ಬೆಂಗಳೂರು, ಫೆ. 21 : ಅನ್ನದಾತರಾದ ರೈತರಿಗೆ ಯಾವಾಗಲೂ ಕಷ್ಟವೇ. ಸ್ವಲ್ಪ ಬಿಸಿಲು ಹೆಚ್ಚಾದರೂ, ಮಳೆ ಬಾರದಿದ್ದರ, ಅತಿಯಾಗಿ ಮಳೆ ಬಂದರೂ ರೈತರೂ ಬೆಳೆದ ಬೆಳೆ ನಾಶವಾಗಿ ಬಿಡುತ್ತದೆ. ಇನ್ನು ಕೆಲವೊಮ್ಮೆ ಬೆಳೆಗಳಿಗೆ ರೋಗ ತಗುಲಿದರೆ, ಹೂಡಿದ ಬಂಡವಾಳವೂ ವಾಪಸ್ ಬರುವುದಿಲ್ಲ. ಮಾಡಿದ ಸಾಲವನ್ನು ತೀರಿಸಲು ತುಂಬಾನೇ ಕಷ್ಟ ಪಡಬೇಕಾಗುತ್ತದೆ. ಹೀಗಾಗಿ ಪ್ರತಿ ಬಾರಿ ಬಜೆಟ್ ಮಂಡಿಸಿದಾಗ ಸರ್ಕಾರ ಕೃಷಿಗೆ ಮೊದಲ ಆದ್ಯತೆಯನ್ನು ನೀಡಲಾಗುತ್ತದೆ. ಕೃಷಿ ಅಭಿವೃದ್ಧಿಗಾಗಿ ಸರ್ಕಾರ ಹತ್ತು ಹಲವು ರೀತಿಯ ಯೋಜನೆಗಳನ್ನು ಜಾರಿಗೆ ತರುತ್ತಲಿರುತ್ತಾರೆ. ಇದರ ಲಾಭ ಪಡೆದ ರೈತರಿಗೆ ಕೊಂಚ ಕಷ್ಟ ಕಡಿಮೆಯಾಗುತ್ತದೆ.
ಇನ್ನು ಈ ಬಾರಿಯ ರಾಜ್ಯ ಬಜೆಟ್ ನಲ್ಲೂ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಸಾಕಷ್ಟು ಅನುದಾನವನ್ನು ಕೃಷಿ ಕ್ಷೇತ್ರಕ್ಕೆ ನೀಡಿದ್ದಾರೆ. ರೈತರಿಗೆ ಸಹಾಯವಾಗಲಿ ಎಂದು ಹಲವು ಘೋಷಣೆಗಳನ್ನು ಮಾಡಿದ್ದಾರೆ. ಅದರಲ್ಲಿ ಪ್ರಮುಖವಾದದ್ದು ಎಂದರೆ ಪ್ರಧಾನ ಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆ. ಈ ಯೋಜನೆಯಿಂದಾಗಿ ರೈತರಿಗೆ ಘೊಷಣೆ ಮಾಡುವ ಮೂಲಕ ಆರ್ಥಿಕ ಭದ್ರತೆಯನ್ನು ಒದಗಿಸಿದಂತಾಗಿದೆ. ಈ ಯೋಜನೆಗಳಿಂದ ರೈತ ಕುಟುಂಬಗಳಿಗೆ ಇದರ ಪ್ರಯೋಜನ ಸಿಗಲಿದೆ. ಈ ಯೋಜನೆ ಅಡಿಯಲ್ಲಿ ಪಾಲಿಸಿ ಮಾಡಿಸಿದ ನಾಗರಿಕರಿಗೆ ಭಾರತ ಸರ್ಕಾರ 2 ಲಕ್ಷ ರೂಪಾಯಿ ಅನ್ನು ನೀಡುತ್ತದೆ.
ಮೊದಲೇ ಹೇಳಿದಂತೆ, ಈ ಯೋಜನೆಯು ಒಂದು ವರ್ಷದ ವಿಮಾ ಯೋಜನೆಯಾಗಿದೆ. ಇದು ಯಾವುದೇ ಕಾರಣದಿಂದ ಮರಣಕ್ಕೆ ಜೀವ ವಿಮಾ ರಕ್ಷಣೆಯನ್ನು ನೀಡುತ್ತದೆ. ಯೋಜನೆಯು ಜೀವ ವಿಮಾ ಕಂಪನಿಗಳ ಮೂಲಕ ನೀಡಲಾಗುವುದು. PMJJBY ಅನ್ನು 18 ರಿಂದ 50 ವರ್ಷ ವಯಸ್ಸಿನೊಳಗಿನವರು ಮತ್ತು ಉಳಿತಾಯ ಬ್ಯಾಂಕ್ ಖಾತೆಯನ್ನು ಹೊಂದಿರುವ ಜನರು ಪಡೆಯಬಹುದು. ಸೇರಲು ಮತ್ತು ಸ್ವಯಂ-ಡೆಬಿಟ್ ಸಕ್ರಿಯಗೊಳಿಸಲು ತಮ್ಮ ಒಪ್ಪಿಗೆಯನ್ನು ನೀಡುವ ಆಸಕ್ತ ಜನರು ಈ ಯೋಜನೆಯ ಪ್ರಯೋಜನಗಳನ್ನು ಪಡೆಯಬಹುದು. ಪ್ರಿಮಿಯಂ ಆಗಿ 330 ರೂಪಾಯಿ ಅನ್ನು ಪ್ರತೀ ವರ್ಷ ಕಟ್ಟ ಬೇಕಾಗುತ್ತದೆ.
ಈ ಯೋಜನೆಗೆ ಅರ್ಜಿ ಸಲ್ಲಿಸುವ ಭಾರತೀಯರಿಗೆ ರಕ್ಷಣೆ ದೊರೆಯುತ್ತದೆ. 56 ಲಕ್ಷ ರೈತರಿಗೆ 180 ಕೋಟಿ ರೂ. ವೆಚ್ಚದಲ್ಲಿ ಜೀವನ್ ಜ್ಯೋತಿ ಭೀಮಾ ಯೋಜನೆ ಮಾಡಿಸಲಾಗುತ್ತಿದೆ. ಈ ಬಗ್ಗೆ ಬಜೆಟ್ ನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ. ರೈತರಿಗೆ ಈ ವಿಮಾವನ್ನು ಮಾಡಿಸುವುದರಿಂದ ಆರ್ಥಿಕ ಸಂಕಷ್ಟದಲ್ಲಿರುವವರಿಗೆ ಸಹಕಾರಿಯಾಗಲಿದೆ. ಇನ್ನು ಇದೇ ಬಜೆಟ್ ನಲ್ಲಿ ಫಸಲ್ ಬಿಮಾ ಯೋಜನೆಯಡಿ 86 ಲಕ್ಷ ರೈತರ ಬೆಳೆ ವಿಮೆಗಾಗಿ 4,900 ಕೋಟಿ ರೂಪಾಯಿ ಪ್ರೀಮಿಯಂ ಪಾವತಿಸಲಾಗಿದೆ. ಈ ಬಗ್ಗೆಯೂ ಸಿಎಂ ಅವರು ಹೇಳಿದ್ದಾರೆ.