22.2 C
Bengaluru
Wednesday, January 22, 2025

CM ಆದ ಬಳಿಕ Siddaramaiah ಮೊದಲ ಬಾರಿಗೆ PM ಮೋದಿ ಭೇಟಿ |

#CM, #PM #Narendra Modi, #Siddaramaiah

ಹೊಸದಿಲ್ಲಿ: ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಸ್ಟ್ 3 ಗುರುವಾರದಂದು ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.ಸಿದ್ದರಾಮಯ್ಯ ಅವರು ಸಂಸತ್ತಿನ ಆವರಣದಲ್ಲಿ ಮೋದಿ ಅವರನ್ನು ಭೇಟಿ ಮಾಡಿದರು. ಮೋದಿಯವರಿಗೆ ಗಂಧದ ಹಾರ ಹಾಕಿ, ಮೈಸೂರು ಪೇಟ ಧರಿಸಿ, ಅಂಬಾರಿ ಕೊಟ್ಟು ಸನ್ಮಾಸಿದರು.ಮೇ ತಿಂಗಳಲ್ಲಿ ಕರ್ನಾಟಕದ ಮುಖ್ಯಮಂತ್ರಿಯಾದ ನಂತರ ಅವರು ಪ್ರಧಾನಿಯೊಂದಿಗಿನ ಮೊದಲ ಭೇಟಿಯಾಗಿದೆ.ಈ ವೇಳೆ ರಾಜ್ಯಕ್ಕೆ ಬರಬೇಕಾದ ಅನುದಾನಗಳ ಕುರಿತು ಚರ್ಚೆ ನಡೆಸಿದರು ಎನ್ನಲಾಗಿದೆ.ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿ,ಮೈಸೂರಿನಲ್ಲಿ ಭಾರತೀಯ ವಾಯುಸೇನೆಯಿಂದ ವೈಮಾನಿಕ ಪ್ರದರ್ಶನವನ್ನು ಆಯೋಜಿಸುವಂತೆ ಮನವಿ ಮಾಡಿದರು.2017 ಮತ್ತು 2019 ರಲ್ಲಿ ಮೈಸೂರಿನ ಟಾರ್ಚ್ ಲೈಟ್ ಪರೇಡ್ ಮೈದಾನದಲ್ಲಿ ಐಎಎಫ್ ವೈಮಾನಿಕ ಪ್ರದರ್ಶನಗಳನ್ನು ನಡೆಸಿದೆ ಎಂದು ಮುಖ್ಯಮಂತ್ರಿ ಹೇಳಿದರು.76ನೇ ವಸಂತಕ್ಕೆ ಕಾಲಿಟ್ಟಿರುವ ಸಿದ್ದರಾಮಯ್ಯ ಅವರಿಗೆ ಇಲ್ಲಿನ ಕರ್ನಾಟಕ ಭವನದಲ್ಲಿ ಪಕ್ಷದ ಹಲವು ಮುಖಂಡರು ಶುಭಾಶಯ ಕೋರಿದ್ದಾರೆ.ಸಂಸತ್ ಭವನ ಭೇಟಿಯ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಎಲ್ಲರೂ ಚೆನ್ನಾಗಿದ್ದಾರೆ ನನ್ನ ಮತ್ತು ಡಿಕೆ ಶಿವಕುಮಾರ್ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ, ನಾವು ಒಟ್ಟಿಗೆ ಇದ್ದೇವೆ” ಎಂದರು.ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳೊಂದಿಗೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಸರ್ಕಾರದ ದೆಹಲಿ‌ ಪ್ರತಿನಿಧಿ ಟಿ.ಬಿ. ಜಯಚಂದ್ರ ಉಪಸ್ಥಿತರಿದ್ದರು.

Related News

spot_img

Revenue Alerts

spot_img

News

spot_img