ಬೆಂಗಳೂರು, ಫೆ. 16 : ಈ ವರ್ಷದ ಜನವರಿಯಲ್ಲಿ ದಾಖಲೆ ಮಟ್ಟದ ಜಿಎಸ್ ಟಿ ಅನ್ನು ಸಂಗ್ರಹ ಮಾಡಲಾಗಿದೆ. ಈ ಬಗ್ಗೆ ರಾಜ್ಯದ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಟ್ವೀಟ್ ಮಾಡಿದ್ದಾರೆ. ರಾಜ್ಯದಲ್ಲಿ ಈ ವರ್ಷ 6,085 ಕೋಟಿ ರೂಪಾಯಿಗಳ ದಾಖಲೆಯ ಸರಕು ಮತ್ತು ಸೇವಾ ತೆರಿಗೆ ಸಂಗ್ರಹ ಮಾಡಿದೆ ಎಂದು ತಿಳಿಸಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶನಿವಾರ ಟ್ವೀಟ್ ಮೂಲಕ ಹೇಳಿದ್ದಾರೆ. ಸರಣಿ ಟ್ವೀಟ್ ಮಾಡಿರುವ ಸಿಎಂ, ಜಿಎಸ್ ಟಿ ತೆರಿಗೆ ಸಂಗ್ರಹದಲ್ಲಿ ಕರ್ನಾಟಕ ಶೇ. 30 ರಷ್ಟು ಅಧಿಕ ಬೆಳವಣಿಗೆ ಪ್ರಮಾಣವನ್ನು ಹೊಂದಿದೆ.
ತೆರಿಗೆ ಪಾವತಿಯಲ್ಲಿ ಸುಧಾರಣೆಗಳು, ಜಾಗರೂಕತೆ ಮತ್ತು ತೆರಿಗೆದಾರರ ಉತ್ತಮ ಅನುಸರಣೆಯಿಂದಾಗಿ ಈ ಸಾಧನೆ ಸಾಧ್ಯವಾಗಿದೆ. ಈ ಆದಾಯ ಬೆಳವಣಿಗೆಯಿಂದಾಗಿ ಸರ್ಕಾರ ಈ ವರ್ಷದ ಆಯವ್ಯಯವನ್ನು ಉತ್ತಮವಾಗಿ ಮಂಡಿಸಬಹುದಾಗಿದೆ ಎಂದು ಸಿಎಂ ಅವರು ಟ್ವೀಟ್ ಮಾಡಿದ್ದಾರೆ.
“ಈ ತಿಂಗಳು ಜಿಎಸ್‌ಟಿ ಅಡಿಯಲ್ಲಿ 6,085 ಕೋಟಿ ದಾಖಲೆ ಸಂಗ್ರಹವಾಗಿದೆ. ಜಿಎಸ್‌ಟಿ ತೆರಿಗೆ ಸಂಗ್ರಹದಲ್ಲಿ ಕರ್ನಾಟಕವು 30% ರಷ್ಟು ಅತ್ಯಧಿಕ ಬೆಳವಣಿಗೆಯೊಂದಿಗೆ ರಾಜ್ಯವಾಗಿ ಮುಂದುವರೆದಿದೆ. ಸುಧಾರಣೆಗಳು, ಕೇಂದ್ರೀಕೃತ ಜಾಗರೂಕತೆ, ಆರ್ಥಿಕತೆಯಲ್ಲಿ ಚೇತರಿಕೆ ಮತ್ತು ತೆರಿಗೆದಾರರಿಂದ ಉತ್ತಮ ಅನುಸರಣೆಗಾಗಿ ಕೈಗೊಂಡ ಕ್ರಮಗಳಿಂದ ಈ ವರ್ಷದ ಗಮನಾರ್ಹ ಮಾಪ್ ಅಪ್ ಆಗಿದೆ. ಆದಾಯಕ್ಕೆ ಈ ವರ್ಧನೆಯು ಈ ವರ್ಷ ಉತ್ತಮ ಬಜೆಟ್ ಅನ್ನು ಪ್ರಸ್ತುತಪಡಿಸಲು ಸರ್ಕಾರಕ್ಕೆ ಅನುವು ಮಾಡಿಕೊಡುತ್ತದೆ” ಎಂದು ಸರಣಿ ಟ್ವೀಟ್ ಮಾಡಿದ್ದಾರೆ..