21.1 C
Bengaluru
Tuesday, July 9, 2024

ಕರ್ನಾಟಕ ಸರ್ಕಾರಿ ನೌಕರರಿಗೆ ಗಳಿಕೆ ರಜೆ ಕುರಿತು ಆದೇಶ ಹೊರಡಿಸಿದ ಸರ್ಕಾರ

ಬೆಂಗಳೂರು, ಡಿ. 20: ಕರ್ನಾಟಕ ಸರ್ಕಾರವು ಸರ್ಕಾರಿ ನೌಕರರ 2023 ನೇ ಸಾಲಿನ ಗಳಿಕೆ ರಜೆ ಕುರಿತು ಆದೇಶವನ್ನು ಹೊರಡಿಸಿದೆ. 2023 ನೇ ಸಾಲಿನ ಬ್ಲಾಕ್ ಅವಧಿಗೆ ಗಳಿಕೆ ರಜೆಯನ್ನು ಅಧ್ಯರ್ಪಿಸಿ ನಗದೀಕರಣ ಪಡೆಯುವ ಬಗ್ಗೆ ರಾಜ್ಯ ಸರ್ಕಾರ ಆದೇಶ ನೀಡಿದೆ. ಈ ಆದೇಶದಲ್ಲಿ ರಜೆ ನಗದೀಕರಣ ಸಂಬಂಧ ಷರತ್ತುಗಳು ಅನ್ಯವಯವಾಗುತ್ತವೆ ಎಂದು ಹೇಳಲಾಗಿದೆ. ಈ ಆದೇಶವನ್ನು ಕರ್ನಾಟಕ ರಾಜ್ಯಪಾಲರ ಆದೇಶದ ಅನುಸಾರ ಹಾಗೂ ಅವರ ಹೆಸರಿನಲ್ಲಿ ಸರ್ಕಾರದ ಅಧೀನ ಕಾರ್ಯದರ್ಶಿಗಳಾದ ಅಜಯ್. ಕೊರಡೆ ಅವರು ಆರ್ಥಿಕ ಇಲಾಖೆ (ಸೇವೆಗಳು – 1) ಹೊರಡಿಸಿದೆ.

 

ಸರ್ಕಾರಿ ನೌಕರರು ಪ್ರತಿ ವರ್ಷ ಜನವರಿ 1ರಿಂದ ಪ್ರಾರಂಭವಾಗಿ ಡಿಸೆಂಬರ್ 31ರ ವರೆಗೆ ಗಳಿಕೆ ರಜೆಯನ್ನು ಅಧ್ಯರ್ಪಿಸಲು ಮತ್ತು ರಜೆಯ ವೇತನಕ್ಕೆ ನಗದೀಕರಣ ಸೌಲಭ್ಯ ಪಡೆಯಲು ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಯ ನಿಯಮ118(2)(i)ರಲ್ಲಿ ಅವಕಾಶವಿದೆ. ಆದರೆ ರಜೆ ದಿನಗಳು 15 ದಿನಗಳನ್ನು ಮೀರುವಂತಿಲ್ಲ. 2022ನೇ ಸಾಲಿನ ಬ್ಲಾಕ್ ಅವಧಿಗೆ ಸರ್ಕಾರಿ ನೌಕರರು ರಜೆ ಅಧ್ಯರ್ಫಿಸಿ ನಗದೀಕರಣಕ್ಕೆ ಅವಕಾಶ ನೀಡಿತ್ತು. ಸದರಿ ಬ್ಲಾಕ್ ಅವಧಿ 31/12/2022 ರಂದು ಮುಕ್ತಾಯಗೊಳ್ಳಲಿದೆ. ಹೀಗಾಗಿ ಈಗ ಸರ್ಕಾರ 2023ನೇ ಸಾಲಿನ ಬ್ಲಾಕ್ ಅವಧಿಯಲ್ಲಿ 15 ದಿನಗಳ ಗಳಿಕೆ ರಜೆಯನ್ನು ಅಧ್ಯರ್ಪಿಸಿ ರಜೆ ವೇತನಕ್ಕೆ ಸಮಾನವಾಗಿ ನಗದೀಕರಣ ಪಡೆಯಲು ಅವಕಾಶ ಕಲ್ಪಿಸಿದೆ.

ಜೊತೆಗೆ ಈ ಸೌಲಭ್ಯವನ್ನು ಕರ್ನಾಟಕ ಸರ್ಕಾರದಿಂದ ಸಹಅಯಾನುದಾನ/ ಅನುದಾನ ಪಡೆಯುವ ಇಲ್ಲವೇ ಪಡೆಯದಿರುವ ಎಲ್ಲಾ ಸರ್ಕಾರಿ ಸಂಸ್ಥೆಗಳ / ಉದ್ಯಮಗಳ ನೌಕರರಿಗೂ ಸಂಬಂಧಿತ ಸಂಸ್ಥೆ/ ಉದ್ಯಮಗಳ ಆರ್ಥಿಕ ಸ್ಥಿತಿಗೆ ಒಳಪಟ್ಟು ನಿಯತಗೊಳಿಸಲು ಅವಕಾಶವನ್ನು ಕಲ್ಪಿಸುವ ಉದ್ದೇಶ ಹೊಂದಿದೆ ಎಂದು ಹೇಳಲಾಗಿದೆ. 17.12/2022 ರಂದು ಸರ್ಕಾರವು 2023ನೇ ಸಾಲಿನ ಬ್ಲಾಕ್ ಅವಧಿಯಲ್ಲಿ ರಾಜ್ಯ ಸರ್ಕಾರಿ ನೌಕರರು ಗರಿಷ್ಠ 15 ದಿನಗಳ ಗಳಿಕೆ ರಜೆಯನ್ನು ಅಧ್ಯರ್ಪಿಸಿ ರಜಾ ವೇತನಕ್ಕೆ ಸಮನಾದ ನಗದೀಕರಣ ಸೌಲಭ್ಯ ಪಡೆಯಲು ಯೋಜನೆಯನ್ನು ಆದೇಶ ಜಾರಿಗೊಳಿಸಿದೆ.

