ಕರ್ನಾಟಕ ಪರೀಕ್ಷಾ ಪ್ರಾಧಿಕಾರ(KEA) ಕೆ-ಸೆಟ್ ಪರೀಕ್ಷೆಯನ್ನು ಮತ್ತೊಮ್ಮೆ ಮುಂದೂಡಿದೆ. ಕರ್ನಾಟಕ ಸರ್ಕಾರದ ನಿರ್ದೇಶನದಂತೆ, ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ-2023 (K-SET 2023) ಅನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ನಡೆಸಲಾಗುತ್ತಿದ್ದು, ದಿನಾಂಕ (ಭಾನುವಾರ)ರಂದು ನಿಗದಿಗೊಳಿಸಿದ್ದ ಪರೀಕ್ಷಾ ದಿನಾಂಕವನ್ನು ಪರಿಷ್ಕರಿಸಿ ದಿನಾಂಕ 13.01.2024 (ಶನಿವಾರ) ಕ್ಕೆ ಮುಂದೂಡಲಾಗಿದೆ.ಆನ್‌ಲೈನ್ ಅರ್ಜಿಯಲ್ಲಿ ವಿಕಲ ಚೇತನ ಮೀಸಲಾತಿಯನ್ನು ಕೋರಿರುವ ಅಭ್ಯರ್ಥಿಗಳು, ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಒದಗಿಸಲಾದ ಲಿಂಕ್‌ನಲ್ಲಿ ಅರ್ಜಿದಾರರ ವಿವರಗಳು ಮತ್ತು ಲಿಪಿಕಾರರ ವಿವರಗಳನ್ನು ಕಡ್ಡಾಯವಾಗಿ ಸಲ್ಲಿಸತಕ್ಕದ್ದು.ಈ ಹಿಂದೆ ಡಿ.31ರಂದು ನಡೆಸುವುದಾಗಿ ಹೇಳಿತ್ತು. ಇದೀಗ ದಿಢೀರನೇ ಪರೀಕ್ಷಾ ದಿನವನ್ನು ಜ.13ಕ್ಕೆ ಮುಂದೂಡಿದೆ. ಕಲಬುರಗಿ & ವಿಜಯಪುರ ಜಿಲ್ಲೆಗೆ ಪರೀಕ್ಷಾ ಕೇಂದ್ರವಾಗಿ ಅರ್ಜಿ ಸಲ್ಲಿಸಿದವರು ಕ್ರಮವಾಗಿ ಬೆಂಗಳೂರು & ತುಮಕೂರಿನಲ್ಲಿ ಹಾಜರಾಗಬೇಕು ಎಂದಿದೆ. ಧಾರವಾಡ & ಮೈಸೂರಿನ ಕೇಂದ್ರಗಳಿಗೆ ಹೆಚ್ಚುವರಿಯಾಗಿ ಹಾವೇರಿ & ಮಂಡ್ಯ ಜಿಲ್ಲಾ ಪರೀಕ್ಷಾ ಕೇಂದ್ರಗಳನ್ನು ಸೇರಿಸಲಾಗಿದೆ ಎಂದು ತಿಳಿಸಿದೆ.ಅರ್ಜಿದಾರರ ಮತ್ತು ಲಿಪಿಕಾರರ ವಿವರಗಳನ್ನು ಸಲ್ಲಿಸದ ವಿಕಲ ಚೇತನ ಅಭ್ಯರ್ಥಿಗಳು ಲಿಪಿಕಾರರ ಸೇವೆಯನ್ನು ಪಡೆಯಲು ಅರ್ಹರಿರುವುದಿಲ್ಲ. ಉಳಿದ ಜಿಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ಬದಲಾವಣೆಗಳಿರುವುದಿಲ್ಲ ಅಂತ ಕಾರ್ಯನಿರ್ವಾಹಕ ನಿರ್ದೇಶಕರು(Executive Director) ತಿಳಿಸಿದ್ದಾರೆ.