20.2 C
Bengaluru
Thursday, December 19, 2024

ವಾಣಿಜ್ಯ ಮಳಿಗೆ ಬೋರ್ಡ್‌ನಲ್ಲಿ ಕನ್ನಡ ಕಡ್ಡಾಯ; ಫೆ. 28ರ ಗಡುವು ನೀಡಿದ BBMP ಕಮಿಷನರ್​

ಬೆಂಗಳೂರು : ಫೆಬ್ರವರಿ 28, 2024 ರೊಳಗೆ ಬೆಂಗಳೂರಿನ ಎಲ್ಲಾ ವಾಣಿಜ್ಯ ಸಂಸ್ಥೆಗಳು(Commercial establishment) ತಮ್ಮ ಹೆಸರಿನ ಬೋರ್ಡ್‌ಗಳಲ್ಲಿ ಕನ್ನಡವನ್ನು ಪ್ರಮುಖವಾಗಿ ಬಳಸಬೇಕು – ಶೇಕಡಾ 60 ರಷ್ಟು – ಅಥವಾ ತಮ್ಮ ಟ್ರೇಡ್ ಲೈಸೆನ್ಸ್ ಅನ್ನು ಕಳೆದುಕೊಳ್ಳಬೇಕು ಮತ್ತು ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು BBMP ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸೂಚನೆ ನೀಡಿದ್ದಾರೆ.ಸರಕಾರಿ ಆದೇಶಗಳು ಜಾರಿಯಲ್ಲಿದ್ದರೂ ರಾಜ ಧಾನಿ ಬೆಂಗಳೂರಿನ ಇಂಗ್ಲಿಷ್ ವ್ಯಾಮೋಹದ ಕಡಿವಾಣಕ್ಕೆ ಮುಂದಾಗಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(BBMP) ಇನ್ನು ಮುಂದೆ ಕನ್ನಡದಲ್ಲೇ ನಾಮಫಲಕಗಳನ್ನು ಅಳವಡಿಸುವಂತೆ ಆಜ್ಞೆ ಜಾರಿಗೊಳಿಸಿದೆ. ಆದರೆ ಫೆಬ್ರವರಿ 28ರವರೆಗೆ ಕಾಲಾವಕಾಶ ನೀಡಿರುವುದು ಇಂಗ್ಲಿಷ್ ಮೋಹಿಗಳು ನಿಟ್ಟುಸಿರು ಬಿಡುವಂತೆ ಮಾಡಿದೆ. ಬಿಬಿಎಂಪಿ(BBMP) ವ್ಯಾಪ್ತಿಯಲ್ಲಿ ಬರುವ ವಾಣಿಜ್ಯ ಮಳಿಗೆಗಳಲ್ಲಿ ಫೆಬ್ರವರಿ 28 ರೊಳಗಾಗಿ ಶೇ. 60 ರಷ್ಟು ಕನ್ನಡ ಭಾಷೆ ಇರ ನಾಮಫಲಕಗಳನ್ನು ಅಳವಡಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದೆಂದು ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ಖಡಕ್ ಎಚ್ಚರಿಕೆಯನ್ನು ನೀಡಿದ್ದಾರೆ,ಮಾಲ್​​​, ಹೋಟೆಲ್​ ಸೇರಿದಂತೆ ಎಲ್ಲರಿಗೂ ಸೂಚನೆ ಕೊಡ್ತಿದ್ದೇವೆ. ಫೆಬ್ರವರಿ 28ರವರೆಗೂ ಬದಲಾವಣೆಗೆ ಅವಕಾಶ ಕೊಡ್ತೇವೆ, ಆನಂತರವೂ ಅನ್ಯ ಭಾಷೆ ಬೋರ್ಡ್ ಬದಲಿಸದೇ ಇದ್ದರೆ ಕ್ರಮ ಜರುಗಿಸಲಾಗುತ್ತದೆ.

