ಬೆಂಗಳೂರು, ಆ. 23 : ರಾಜ್ಯ ಸರ್ಕಾರದ ವರ್ಗಾವಣೆ ಕುರಿತು ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಈಗ ಮತ್ತೆ ಡಿವೈಎಸ್ಪಿ ಹಾಗೂ ಇನ್ಸ್ಪೆಕ್ಟರ್ಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ಇತ್ತೀಚೆಗಷ್ಟೇ ಅಧಿಕಾರಿಗಳ ವರ್ಗಾವಣೆ ಮಾಡಿದ್ದ ರಾಜ್ಯ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಗಂಭೀರವಾಗಿ ಆರೋಪ ಮಾಡಿದ್ದವು. ವರ್ಗಾವಣೆಯಲ್ಲಿ ರಾಜ್ಯ ಸರ್ಕಾರ ಲಂಚ ಪಡೆದಿದೆ ಎಂದು ಆರೋಪಿಸಲಾಗಿತ್ತು. ಅಷ್ಟರಲ್ಲಾಗಲೇ ಪುನಃ ಸರ್ಕಾರ 21 ಮಂದಿ ಡಿವೈಎಸ್ಪಿ ಮತ್ತು 66 ಇನ್ಸ್ಪೆಕ್ಟರ್ಗಳನ್ನು ವರ್ಗಾವಣೆಗೊಳಿಸಿದೆ.
ವರ್ಗಾವಣೆ ಪಟ್ಟಿಯಲ್ಲಿ ಯಾರೆಲ್ಲಾ ಇದ್ದಾರೆ ಎಂದು ತಿಳಿಯೋಣ ಬನ್ನಿ. ಎಲ್.ನವೀನ್ ಕುಮಾರ್, ದೇವನಹಳ್ಳಿ ಉಪ ವಿಭಾಗ. ಪ್ರಕಾಶ್ ರಾಥೋಡ್, ಕೆ.ಜಿ.ಹಳ್ಳಿ ಉಪ ವಿಭಾಗ. ಎ.ವಿ.ಲಕ್ಷ್ಮೀ ನಾರಾಯಣ, ಆಡುಗೋಡಿ ಸಂಚಾರ. ಬಿ.ಶಿವಶಂಕರ ರೆಡ್ಡಿ, ಮೈಕೋ ಲೇಔಟ್ ಉಪ ವಿಭಾಗಕ್ಕೆ ವರ್ಗಾಯಿಸಿದ್ದು ಇನ್ನೂ ಹಲವರು ಇದ್ದಾರೆ. ಒಟ್ಟು 21 ಡಿವೈಎಸ್ಪಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.
ಇನ್ನು ನಗರಕ್ಕೆ ವರ್ಗಾವಣೆಯಾದ ಇನ್ಸ್ಪೆಕ್ಟರ್ಗಳ ಪಟ್ಟಿ ಹೀಗಿದೆ. ಎ.ಕೆ.ಗಿರೀಶ್ ಅವರನ್ನು ಕಬ್ಬನ್ ಪಾರ್ಕ್ ಠಾಣೆಗೆ, ಜಿ.ಎಸ್.ರಾಘವೇಂದ್ರ ಅವರನ್ನು ದೇವನಹಳ್ಳಿ ವಿಮಾನ ನಿಲ್ದಾಣದ ಸಂಚಾರ ಠಾಣೆಗೆ, ಎಂ.ಶ್ಯಾಮ್ ಅವರನ್ನು ಎಲೆಕ್ಟ್ರಾನಿಕ್ ಸಿಟಿ ಸಂಚಾರ, ಎಂ.ಚಂದ್ರಶೇಖರ್ ಅವರು ಸಂಪಿಗೆಹಳ್ಳಿ, ಬಿ.ಪಿ.ಗಿರೀಶ್ ಅವರನ್ನು ಸದಾಶಿವನಗರ, ಎಂ.ಎನ್.ರವಿಶಂಕರ್ ಅವರನ್ನು ಕಂಟೋನ್ಮೆಂಟ್ ರೈಲ್ವೆ ಪೊಲೀಸ್ ವೃತ್ತ, ಸಿ.ಬಿ.ಶಿವಸ್ವಾಮಿ ಅವರನ್ನು ವಿದ್ಯಾರಣ್ಯಪುರ, ಎಚ್.ಉಮಾಶಂಕರ್ ಅವರನ್ನು ಬಸವನಗುಡಿ ಸಂಚಾರ, ಟಿ.ಬಿ.ಚಿದಾನಂದಮೂರ್ತಿ ಅವರನ್ನು ಟಿಟಿಬಿಗೆ, ಟಿ.ಎಂ.ಧರ್ಮೇಂದ್ರ ಅವರನ್ನು ಹೈಕೋರ್ಟ್ ಭದ್ರತೆಗೆ, ಎಸ್.ಆರ್.ಗೋವಿಂದರಾಜ್ ಟಿ.ದಾಸರಿ ಅವರನ್ನು ಸಿಟಿ ಎಸ್ಬಿ, ಎಂ.ಆರ್.ಸತೀಶ್ ಅವರನ್ನು ಕೂಡ ಸಿಟಿ ಎಸ್ಬಿ, ಎಂ.ಶಿವಕುಮಾರ್ ಅವರನ್ನು ಎಟಿಸಿ ಬೆಂಗಳೂರು ಸೇರಿದಂತೆ ಒಟ್ಟು 66 ಇನ್ಸ್ಪೆಕ್ಟರ್ಗಳನ್ನು ವರ್ಗಾಯಿಸಲಾಗಿದೆ.
