20 C
Bengaluru
Tuesday, July 9, 2024

7ನೇ ರಾಜ್ಯ ವೇತನ ಆಯೋಗ ಹೊರಡಿಸಿರುವ ಪಶ್ನಾವಳಿಗಳಿಗೆ ಉತ್ತರ ನೀಡಲು ಕಾಲಾವಕಾಶ ವಿಸ್ತರಣೆ

ಬೆಂಗಳೂರು, ಫೆ. 15 : ಸರ್ಕಾರಿ ನೌಕರರ ವೇತನ ಮತ್ತು ಭತ್ಯೆಗಳ ಪರಿಷ್ಕರಣೆಗಾಗಿ ನಿವೃತ್ತ ಮುಖ್ಯ ಕಾರ್ಯದರ್ಶಿ ಸುಧಾಕರ್ ರಾವ್ ಅಧ್ಯಕ್ಷತೆಯಲ್ಲಿ 7ನೇ ರಾಜ್ಯ ವೇತನ ಆಯೋಗವು ರಚನೆಯಾಗಿದೆ. ಈ ಆಯೋಗವು ಕಳೆದ ಜ.17 ರಂದು ಪ್ರಶ್ನಾವಳಿ ಬಿಡುಗಡೆ ಮಾಡಿತ್ತು. ಇದರಲ್ಲಿ ಬಡ್ತಿ, ಭತ್ಯೆ, ವೇತನ, ರಜೆ ದಿನ, ಪಿಂಚಣಿ ಸೇರಿದಂತೆ ಹಲವು ಅಂಶಗಳು ಒಳಗೊಂಡಿತ್ತು. ಸಾರ್ವಜನಿಕರು, ಸೇವಾ ಸಂಘಗಳು, ಸರ್ಕಾರಿ ನೌಕರರು, ಇಲಾಖೆಗಳು, ಸಂಸ್ಥೆಗಳಿಗೆ ಆಯೋಗವು ಪ್ರಶ್ನೆಗಳನ್ನು ಕೇಳಿತ್ತು. ಇದಕ್ಕೆ ಉತ್ತರವನ್ನು ಸಲ್ಲಿಸಲು ಫೆ.10-02-2023 ಕೊನೆಯ ದಿನಾಂಕ ಎಂದು ಹೇಳಿತ್ತು.

ಆದರೆ ಈಗ 7ನೇ ರಾಜ್ಯ ವೇತನ ಆಯೋಗವು ಹೊರಡಿಸಿರುವ ಪಶ್ನಾವಳಿಗಳಿಗೆ ಉತ್ತರಿಸಲು ಕಾಲಾವಕಾಶವನ್ನು ವಿಸ್ತರಿಸಿ ಮಾಹಿತಿ ನೀಡಿದೆ. ರಾಜ್ಯ ಸರ್ಕಾರವು ಸರ್ಕಾರಿ ನೌಕರರು, ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರು, ಸ್ಥಳೀಯ ಸಂಸ್ಥೆಗಳ ನೌಕರರು ಹಾಗೂ ವಿಶ್ವವಿದ್ಯಾಲಯಗಳ ಬೋಧಕೇತರ ಸಿಬ್ಬಂದಿಗಳ ವೇತನ, ತುಟ್ಟಿ ಭತ್ಯೆ, ಹಾಗೂ ಇತರ ಸೌಲಭ್ಯಗಳ ಬಗೆ, ಪರಿಶೀಲಿಸಿ, ಪರಿಷ್ಕರಿಸಿ ಸರ್ಕಾರಕ್ಕೆ ವರದಿ ನೀಡಲು ದಿನಾಂಕ: 19.11.2022 ರಲ್ಲಿ 7ನೇ ರಾಜ್ಯ ವೇತನ ಆಯೋಗವನ್ನು ರಚಿಸಿದೆ.

