ಬೆಂಗಳೂರು; ದಿಶಾಂಕ್ ಅಪ್ಲಿಕೇಶನ್ ಒಂದು ಮೊಬೈಲ್ ಅಪ್ಲಿಕೇಶನ್ ಆಗಿದ್ದು ಅದು ಕರ್ನಾಟಕದೊಳಗೆ ಎಲ್ಲಿಯಾದರೂ ಇರುವ ಆಸ್ತಿ, ಪ್ಲಾಟ್‌ಗಳ ವಿವರಗಳನ್ನು ಕಂಡುಹಿಡಿಯಲು ನೆರವಾಗಲಿದೆ.ನೀವು ಕುಳಿತ ಸ್ಥಳದಲ್ಲೇ ಬೆರಳ ತುದಿಯಲ್ಲಿ ಸಮಗ್ರ ಮಾಹಿತಿಯನ್ನು ಪಡೆದುಕೊಳ್ಳಬಹುದಾದ ಕಂದಾಯ ಇಲಾಖೆಯ ದಿಶಾಂಕ್ ಮೊಬೈಲ್ ಆ್ಯಪ್ ಬಿಡುಗಡೆ ಆಗಿದೆ. ಈ ಮೊಬೈಲ್ ಅಪ್ಲಿಕೇಷನ್‌ನಲ್ಲಿ ಜಿಪಿಎಸ್ ಮೂಲಕ ಯಾವುದೇ ಮೂಲೆಯಲ್ಲಿರುವ ಆಸ್ತಿ ಮತ್ತು ಜಮೀನಿನ ಬಗ್ಗೆ ತಕ್ಷಣ ಮಾಹಿತಿ ತಿಳಿದುಕೊಳ್ಳಬಹುದು. ದಿಶಾಂಕ್ ಆ್ಯಪ್ ಅನ್ನು ಗ್ರಾಮ ಮಟ್ಟದಲ್ಲಿ ಪರಿಚಯಿಸಲು ಸರಕಾರ ನಿರ್ಧರಿಸಿದೆ. ಅದರಂತೆ ಗ್ರಾಮ ಠಾಣಾ ವ್ಯಾಪ್ತಿಯ ನಿವೇಶನ, ಭೂಮಿಯಲ್ಲಿ ಮನೆ ಕಟ್ಟಬೇಕೆಂದರೆ ಇ-ಖಾತೆಯನ್ನು ಶೀಘ್ರವಾಗಿ ಪಡೆಯಲು ಇದು ನೆರವಾಗಲಿದೆ. ಈವರೆಗೆ ಗ್ರಾಹಕರು ಅರ್ಜಿಯೊಂದಿಗೆ 800 ರೂ. ಶುಲ್ಕ ಪಾವತಿಸಬೇಕಿತ್ತು. ಇದೀಗ ದಿಶಾಂಕ್‌ನಿಂದಾಗಿ 200 ರೂ. ಪಾವತಿಸಿದರೆ ಸಾಕು.ರೈತರ ಜಮೀನಿನ ನೆರೆಹೊರೆಯ ಜಮೀನು ಕೆರೆ ಕಟ್ಟೆ, ಹಳ್ಳಕೊಳ್ಳ ಖರಾಬು ಜಮೀನಿದ್ದರೆ ರೈತರು ದಿಶಾಂಕ್ ಆಯಪ್ ಸಹಾಯದಿಂದ ಪಡೆಯಬಹುದು.
ಸಾರ್ವಜನಿಕರು ಭೂಮಿ, ನಿವೇಶನ ಅಥವಾ ಫ್ಲ್ಯಾಟ್ ಖರೀದಿ ವೇಳೆ ವಂಚನೆ ಗೊಳಗಾಗುವುದನ್ನು ತಪ್ಪಿಸಲು ರಾಜ್ಯ ಭೂಮಾಪನ, ಕಂದಾಯ ಮತ್ತು ಭೂದಾಖಲೆಗಳ ಇಲಾಖೆಯು ವಿನೂತನ ಆ್ಯಪ್ ವೊಂದನ್ನು ಅಭಿವೃದ್ಧಿಪಡಿಸಿ ಬಿಡುಗಡೆ ಮಾಡಿದೆ.ಭೂಗಳ್ಳರು ಸರಕಾರಿ ಭೂಮಿ, ಖರಾಬು, ಗೋಮಾಳ, ಕೆರೆ ಅಂಗಳ, ಜಾಗವನ್ನು ಕಬಳಿಸಿ, ಇತರರಿಗೆ ಮಾರಾಟ ಮಾಡಿ ವಂಚಿಸಿರುವ ಪ್ರಕರಣಗಳು ಸಾಕಷ್ಟಿವೆ. ದಿಶಾಂಕ್ ಆಪ್ ಜಿಪಿಎಸ್ ಆಧರಿಸಿ ಕಾರ್ಯ ನಿರ್ವಹಿಸುತ್ತದೆ. ನೀವು ನಿಂತಿ ರುವ ಸ್ಥಳದಲ್ಲಿ ಅಪ್ ತೆರೆದರೆ, ಸ್ಯಾಟ ಲೈಟ್ ಅಥವಾ ಗೂಗಲ್ ಮ್ಯಾಪ್ ಸಹಿತ ವಾಗಿ ಸರ್ವೆ ಸಂಖ್ಯೆಯನ್ನು ತಿಳಿಸುತ್ತದೆ. ಹಾಗೆಯೇ, ಅದರಲ್ಲಿ ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮವನ್ನು ಆಯ್ಕೆ ಮಾಡಿ ಸರ್ವೇ ಸಂಖ್ಯೆಯನ್ನು ನಮೂದಿಸಿದರೆ, ಅದರ ನಕಾಶೆ ಕಾಣ ಸಿಗುತ್ತದೆ.ದಿಶಾಂಕ್ ಆ್ಯಪ್ ಒದಗಿಸುವ ಮಾಹಿತಿಯಿಂದ ಜನರು ನಿಶ್ಚಿಂತೆಯಿಂದ ನಿವೇಶನ, ಫ್ಲ್ಯಾಟ್ ಮಾಡಬಹುದು.
ದಿಶಾಂಕ್ ಆ್ಯಪ್ ಉಪಯೋಗಗಳು
*ಯಾವುದಾದರೂ ಆಸ್ತಿಯ ನಿಖರ ಸರ್ವೇ ನಂಬರ್ ನ್ನು ಪಡೆಯಲು ಸಹಕಾರಿಯಾಗಿದೆ.
*ಎಲ್ಲಾ ಸಾರ್ವಜನಿಕರು, ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಅತಿ ಉಪಯುಕ್ತ ಆ್ಯಪ್ ಇದು.
* ಹೊಸ ಆಸ್ತಿ ಖರೀದಿ, ಮಾರಾಟದ ವೇಳೆ ಈ ಆ್ಯಪ್ ಬಹಳ ಉಪಯುಕ್ತ ಮಾಹಿತಿ ನೀಡಲಿದೆ.
* ಆ ಸರ್ವೆ ನಂಬರ್ ಮಾಲೀಕ ಯಾರು ಅನ್ನೋ ಮಾಹಿತಿ ಕೂಡಾ ನಿಮಗೆ ಸಿಗುತ್ತದೆ.
* ನೀವು ಒಂದು ಸೈಟ್ ಖರೀದಿಗೆ ಹೋಗುವಾಗ ಆ ಸೈಟಿನ ಜಾಗದಲ್ಲಿ ನಿಂತು ಈ ದಿಶಾಂಕ್ ಆ್ಯಪ್ ಆನ್ ಮಾಡಿ.