 

01/01/2023 ರಿಂದ 31/12/2023 ರವರೆಗಿನ ಅವಧಿಯಲ್ಲಿ ಎಲ್ಲಾ ವೃಂದದ ಅರ್ಹ ಅಧಿಕಾರಿ/ ನೌಕರರು ಒಂದು ತಿಂಗಳ ಮುಂಚಿತವಾಗಿ ನೋಟಿಸ್ ನೀಡಿ ಪ್ರಯೋಜನ ಪಡೆಯಬಹುದಾಗಿದೆ. ಅವರ ಇಚ್ಛೆಯಂತೆ ಯಾವುದೇ ತಿಂಗಳಿನಲ್ಲಿ ಗಳಿಕೆ ರಜೆ ನಗದೀಕರಣದ ಪ್ರಯೋಜನವನ್ನು ಪಡೆಯಲು ಅರ್ಹರಾಗಿರುತ್ತಾರೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಆದರೆ, ಗೆಜೆಟೆಡ್ ಅಧಿಕಾರಿಗಳ ಸಂಬಂಧದಲ್ಲಿ 2023ನೇ ಸಾಲಿನ ಗಳಿಕೆ ರಜೆ ನಗದೀಕರಣ ಸೌಲಭ್ಯ ಮಂಜೂರಾತಿ ಉದ್ದೇಶದಿಂದ ಹೆಚ್.ಆರ್.ಎಂ.ಎಸ್ʼನಲ್ಲಿ ಲಭ್ಯವಿರುವ ಅಧಿಕಾರಿಗಳ ಗಳಿಕೆ ರಜೆ ಲೆಕ್ಕಾಚಾರದ ಆಧಾರದ ಮೇಲೆ ನಗದೀಕರಣವನ್ನು ಮಂಜೂರು ಮಾಡಲು ಸಕ್ಷಮ ರಜೆ ಮಂಜೂರಾತಿ ಪ್ರಾಧಿಕಾರಿಗಳು ಕ್ರಮವಹಿಸಬೇಕಾಗಿದೆ ಎಂದು ಸೂಚನೆ ನೀಡಲಾಗಿದೆ. ಮಹಾಲೇಖಪಾಲರು ಲೆಕ್ಕಾಚಾರದ ಬಗ್ಗೆ ವ್ಯತ್ಯಾಸವನ್ನು ತಿಳಿಸಿದರೆ, ಅದನ್ನು ಸರಿಪಡಿಸುವ ಹಾಗೂ ಅದರನ್ವಯದ ಆರ್ಥಿಕ ಸೌಲಭ್ಯಗಳಿಗಾಗಿ ಮಾತ್ರವೇ ಅರ್ಹವಾಗುವ ಷರತ್ತಿಗೆ ಒಳಪಡಿಸಿ ಮಂಜೂರು ಮಾಡಬೇಕುದ್ದು ಎಂದು ನಿರ್ದೇಶನ ನೀಡಲಾಗಿದೆ.

ಇನ್ನು ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ ನಿಯಮ 118 ರಂತೆ ಗಳಿಕೆ ರಜೆ ನಗದೀಕರಣ ನಿಯಂತ್ರಣಕ್ಕೆ ಸಂಬಂಧಿಸಿದ ಇತರೆ ಷರತ್ತುಗಳು ಕೂಡ ಅನ್ವಯವಾಗುತ್ತವೆ. ಈ ಆದೇಶ ಸರ್ಕಾರದಿಂದ ಸಹಾಯಾನುದಾನ/ ಅನುದಾನ ಪಡೆಯುವ ಅಥವಾ ಪಡೆಯದಿರುವ ಕರ್ನಾಟಕ ಸರ್ಕಾರದ ಎಲ್ಲಾ ಸಂಸ್ಥೆಗಳ ಉದ್ಯಮಗಳ ನೌಕರರಿಗೂ ಸಂಬಂಧಿತ ಸಂಸ್ಥೆ/ ಉದ್ಯಮಗಳ ಆರ್ಥಿಕ ಸ್ಥಿತಿಗೊಳಪಟ್ಟು ನಿಯತಗೊಳ್ಳಬೇಕು ಎಂದು ತಿಳಿಸಲಾಗಿದೆ.

Related News

spot_img

Revenue Alerts

spot_img

News

spot_img