21.1 C
Bengaluru
Monday, December 23, 2024

ಲಂಚ ಸ್ವೀಕರಿಸುತ್ತಿದ್ದ ಜೆಸ್ಕಾಂ AEE ಲೋಕಾಯುಕ್ತ ಬಲೆಗೆ

#Jescom #AEE #Lokayukta’s #trap # accepting #bribes

ರಾಯಚೂರು: ಲಂಚ ಸ್ವೀಕರಿಸುತ್ತಿದ್ದ ಜೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ‌ಇಂಜಿನಿಯರ್‌ರನ್ನು (AEE) ಲೋಕಾಯುಕ್ತ(Lokayukta) ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.xಲಂಚ ಸ್ವೀಕರಿಸುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಜೆಸ್ಕಾಂ AEE ಕೆಂಚಪ್ಪ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಜೆಸ್ಕಾಂ(Jescom) ಕಚೇರಿಯಲ್ಲಿಯೇ (GESCOM Office) ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಅಧಿಕಾರಿಗಳು ಆರೋಪಿಯನ್ನು (Accused) ಟ್ರ್ಯಾಪ್ ಮಾಡಿದ್ದಾರೆ.ಲಿಂಗಸೂಗೂರು(Lingsoor) ಪಟ್ಟಣದ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೆಂಚಪ್ಪ ಬಾವಿಮನಿ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ.ಆಶಿಹಾಳ ತಾಂಡದ ನಿವಾಸಿಯಾದ ವಿದ್ಯುತ್ ಗುತ್ತಿಗೆದಾರರ ಪ್ರೇಮಕುಮಾರ್​ ಎಂಬವರು ತಾವು ವಿದ್ಯುದ್ದೀಕರಣಗೊಳಿಸಿದ ಮನೆಯ ಆರ್‌ಆರ್‌ ನಂಬರ್ ನೀಡುವಂತೆ ಎಇಇ(AEE) ಕೆಂಚಪ್ಪ ಬಾವಿಮನಿ ಅವರಿಗೆ ಮನವಿ ಮಾಡಿದ್ದರು.ಇದಕ್ಕಾಗಿ ಕೆಂಚಪ್ಪ ಕೆಲವು ದಿನಗಳಿಂದಲೂ ಪ್ರೇಮಕುಮಾರ್​ ಅವರನ್ನು ಅಲೆದಾಡಿಸಿದ್ದರು.ಬಂಧಿತ ಅಧಿಕಾರಿ ಜೆಸ್ಕಾಂ ಗುತ್ತಿಗೆದಾರ(JESCOM is the contractor) ನಾಯಕ್‌ಎಂಬುವವರ ಬಳಿ 10,000 ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರಂತೆ. ಇದರಂತೆ ಇಂದು 5000 ರೂಪಾಯಿ ಹಣ ಸ್ವೀಕರಿಸುವಾಗ ಲೋಕಾಯುಕ್ತ ಅಧಿಕಾರಿಗಳಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಐದು ಸಾವಿರ ನಗದು ರೂಪದಲ್ಲಿ ಲಂಚದ ಹಣ ಸ್ವೀಕರಿಸುವ ಮುನ್ನ ಆರೋಪಿ ಕೆಂಚಪ್ಪ 5 ಸಾವಿರ ರೂಪಾಯಿಗಳನ್ನು ಫೋನ್​ ಪೇ ಮೂಲಕ ಪಡೆದುಕೊಂಡಿದ್ದರಂತೆ. ಲೋಕಾಯುಕ್ತ ಎಸ್ಪಿ ಎಂ.ಎನ್.ಶಶಿಧರ್ ಮಾರ್ಗದರ್ಶನದಲ್ಲಿ ಡಿಎಸ್ಪಿ ಸಿದ್ದೇಶ್ವರ ನೇತೃತ್ವದಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ದಾಳಿ ನಡೆಸಿದ್ದಾರೆ.

Related News

spot_img

Revenue Alerts

spot_img

News

spot_img