ಬೆಂಗಳೂರು, ಏ. 29 : ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಕೊನೆಯ ಹಂತದತ್ತ ಸಾಗುತ್ತಿದೆ. 80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಹಾಗೂ ವಿಕಲ ಚೇತನರಿಗಾಗಿ ಬ್ಯಾಲೆಟ್ ಪೇಪರ್ ಮತದಾನವನ್ನು ಇಂದಿನಿಂದ ಪ್ರಾರಂಭಿಸಲಾಗಿದೆ. ಅಧಿಕಾರಿಗಳು ಮನೆ ಮನೆಗೆ ತೆರಳಿ ಬ್ಯಾಲೆಟ್ ಪೇಪರ್ ಮತದಾನವನ್ನು ಮಾಡಿಸುತ್ತಿದ್ದಾರೆ. 12ಡಿ ಅಡಿ ಅರ್ಜಿ ಸಲ್ಲಿಸಿರುವವರ ಮನೆಗೆ ತೆರಳಿ ಪೋಸ್ಟಲ್ ಬ್ಯಾಲೆಟ್ ಮೂಲಕ ಮತದಾನ ಮಾಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ವೀಡಿಯೋ ಮಾಡಲಾಗುತ್ತದೆ. ಆದರೆ ಯಾರಿಗೆ ಮತ ಹಾಕುತ್ತಿದ್ದಾರೆ ಎಂಬುದನ್ನು ಮಾತ್ರವೇ ರೆಕಾರ್ಡ್ ಮಾಡುವುದಿಲ್ಲ.
ಮತದಾನವನ್ನು ಮಾಡಿಸಲು ಆರ್.ಒ.ಗಳು ರೂಟ್ ಮ್ಯಾಪ್, ಸಮಯ ಹಾಗೂ ದಿನಾಂಕವನ್ನು ನಿಗದಿ ಮಾಡಿ ನಿರ್ದಿಷ್ಟ ವಿಳಾಸಕ್ಕೆ ತೆರಳಿ ಮತದಾನ ಮಾಡಿಸಲಾಗುವುದು. ಈ ಮತದಾನ ಪ್ರಕ್ರಿಯೆಯಲ್ಲಿ ಪ್ರಿಸೈಡಿಂಗ್ ಅಧಿಕಾರಿಗಳು, ಮೈಕ್ರೋ ಅಬ್ಸರ್ವರ್ಸ್, ಪೋಲಿಂಗ್ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ, ವಿಡಿಯೋ ಗ್ರಾಫರ್ ಹಾಗೂ ಗ್ರೂಪ್ ಡಿ ಸಿಬ್ಬಂದಿ ಇರುತ್ತಾರೆ. ಇನ್ನು ಈ ಮತದಾನದ ವೇಳೆ ಯಾವುದೇ ರೀತಿಯಲ್ಲೂ ಪ್ರಭಾವ ಬೀರಲು ಅವಕಾಶವಿರುವುದಿಲ್ಲ.
ಮತದಾನ ಮಾಡುವ ವ್ಯಕ್ತಿ ಅಂಧರಾಗಿದ್ದರೆ ಇಲ್ಲವೇ ಆ ವ್ಯಕ್ತಿ ಹಾಸಿಗೆ ಹಿಡಿದಿದ್ದರೆ, ಅಂತಹವರು ಕೂಡ ಮತದಾನ ಮಾಡಲು ಬಯಸಿದ್ದರೆ ಮಾತ್ರವೇ 18 ವರ್ಷ ತುಂಬಿದಔರು ಮತದಾನಕ್ಕೆ ಅಸಿಸ್ಟೆಂಟ್ ಆಗಿ ನೇಮಿಸಿಕೊಳ್ಳಲು ಅವಕಾಶ ಇರುತ್ತದೆ. ಬ್ಯಾಲೆಟ್ ಪೇಪರ್ ಮತದಾನವನ್ನು ಏ.29ರಿಂದ ಮೇ 6ರವರೆಗೆ ನಡೆಯಲಿದೆ. ಪ್ರತಿ ದಿನವೂ ಅಧಿಕಾರಿಗಳು ಮನೆ ಮನೆಗೆ ತೆರಳಿ ಬ್ಯಾಲೆಟ್ ಪೇಪರ್ ನೀಡಿ ಮತದಾನ ಮಾಡಿಸುತ್ತಾರೆ.
ಮೇ 10ರಂದು ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಯ ಮತದಾನ ನಡೆಯಲಿದೆ. ಇನ್ನು ಚುನಾವಣಾ ಕಾರ್ಯದಲ್ಲಿ ತೊಡಗಿರುವ ಸಿಬ್ಬಂದಿಗಳು, ಯೋಧರು ಅಂಚೆ ಇಲಾಖೆ ಮೂಲಕ ಮತದಾನ ಮಾಡಲು ಅವಕಾಶ ನೀಡಲಾಗಿದೆ. ಗೈರು ಹಾಜರಿ ಮತದಾರರಿಗೆ ಮತ ಚಲಾಯಿಸಲು ಮೇ 2 ರಿಂದ 4 ರವರೆಗೂ ಕಾಲವಕಾಶವನ್ನು ನೀಡಲಾಗಿದೆ.