19.9 C
Bengaluru
Friday, November 22, 2024

ಸರ್ಕಾರಿ ನೌಕರರ 2023ರ ರಜಾ ಪಟ್ಟಿ: ಎಷ್ಟು ರಜೆಗಳಿವೆ ನೋಡಿ!

ರಾಜ್ಯ ಸರ್ಕಾರಿ ನೌಕರರ 2023ರ ರಜಾ ದಿನಗಳ ವಿವರನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ಸಾರ್ವತ್ರಿಕ ರಜಾ ದಿನಗಳು 20 ಇದ್ದರೆ, ಪರಿಮಿತ ರಜಾ ದಿನಗಳು 17 ಇವೆ. ಈ ಸಂಬಂಧ ಆಡಳಿತ ಮತ್ತು ಸುಧಾರಣಾ ಇಲಾಖೆ ಸೋಮವಾರ ಆದೇಶ ಹೊರಡಿಸಿದೆ.

ಸಾರ್ವತ್ರಿಕ ರಜಾ ದಿನಗಳ ವಿವರ:
ಜ.26: ಗಣರಾಜ್ಯೋತ್ಸವ
ಫೆ.18: ಮಹಾಶಿವರಾತ್ರಿ
ಮಾ.22: ಯುಗಾದಿ ಹಬ್ಬ
ಏ.1: ಬ್ಯಾಂಕ್‌ಗಳ ವಾರ್ಷಿಕ ಲೆಕ್ಕಪತ್ರ ಮುಕ್ತಾಯ ದಿನ
ಏ.3: ಮಹಾವೀರ ಜಯಂತಿ
ಏ.7: ಗುಡ್‌ಫ್ರಾಯ್‌ಡೇ
ಏ.14: ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ
ಮೇ 1: ಕಾರ್ಮಿಕರ ದಿನಾಚರಣೆ
ಜೂ.29: ಬಕ್ರೀದ್
ಜು.29: ಮೊಹರಂ ಕಡೇ ದಿನ
ಆ.15: ಸ್ವಾತಂತ್ರ್ಯ ದಿನಾಚರಣೆ
ಸೆ.18: ವರಸಿದ್ಧಿ ವಿನಾಯಕ ವ್ರತ
ಸೆ.28: ಈದ್- ಮಿಲಾದ್
ಅ.2: ಗಾಂಧಿ ಜಯಂತಿ
ಅ.23: ಮಹಾನವಮಿ, ಆಯುಧ ಪೂಜೆ
ಅ.24: ವಿಜಯದಶಮಿ
ನ.1: ಕನ್ನಡ ರಾಜ್ಯೋತ್ಸವ
ನ.14: ಬಲಿಪಾಡ್ಯಮಿ, ದೀಪಾವಳಿ
ನ.30: ಕನಕದಾಸ ಜಯಂತಿ
ಡಿ.25: ಕ್ರಿಸ್‌ಮಸ್

ಈ ರಜಾಪಟ್ಟಿಯಲ್ಲಿ ಭಾನುವಾರಗಳಂದು ಬರುವ ಮಕರ ಸಂಕ್ರಾಂತಿ (ಜ.15), ಬಸವ ಜಯಂತಿ/ ಅಕ್ಷಯ ತೃತೀಯ (ಏ.23), ನರಕ ಚತುರ್ದಶಿ (ನ.12) ಹಾಗೂ ಎರಡನೇ ಶನಿವಾರದಂದು ಬರುವ ಮಹಾಲಯ ಅಮವಾಸ್ಯೆ (ಅ.14) ಹಾಗೂ ನಾಲ್ಕನೇ ಶನಿವಾರದಂದು ಬರುವ ಖುತುಬ್ ಎ ರಂಜಾನ್ (ಏ.22), ಮತ್ತು ಮಹರ್ಷಿ ವಾಲ್ಮೀಕಿ ಜಯಂತಿ (ಅ.28) ಈ ರಜಾ ಪಟ್ಟಿಯಲ್ಲಿ ನಮೂದಿಸಿಲ್ಲ.

ಏ.1 ವಾಣಿಜ್ಯ ಬ್ಯಾಂಕ್‌ಗಳ ಹಾಗೂ ಸಹಕಾರಿ ಬ್ಯಾಂಕ್‌ಗಳ ವಾರ್ಷಿಕ ಮುಕ್ತಾಯದ ದಿನ ಆಗಿರುವುದರಿಂದ ಈ ದಿನದಂದು ವಾಣಿಜ್ಯ ಮತ್ತು ಸಹಕಾರಿ ಬ್ಯಾಂಕ್‌ಗಳಿಗೆ ಮಾತ್ರ ರಜೆ ಇರುತ್ತದೆ.

