕಳೆದುಹೋದರೆ ಇ-ಲಾಸ್ಟ್ ಅಪ್ಲಿಕೇಶನ್ ಮೂಲಕ ದೂರು ದಾಖಲಿಸಲಾಗುತ್ತದೆ. ದರೋಡೆ ಮಾಡಿದರೆ ಅಂತವರ ವಿರುದ್ದ ಎಫ್.ಐ.ಆರ್ ದಾಖಲಿಸಲಾಗುತ್ತದೆ ಮತ್ತು ವಿವರಗಳನ್ನು ಸಿಇಐಆರ್ ಪೋರ್ಟಲ್ ನಲ್ಲಿ ಅಪ್ ಲೋಡ್ ಮಾಡಿ ಮುಂದಿನ ಕ್ರಮಗಳನ್ನು ಕೈಗೊಂಡು ಮೊಬೈಲ್ ಅನ್ನು ಪತ್ತೆ ಮಾಡಲಾಗುವುದೆಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Related News

spot_img

Revenue Alerts

spot_img

News

spot_img