22.9 C
Bengaluru
Friday, July 5, 2024

ಚುನಾವಣೆ ಅಕ್ರಮ ಹಣ ಪತ್ತೆ: 108 ಕೋಟಿಗೂ ಅಧಿಕ ಹಣ ಜಪ್ತಿ ಮಾಡಿರುವ ಅಧಿಕಾರಿಗಳು

ಬೆಂಗಳೂರು, ಏ. 11 : ಕರ್ನಾಟಕ ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಾಗಿ 13 ದಿನಗಳು ಕಳೆದಿವೆ. ಅಷ್ಟರಲ್ಲಾಗಲೇ ಕೋಟಿಗಟ್ಟಲೆ ಅಕ್ರಮ ಹಣ ಪತ್ತೆಯಾಗಿದ್ದು, ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ವಿಧಾನಸಭೆ ಚುನಾವಣೆಯ ರಂಗು ರಾಜ್ಯದಲ್ಲಿ ಜೋರಾಗಿದೆ. ಮತಬೇಟೆಗೆ ರಾಜಕಾರಣಿಗಳು ಇನ್ನಿಲ್ಲದ ಸರ್ಕಸ್ ಗಳನ್ನು ಮಾಡುತ್ತಿದ್ದಾರೆ.

ಪ್ರತಿ ಬಾರಿಯಂತೆ ಈ ಬಾರಿಯೂ ಮಹಿಳೆಯರಿಗೆ ಸೀರೆ, ಮೂಗುಬಟ್ಟು, ದಿನಸಿ, ಕುಕ್ಕರ್, ತವಾ, ಸ್ಟೌವ್, ಮಿಕ್ಸಿ ಕೊಟ್ಟರೆ, ಪುರುಷರಿಗೆ ದುಡ್ಡು, ಮದ್ಯ ಹಾಗೂ ಬಾಡೂಟದ ಕಾರ್ಯಕ್ರಮಗಳು ಜೋರಾಗಿಯೇ ನಡೆಯುತ್ತಿವೆ. ನೀತಿ ಸಂಹಿತೆ ಜಾರಿಯಾಗಿದ್ದರೂ ಕೂಡ ತಮ್ಮ ಮತಬ್ಯಾಮಕ್ ಅನ್ನು ತುಂಬಿಸಿಕೊಳ್ಳಲು ಮರೆ ಮರೆಯಲ್ಲಿ ಏನೆಲ್ಲಾ ಮಾಡಬೇಕೋ ಎಲ್ಲವನ್ನು ಮಾಡುತ್ತಿದ್ದಾರೆ. ಆದರೆ, ಚಿನಾವಣೆ ಅಧಿಕಾರಿಗಳು ಹಾಗೂ ಪೊಲೀಸರು ಸುಮ್ಮನೆ ಕೂರದೆ, ರಾಜ್ಯದ ಹಲವೆಡೆ ಚೆಕ್ ಪೋಸ್ಟ್ ಗಳನ್ನು ಹಾಕಿದ್ದಾರೆ. ಎಲ್ಲಾ ವಾಹನಗಳನ್ನು ತಪಾಸಣೆ ಮಾಡುತ್ತಿದ್ದಾರೆ.

ಚಾಪೆ ಕೆಳಗೆ ನುಸಿಯುವ ರಾಜಕಾರಣಿಗಳ ವಿರುದ್ಧ ಅಧಿಕಾರಿಗೆ ರಂಗೋಲಿ ಕೆಳಗೆ ನುಸುಳುವಷ್ಟು ಶಾರ್ಪ್ ಆಗಿದ್ದಾರೆ. ಹಣದ ವಾಸನೆ ಬಂದ ವಾಹನಗಳನ್ನೆಲ್ಲಾ ಚೆಕ್ ಮಾಡಿ ಕೇವಲ 13ದಿನಗಳಲ್ಲಿ 108 ಕೋಟಿಗೂ ಅಧಿಕ ಅಕ್ರಮ ಹಣವನ್ನು ಜಪ್ತಿ ಮಾಡಿ ಹಲವರನ್ನು ವಶಕ್ಕೆ ಪಡೆದಿದ್ದಾರೆ. ಬೆಳಗಾವಿ ಸೇರಿದಂತೆ ರಾಜ್ಯದ ಹಲವು ಕಡೆಗಳಲ್ಲಿ ಬಸ್ ನಲ್ಲಿ ಸಾಗಿಸುತ್ತಿದ್ದ ಹಣವನ್ನು ಚುನಾವಣಾಧಿಕಾರಿಗಳು ಜಪ್ತಿ ಮಾಡಿದ್ದಾರೆ. ಅಷ್ಟೇ ಅಲ್ಲದೇ, ಸಾವಿರಾರು ಕುಕ್ಕರ್ ಹಾಗೂ ತವಾಗಳನ್ನು ಕೂಡ ವಶಕ್ಕೆ ಪಡೆದಿದ್ದಾರೆ.

2018ರ ವಿಧಾನಸಭೆ ಚುನಾವಣೆಯಲ್ಲಿ ವಶಕ್ಕೆ ಪಡೆದ ಮೊತ್ತಕ್ಕಿಂತಲೂ ಇದು 5 ಪಟ್ಟು ಹೆಚ್ಚಿದ್ದು, ಆರಂಭದಲ್ಲೇ ಇಷ್ಟು ಹಣವನ್ನು ವಶಕ್ಕೆ ಪಡೆದಿದ್ದು, ಇನ್ನು ಚುನಾವಣೆ ಮುಕ್ತಾಯಗೊಳ್ಳುವಷ್ಟರಲ್ಲಿ ಇನ್ನೆಷ್ಟು ಅಕ್ರಮ ಹಣ ಪತ್ತೆಯಾಗುತ್ತದೋ ಗೊತ್ತಿಲ್ಲ. ಬಿಜೆಪಿ, ಜೆಡಿಎಸ್, ಕಾಂಗ್ರಸ್ ಹಾಗೂ ಆಪ್ ಪಕ್ಷಗಳು ರಾಜ್ಯದಲ್ಲಿ ಗೆಲ್ಲಲು ಸಾಕಷ್ಟು ಕಸರತ್ತುಗಳನ್ನು ಮಾಡುತ್ತಿದ್ದಾರೆ.

Related News

spot_img

Revenue Alerts

spot_img

News

spot_img