ಸೆ.3 (ಭಾನುವಾರ) ಕೈಲ್ ಮುಹೂರ್ತ, ಅ.18 (ಬುಧವಾರ) ತುಲಾ ಸಂಕ್ರಮಣ, ನ.28 (ಮಂಗಳವಾರ) ಉತ್ತರಿ ಹಬ್ಬವನ್ನು ಆಚರಿಸಲು ಕೊಡಗು ಜಿಲ್ಲೆಗೆ ಮಾತ್ರ ಅನ್ವಯ ಆಗುವಂತೆ ಸ್ಥಳೀಯ ಸಾರ್ವತ್ರಿಕ ರಜೆಯನ್ನು ಘೋಷಿಸಲಾಗಿದೆ.

ಇದರ ಜೊತೆಗೆ ಎಲ್ಲಾ ಎರಡನೇ ಮತ್ತು ನಾಲ್ಕನೇ ಭಾನುವಾರಗಳಂದು ರಜೆ ಇರುತ್ತದೆ. ಶಿಕ್ಷಣ ಇಲಾಖೆಗೆ ಸಂಬಂಧಿಸಿದ ರಜಾ ಪಟ್ಟಿಯನ್ನು ಪ್ರತ್ಯೇಕವಾಗಿ ಹೊರಡಿಸಲಾಗಿದೆ. ಮುಸಲ್ಮಾನ ಬಾಂಧವರ ಹಬ್ಬಗಳು ಈ ನಿಗದಿತ ದಿನಾಂಕಗಳಂದು ಬೀಳದಿದ್ದರೆ ನಿಗದಿತ ದಿನಕ್ಕೆ ಬದಲಾಗಿ ಹಬ್ಬದ ದಿನದಂದು ರಜೆ ಮಂಜೂರು ಮಾಡಬಹುದು. ಸಾರ್ವತ್ರಿಕ ರಜೆ ದಿನಗಳ ಜೊತೆಗೆ ರಾಜ್ಯ ಸರ್ಕಾರಿ ನೌಕರರು ಎರಡು ದಿವಸಗಳಿಗೆ ಮೀರದಂತೆ ಪರಿಮಿತ ರಜೆಯನ್ನು ಪೂರ್ವಾನುಮತಿ ಪಡೆದು ಉಪಯೋಗಿಸಿಕೊಳ್ಳಬಹುದು.

ಪರಿಮಿತ ರಜಾ ದಿನಗಳ ಪಟ್ಟಿ:
ಜ.30: ಮಧ್ವ ನವಮಿ
ಮಾ.7: ಷಬ್-ಎ- ಬರಾತ್
ಮಾ.8: ಹೋಳಿ ಹಬ್ಬ
ಮಾ.30: ಶ್ರೀರಾಮನವಮಿ
ಏ.18: ಷಬ್-ಎ- ಖದರ್
ಏ.21: ಜಮತ್ -ಉಲ್- ವಿದಾ
ಏ.25: ಶ್ರೀ ಶಂಕರಾಚಾರ್ಯ ಜಯಂತಿ, ಶ್ರೀರಮಾನುಜಾಚಾರ್ಯ ಜಯಂತಿ
ಮೇ 5: ಬುದ್ಧ ಪೂರ್ಣಿಮ
ಆ.25: ಶ್ರೀ ವರಮಹಾಲಕ್ಷ್ಮೀ ವ್ರತ
ಆ.29: ಓಣಂ
ಆ.30: ಯಜುರ್ ಉಪಕರ್ಮ
ಆ.31: ಬ್ರಹ್ಮಶ್ರೀ ನಾರಾಯಣಗುರು ಜಯಂತಿ
ಸೆ.6: ಶ್ರೀಕೃಷ್ಣ ಜನ್ಮಾಷ್ಟಮಿ
ಸೆ.8: ಕನ್ಯಾ ಮರಿಯಮ್ಮ ಜಯಂತಿ
ಅ.18: ತುಲಾ ಸಂಕ್ರಮಣ
ನ.27: ಗುರು ನಾನಕ್ ಜಯಂತಿ
ನ.28: ಹುತ್ತರಿ ಹಬ್ಬ

ನೂತನ ವರ್ಷಾರಂಭ (ಜ.1), ದೇವರ ದಾಸಿಮಯ್ಯ ಜಯಂತಿ (ಮಾ.26), ವಿಶ್ವಕರ್ಮ ಜಯಂತಿ (ನ.17), ಕ್ರಿಸ್‌ಮಸ್ ಈವ್ (ಡಿ.24) ಭಾನುವಾರದಂದು. ಹೋಲಿ ಸ್ಯಾಟರ್‌ಡೇ (ಏ.8) ಎರಡನೇ ಶನಿವಾರದಂದು ಬರುವುದರಿಂದ ಈ ರಜಾಪಟ್ಟಿಯಲ್ಲಿ ನಮೂದಿಸಿಲ್ಲ.

Related News

spot_img

Revenue Alerts

spot_img

News

spot_img