ಮೊದಲಿಗೇ ಆಯಾ ಮಾಲ್​​, ಅಂಗಡಿ, ಉದ್ಯಮಿಗಳಿಗೆ ನೋಟಿಸ್​ ನೀಡಲಾಗುತ್ತದೆ, ನೋಟಿಸ್​ ಉಲ್ಲಂಘನೆ ಮಾಡಿದವರ ಮೇಲೆ ಶಿಸ್ತಿನ ಕ್ರಮ ಕೈಗೊಳ್ತೇವೆ.ಕನ್ನಡ ನಾಮಫಲಕ ಅಳವಡಿಕೆ ಕಡ್ಡಾಯ ಎಂದು ಸರ್ಕಾರದ ಆದೇಶ ಇದೆ. ಈಗಾಗಲೇ ಮುಖ್ಯ ರಸ್ತೆ, ಉಪ ರಸ್ತೆಗಳ ನಾಮಫಲಕ ಸರ್ವೇ(Servey) ಮಾಡಲಾಗುವುದು. ನಗರದಲ್ಲಿ ಆರ್ಟಿರಿಯಲ್ ಹಾಗೂ ಸಬ್ ಆರ್ಟಿರಿಯಲ್ ರಸ್ತೆಗಳು 1400 ಕಿ.ಮೀ ನಷ್ಟಿದ್ದು, ಸದರಿ ರಸ್ತೆಗಳಲ್ಲಿ ಬರುವ ಎಲ್ಲಾ ವಾಣಿಜ್ಯ ಮಳಿಗೆಗಳನ್ನು ವಲಯವಾರು ಸರ್ವೆ ಮಾಡಿಸಲಾಗುವುದು, ಸಂಘದಿಂದ ಸರ್ವೇ ಮಾಡಿದಾಗ, ಅಂಗಡಿ-ಮುಂಗಟ್ಟು ಲೈಸೆನ್ಸ್ ರಿನಿವಲ್ ಮಾಡಲು ಅಧಿಕಾರಿಗಳು ಹಣ ಪಡೆದಿದ್ದಾರೆ. ಹೀಗಾಗಿ ಆಯಾ ವಲಯ ಅಧಿಕಾರಿಗಳನ್ನು ಅಮಾನತು ಮಾಡಬೇಕೆಂದು ಆಗ್ರಹಿಸಿದ್ದೇವೆ. ವಲಯ ಅಧಿಕಾರಿಗಳ ಜತೆ ಸಭೆ ಮಾಡಿ ಎಚ್ಚರಿಸುವ ಭರವಸೆ ಕೊಟ್ಟಿದ್ದಾರೆ ಎಂದರು.ಗಡುವಿನೊಳಗೆ ಕ್ರಮ ತೆಗೆದುಕೊಳ್ಳದಿದ್ದರೆ ನಂತರ ಬಿಬಿಎಂಪಿ ಕಚೇರಿ ಬಳಿ ಉಪವಾಸ ಸತ್ಯಾಗ್ರಹ ಮಾಡುತ್ತೇವೆ ಎಂದು ನಾರಾಯಣಗೌಡ ತಿಳಿಸಿದರು. ಡಿ. 27ರಿಂದ ದೇವನಹಳ್ಳಿ ಏರ್‌ಪೋರ್ಟ್‌ನ ಸಾದರಹಳ್ಳಿ ಟೋಲ್‌ನಿಂದ ಕಬ್ಬನ್‌ ಪಾರ್ಕ್ ವರೆಗೆ ಮೆರವಣಿಗೆ ನಡೆಸುತ್ತೇವೆ ಎಂದು ಮಾಹಿತಿ ನೀಡಿದರು.ಡಿ. 27ರಿಂದ ದೇವನಹಳ್ಳಿ ಏರ್‌ಪೋರ್ಟ್‌ನ ಸಾದರಹಳ್ಳಿ ಟೋಲ್‌ನಿಂದ ಕಬ್ಬನ್‌ ಪಾರ್ಕ್ ವರೆಗೆ ಮೆರವಣಿಗೆ ನಡೆಸುತ್ತೇವೆ ಎಂದು ಮಾಹಿತಿ ನೀಡಿದರು.

Related News

spot_img

Revenue Alerts

spot_img

News

spot_img