ಬೆಂಗಳೂರು, ಮೇ. 24 : ಈ ಕಾಲದಲ್ಲಿ ಮನೆ ಕಟ್ಟುವುದು ಅಥವಾ ಖರೀದಿಸುವುದು ಎರಡೂ ಕೂಡ ದೊಡ್ಡ ಸವಾಲಿನ ಕೆಲಸವಾಗಿದೆ. ದುಡಿಯುವ ಹಣದಲ್ಲಿ ಮುಕ್ಕಾಲು ಪಾಲು ಸ್ವಂತ ಮನೆಯನ್ನು ಖರೀದಿಸುವುದಕ್ಕಾಗಿಯೇ ವ್ಯಯಿಸಬೇಕಾಗುತ್ತದೆ. ಕೆಲ ಸಂದರ್ಭಗಳಲ್ಲಿ ಮನೆಯನ್ನೇನೋ ಹೋಮ್ ಲೋನ್ ಮೂಲಕ ಖರೀದಿ ಮಾಡುತ್ತೇವೆ. ಆದರೆ, 20-30 ವರ್ಷಗಳ ಕಾಲ ಇದರ ಇಎಂಐ ಅನ್ನು ಕಟ್ಟುವುದೇ ದೊಡ್ಡ ಕಷ್ಟದ ಕೆಲಸವಾಗಿ ಮಾರ್ಪಾಡಾಗಿ ಬಿಡುತ್ತದೆ. ಕೆಲವರಂತೂ ಅರ್ಧಕ್ಕೆ ಕೈ ಬಿಟ್ಟಿದ್ದೂ ಇದೆ.
ಹೀಗಿರುವಾಗ ಇಲ್ಲೊಬ್ಬ ಮಹಿಳೆ ಜಸ್ಟ್ 270 ರೂಪಾಯಿ ಅನ್ನು ಕೊಟ್ಟು ಒಂದಲ್ಲ.. ಎರಡಲ್ಲ.. ಮೂರು ಮನೆಗಳನ್ನು ಒಂದೇ ಬಾರಿಗೆ ಖರೀದಿ ಮಾಡಿದ್ದಾಳೆ. ಇಟಲಿಯ ಮುಸ್ಸೋಮೇಲಿ ಊರಿನಲ್ಲಿ ಕೇವಲ 10,000 ಮಂದಿ ವಾಸಿಸುತ್ತಿದ್ದಾರೆ. ಇಟಲಿಯ ಎಲ್ಲಾ ಮನೆಗಳನ್ನು ಕೂಡ ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಇದನ್ನು ನೋಡಿ ಶಾಕ್ ಆದ ರುಬಿಯಾ ಡೇನಿಯಲ್ಸ್ ಇಟಲಿಗೆ ಬಂದು ಮನೆಯ ಪರಿಶೀಲನೆಗೆ ಮುಂದಾದರು.
ಬಳಿಕ ಈ ಮನೆಯನ್ನು ನೋಡಿ ಇಷ್ಟಪಟ್ಟ ರುಬಿಯಾ ಖರೀದಿಸಲು ಮುಂದಾದರು. 2019ರ ಜುಲೈ ನಲ್ಲಿ ಮನೆಯನ್ನು ಖರೀದಿಸಿದರು. ಕೇವಲ ಮೂರು ಯೂರೋ ಅನ್ನು ಕೊಟ್ಟು ಮನೆಯನ್ನು ಖರೀದಿಸಿ, ಅಲ್ಲಿ ಹೊಸ ಮನೆಯನ್ನು ಕಟ್ಟುವ ಬದಲು ನವೀಕರಣಕ್ಕೆ ಮುಂದಾದರು. ಶೀಥಿಲಾವಸ್ಥೆಯಲ್ಲಿರುವ ಈ ಮೂರು ಮನೆಗಳನ್ನು ನವೀಕರಿಸಲು 20 ರಿಂದ 90 ಲಕ್ಷ ರೂಪಾಯಿ ಖರ್ಚಾಗುತ್ತದೆ ಎಂದು ಅಂದಾಜಿಸಲಾಗಿದೆ. ಕೋವಿಡ್ ಕಾರಣದಿಂದ ಮನೆಗಳ ನವೀಕರಣ ತಡವಾಗುತ್ತಿದೆ.
ಇನ್ನು ಬ್ರೆಜಿಲ್ ನಲ್ಲಿ ಹುಟ್ಟಿ ಬೆಳೆದ ರುಬಿಯಾ ಕ್ಯಾರ್ಲಿಫೋನಿಯಾದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಕೆಲಸ ಮಾಡುತ್ತಿದ್ದಾರೆ. ಈಗ ಇಟಲಿಯಲ್ಲಿ ಮನೆಯನ್ನು ಖರೀದಿಸಿದ್ದಾರೆ. ರುಬಿಯಾ ಅವರು ಖರೀದಿಸಿರುವ ಮೂರು ಮನೆಗಳಲ್ಲಿ ಒಂದನ್ನು ವಾಸಕ್ಕಗಿ ಬಳಸಲಿದ್ದು, ಇನ್ನೆರಡರಲ್ಲಿ ಒಂದನ್ನು ಆರ್ಟ್ ಗ್ಯಾಲರಿ ಮಾಡಲಿದ್ದಾರಂತೆ. ಮೂರನೇಯ ಮನೆಯನ್ನು ಪಟ್ಟಣದ ಕಲ್ಯಾಣ ಕಾರ್ಯಕ್ಕಾಗಿ ಮೀಸಲಿಡಲಿದ್ದಾರಂತೆ. ರುಬಿಯಾ ಅವರು ಅತೀ ಕಡಿಮೆ ಬೆಲೆಗೆ ಮನೆಯನ್ನು ಖರೀದಿಸಿರುವುದು ಈಗ ಬಹಳ ವೈರಲ್ ಸುದ್ದಿಯಾಗಿದೆ.