ಬಜ್ಪೆ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ನಿರಂಜನ್ ಕುಮಾರ್ ಅವರನ್ನು ಸಕಲೇಶಪುರ ಗ್ರಾಮಾಂತರ ವೃತ್ತಕ್ಕೆ, ಐಎಸ್ಡಿಯಲ್ಲಿದ್ದ ಸಂದೇಶ್ ಪಿಜಿ ಅವರನ್ನು ಮೂಡುಬಿದಿರೆ ಠಾಣೆಗೆ, ಡಿಸಿಆರ್ಇ ಯಲ್ಲಿದ್ದ ಅಝ್ಮತ್ ಅಲಿ ಅವರನ್ನು ಬಜ್ಪೆ ಠಾಣೆಗೆ, ಸಿಟಿ ಎಸ್ಬಿಯಲ್ಲಿದ್ದ ಮುಹಮ್ಮದ್ ಶರೀಫ್ ಅವರನ್ನು ಮಂಗಳೂರು ಸಂಚಾರ ಉತ್ತರ, ಪಣಂಬೂರಿನ ಸೋಮಶೇಖರ್ ಅವರನ್ನು ಕದ್ರಿ ಠಾಣೆಗೆ, ಕದ್ರಿಯ ಅನಂತ ಪದ್ಮನಾಭ ಅವರನ್ನು ಕರ್ನಾಟಕ ಲೋಕಾಯುಕ್ತಕ್ಕೆ ವರ್ಗಾವಣೆಗೊಳಿಸಲಾಗಿದೆ.
ಇನ್ನು ರಾಜ್ಯ ಸರ್ಕಾರ ಆಗಸ್ಟ್ 01 ರಂದು 211 ಪೊಲೀಸ್ ಇನ್ಸ್ಪೆಕ್ಟರ್ಗಳನ್ನು ವರ್ಗಾವಣೆ ಮಾಡಿ ಆದೇಶಿಸಿತ್ತು. ಇದರಲ್ಲಿ 11 ಪೊಲೀಸ್ ಇನ್ಸ್ಪೆಕ್ಟರ್ಗಳ ವರ್ಗಾವಣೆಯನ್ನು ಸರ್ಕಾರ ಆಗಸ್ಟ್ 02 ರಂದು ಬೆಳಗ್ಗೆ ಏಕಾಏಕಿ ತಡೆ ಹಿಡಿದಿತ್ತು. ಈ ವಿಚಾರ ರಾಜಕೀಯ ವಲಯದಲ್ಲಿ ಬಹಳ ದೊಡ್ಡ ಮಟ್ಟದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಆದರೆ, ಸರ್ಕಾರ ಇದೀಗ ಮತ್ತೆ 66 ಇನ್ಸ್ಪೆಕ್ಟರ್ಗಳನ್ನು ವರ್ಗಾವಣೆ ಮಾಡಿದೆ. ಇವರೊಂದಿಗೆ ಡಿವೈಎಸ್ಪಿ ಗಳ ವರ್ಗಾವಣೆಯನ್ನೂ ಮಾಡಿದೆ.