26.9 C
Bengaluru
Friday, July 5, 2024

ರಾಜ್ಯದ ಬ್ಯಾಂಕುಗಳಲ್ಲಿ ಇನ್ಮುಂದೆ ಕನ್ನಡ ಕಡ್ಡಾಯ

ಬೆಂಗಳೂರು: ಬ್ಯಾಂಕ್‌ನಲ್ಲಿ ಇನ್ಮುಂದೆ ಕನ್ನಡ ಕಡ್ಡಾಯ ರಾಜ್ಯದಲ್ಲಿ ಬ್ಯಾಂಕ್ ಸಿಬ್ಬಂದಿಗಳು ಇನ್ಮುಂದೆ ಗ್ರಾಹಕರೊಂದಿಗೆ ಕಡ್ಡಾಯವಾಗಿ ಕನ್ನಡ ವ್ಯವಹಾರ ಮಾಡಬೇಕೆಂದು ರಾಜ್ಯ ಸರ್ಕಾರ ಶೀಘ್ರದಲ್ಲಿ ಆದೇಶ ಹೊರಡಿಸಲಿದೆ. ಕನ್ನಡ ಭಾಷೆ ಗೊತ್ತಿಲ್ಲದ ಬ್ಯಾಂಕ್ ಅಧಿಕಾರಿಗಳೊಂದಿಗೆ ವ್ಯವಹರಿಸಲು ಹಳ್ಳಿಯ ಜನರು ಬಹಳಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಈ ವಲಯದಲ್ಲಿ ಕನ್ನಡ ಕಡ್ಡಾಯ ಮಾಡಬೇಕೆಂದು ಸರ್ಕಾರಕ್ಕೆ ನೂರಾರು ಮನವಿಗಳು ಬಂದಿದ್ದವು. 2022ರ ಮಸೂದೆಯಂತೆಯೇ ಸರ್ಕಾರ ಈ ಆದೇಶ ಹೊರಡಿಸುತ್ತದೆ ಎಂದು ಕೆಡಿಎ ಕಾರ್ಯದರ್ಶಿ ಸಂತೋಷ್ ಹಾನಗಲ್ ತಿಳಿಸಿದ್ದಾರೆ.ನೂರಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಬ್ಯಾಂಕ್‌ಗಳು ಕನ್ನಡ ಕೋಶ ಎಂಬ ಹಿರಿಯ ಉದ್ಯೋಗಿಗಳ ನೇತೃತ್ವದಲ್ಲಿ ಘಟಕ ಸ್ಥಾಪಿಸಿ ದೈನಂದಿನ ಕೆಲಸ ಕಾರ್ಯಗಳಲ್ಲಿ ಬಳಕೆಯಾಗುವ ಕನ್ನಡ ಜ್ಞಾನವನ್ನು ಕಲಿಸುವ ಯತ್ನ ಮಾಡಬೇಕು.ಸ್ಥಳೀಯ ಭಾಷೆ ಗೊತ್ತಿಲ್ಲದ ಬ್ಯಾಂಕ್ ಅಧಿಕಾರಿಗಳೊಂದಿಗೆ ವ್ಯವಹರಿಸುವಾಗ ಹಳ್ಳಿಗಳಿಂದ ಬರುವ ಅನೇಕರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂಬುದು ರಾಜ್ಯದ ಹೋರಾಟಗಾರರು ಸೇರಿ ಗ್ರಾಹಕರ ಆರೋಪವೂ ಆಗಿತ್ತು. ಇದಲ್ಲದೆ ಹಲವು ಕಡೆ ಕನ್ನಡ ಬಾರದ ಸಿಬ್ಬಂದಿ ಹಾಗೂ ಗ್ರಾಹಕರ ನಡುವೆ ಗಲಾಟೆಗಳು ನಡೆಯುತ್ತಿದ್ದ ಘಟನೆಗಳು ಸಹ ವರದಿಯಾಗುತ್ತಿದ್ದವು.

Related News

spot_img

Revenue Alerts

spot_img

News

spot_img