ಬೆಂಗಳೂರು, ಏ. 25 : ಕರ್ನಾಟಕದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇವೆ. ಮೇ 10ರಂದು ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಯ ಮತದಾನ ನಡೆಯಲಿದೆ. ಮತದಾರರಿಗೆ ತಮ್ಮ ಹಕ್ಕು ಚಲಾಯಿಸಲು ಅಗತ್ಯ ಸೌಲಭ್ಯ ಕಲ್ಪಿಸುವುದು ಒಂದು ಸಾಹಸದ ಕೆಲಸ. ಬದಲಾದ ರಾಜಕೀಯ ಸ್ವರೂಪ, ಮತದಾರರ ಮನೋಭಾವ, ತಾಂತ್ರಿಕ ಬದಲಾವಣೆಗೆ ತಕ್ಕಂತೆ ನಿಯಮಾವಳಿಗಳನ್ನು ರೂಪಿಸುತ್ತ ಬಂದಿದೆ. ಚುನಾವಣೆಯಲ್ಲಿ ಪ್ರತಿಯೊಬ್ಬರೂ ತಪ್ಪದೇ ಮತದಾನ ಮಾಡುವಂತೆ ನೋಡಿಕೊಳ್ಳು ಚುನಾವಣಾಧಿಕಾರಿಗಳು ಮುಂದಾಗಿದ್ದಾರೆ.
224 ಕ್ಷೇತ್ರಗಳನ್ನು ಹೊಂದಿರುವ ರಾಜ್ಯದಲ್ಲಿ ಎಸ್‌ಸಿಗಳಿಗೆ 36 ಮತ್ತು ಎಸ್‌ಟಿಗಳಿಗೆ 15 ಸ್ಥಾನಗಳನ್ನು ಮೀಸಲಿಡಲಾಗಿದೆ. 2.59 ಮಹಿಳಾ ಮತದಾರರು ಸೇರಿದಂತೆ 5.21 ಕೋಟಿ ಮತದಾರರಿದ್ದಾರೆ. ಈ ಸಂಖ್ಯೆಯಲ್ಲಿ 16,976 ಶತಾಯುಷಿಗಳು, 4,699 ತೃತೀಯಲಿಂಗಿಗಳು ಮತ್ತು 9.17 ಲಕ್ಷ ಮೊದಲ ಬಾರಿಗೆ ಮತದಾರರು ಸೇರಿದ್ದಾರೆ. ಅಲ್ಲದೆ, 80 ವರ್ಷಕ್ಕಿಂತ ಮೇಲ್ಪಟ್ಟ 12.15 ಲಕ್ಷ ಮತದಾರರು ಮತ್ತು 5.55 ಲಕ್ಷ ವಿಕಲಚೇತನರು ಇದ್ದಾರೆ.
ಚುನಾವಣಾ ಅಕ್ರಮ ತಡೆಗೆ 2400 ವೀಕ್ಷಕ ಸಿಬ್ಬಂದಿಯನ್ನು ನಿಯೋಜನೆ ಮಾಡಲು ಚುನಾವಣಾ ಆಯೋಗ ಉದ್ದೇಶಿಸಿದ್ದು, ಚುನಾವಣೆಗಾಗಿ ಒಟ್ಟು 2016 ಫ್ಲೈಯಿಂಗ್ ಸ್ಕ್ಯಾಡ್‌ಗಳನ್ನು ನಿಯೋಜಿಸಲಿದೆ. ಜೊತೆಗೆ 19 ಜಿಲ್ಲೆಗಳಲ್ಲಿ 171 ಚೆಕ್‌ಪೋಸ್ಟ್‌ಗಳನ್ನು ನಿರ್ಮಾಣ ಮಾಡಲಾಗಿದೆ. ಇನ್ನು
80 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು ವಿಕಲಚೇತನರಿಗೆ ಮನೆಯಿಂದ ಮತ ಚಲಾಯಿಸುವ ಸೌಲಭ್ಯವನ್ನು ಪರಿಚಯಿಸಲಾಗಿದೆ. ಮೊದಲ ಬಾರಿಗೆ ಇಸಿಐ 80 ವರ್ಷ ಮೇಲ್ಪಟ್ಟವರಿಗೆ ಈ ಸೌಲಭ್ಯವನ್ನು ನೀಡಲು ಹೊರಟಿದೆ. ವಿಧಾನಸಭೆ ಚುನಾವಣೆ ಅಂಗವಾಗಿ ಇದೇ ಪ್ರಪ್ರಥಮ ಬಾರಿಗೆ ಹಲವರಿಗೆ ಮನೆಯಿಂದಲೇ ಮತ ಹಾಕುವುದಕ್ಕೆ ಅವಕಾಶ ಮಾಡಿಕೊಟ್ಟಿದೆ.
ಇನ್ನು ಚುನಾವಣಾ ಕಾರ್ಯದಲ್ಲಿ ತೊಡಗಿರುವ ಸಿಬ್ಬಂದಿಗಳು, ಯೋಧರು ಅಂಚೆ ಇಲಾಖೆ ಮೂಲಕ ಮತದಾನ ಮಾಡಲು ಅವಕಾಶ ನೀಡಲಾಗಿದೆ. ಗೈರು ಹಾಜರಿ ಮತದಾರರಿಗೆ ಮತ ಚಲಾಯಿಸಲು ಮೇ 2 ರಿಂದ 4 ರವರೆಗೂ ಕಾಲವಕಾಶವನ್ನು ನೀಡಲಾಗಿದೆ. ಬೆಂಗಳೂರಿನ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಅಗತ್ಯ ಸೇವೆಯಡಿ ಬರುವ ಗೈರು ಹಾಜರಿ ಮತದಾರರಿಗೆ ಪೋಸ್ಟಲ್ ವೋಟಿಂಗ್ ಸೆಂಟರ್ ತೆರೆಯವ ದಿನಾಂಕವನ್ನು ನಿಗದಿಪಡಿಸಿದೆ. ಅಂದರೆ ದಿನಾಂಕ 2/5/2023 ರಿಂದ 4/5/2023ರವರೆಗೆ ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನ ಮಾಡಬಹುದಾಗಿದೆ.