ಆಯೋಗಕ್ಕೆ ವಹಿಸಲಾಗಿರುವ ಪರಿಶೀಲನಾಂಶಗಳ ಕುರಿತು ಸಾರ್ವಜನಿಕರು, ಸಮಾ ಸಂಘಗಳು ಸರ್ಕಾರಿ ನೌಕರರು ಹಾಗೂ ಸಂಘ ಸಂಸ್ಥೆಗಳಿಂದ ಮುಕ್ತ ಸಲಹೆ, ಅನಿಸಿಕೆ ಅಲ್ಲದೇ ಇಲಾಖೆಗಳಿಂದ ಹಾಗೂ ಮುಕ್ತ ಸಲಹೆ ಪಡೆಯುವ ಉದ್ದೇಶವನ್ನು ಗಮನದಲ್ಲಿಟ್ಟುಕೊಂಡು ಆಯೋಗವು ದಿನಾಂಕ: 17.01.2023ರ ಅಧಿಕೃತ ಜ್ಞಾಪನದಲ್ಲಿ ವಿವಿಧ ಪುಣ್ಯಾವಳಿಗಳನ್ನು ರಚಿಸಿದ್ದು. ಸಂಬಂಧಪಟ್ಟ ಪ್ರಶ್ನಾವಳಿಗಳಿಗೆ ಕಾರ್ಯದರ್ಶಿಗಳು, ಇಲಾಖಾ ಮುಖ್ಯಸ್ಥರು, ವಿಶ್ವವಿದ್ಯಾ ನಿಲಯಗಳು, ಅನುದಾನಿತ ಶಿಕ್ಷಣ ಸಂಸ್ಥೆಗಳು ಸ್ಥಳೀಯ ಸಂಸ್ಥೆಗಳು, ಸರ್ಕಾರಿ ನೌಕರರು, ನಿವೃತ್ತ ವೇತನದಾರರು ಹಾಗೂ ಆಸಕ್ತ ಸಾರ್ವಜನಿಕರು ಉತ್ತರಗಳನ್ನು ತಮ್ಮ ಅನಿಸಿಕೆ ಹಾಗೂ ಮುಕ್ತ ಸಲಹೆಗಳನ್ನು ದಿನಾಂಕ: 10.02.2023 ರೊಳಗೆ ಸಲ್ಲಿಸುವಂತೆ ಕೋರಲಾಗಿತ್ತು.

ಆಯೋಗವು ಹೊರಡಿಸಿದ ಪ್ರಶ್ನಾವಳಿಗಳಿಗೆ ಸಂಬಂಧಿಸಿದ ಎಲ್ಲ ವರ್ಗಗಳಿಂದ ಪ್ರತಿಕ್ರಿಯ ಹಾಗೂ ಉತ್ತರಗಳು ಸ್ವೀಕೃತವಾಗಿರುವುದಿಲ್ಲ. ಅಲ್ಲದೇ ಇಲಾಖೆಗಳು ಹಾಗೂ ಸಂಘಸಂಸ್ಥೆಗಳಿಂದ ಉತ್ತರ ಹಾಗೂ ಸಲಹೆಗಳನ್ನು ಸಲ್ಲಿಸಲು ಹೆಚ್ಚುವರಿ ಕಾಲಾವಕಾಶವನ್ನು ಕೋರಿರುವುದನ್ನು ಆಯೋಗವು ಗಮನಿಸಿದ್ದು, ಕಾಲಾವಕಾಶವನ್ನು ವಿಸ್ತರಿಸುವುದು ಅಗತ್ಯವೆಂದು ಆಯೋಗವು ಮನಗೊಂಡಿದ್ದು, ಪ್ರಶ್ನಾವಳಿಗಳಿಗೆ ಉತ್ತರಿಸಲು ಈ ಹಿಂದೆ ನಿಗದಿಪಡಿಸಿದ ಕಾಲಾವಧಿಯನ್ನು ದಿನಾಂಕ: 28.02 2021 ವರೆಗೆ ಆಯೋಗವು ವಿಸ್ತರಿಸಿದೆ. ಈ ವಿಸ್ತರಿತ ಅವಧಿಯೊಳಗೆ ಉತ್ತರ ಹಾಗೂ ಅನಿಸಿಕಗಳನ್ನು ಆಯೋಗಕ್ಕೆ ಸಲ್ಲಿಸುವಂತೆ ಕೋರಿಕೊಂಡಿದೆ.

Related News

spot_img

Revenue Alerts

spot_img

News

spot_img