24.8 C
Bengaluru
Wednesday, December 18, 2024

ಡೆತ್ ನೋಟ್ ನಲ್ಲಿ ಬರೆದ ಹೆಸರಿನವರಿಗೆ ಶಿಕ್ಷೆ ಕಡ್ಡಾಯ ಎಂಬುದು ಸುಳ್ಳು..!

ಕಾನೂನಿ ಪ್ರಕಾರ ಆತ್ಮಹತ್ಯೆ ನೋಟ್ ( ಡೆತ್ ನೋಟ್) ನಲ್ಲಿ ವ್ಯಕ್ತಿಯ ಹೆಸರು ಬರೆದು ಆತ್ಮ ಹತ್ಯೆ ಮಾಡಿಕೊಂಡ ಮಾತ್ರಕ್ಕೆ ನಮೂನೆಯಲ್ಲಿರುವ ಹೆಸರಿನವರೆ ಆರೋಪಿ ಎಂದು ತೀರ್ಮಾನ ಸಲ್ಲದು. ಆತ್ಮಹತ್ಯೆಗೆ ಆತ ನಿಜಕ್ಕೂ ಪ್ರಚೋದನೆ ನೀಡಿದ್ದಾನೆಯೇ ಇಲ್ಲವೇ ಎಂಬುದನ್ನು ತಿಳಿಯಲು ಸಂಪೂರ್ಣವಾಗಿ ತನಿಖೆ ಅತ್ಯಗತ್ಯ ಎಂದು ಹೈ ಕೋರ್ಟ್(high court ) ಸ್ಪಷ್ಟೀಕರಿಸಿದೆ.

ಡೆತ್ ನೋಟ್ ನಲ್ಲಿ ಹೆಸರಿದ್ದರೆ ಈ ಮೊದಲು ಬಂಧಿಸುವುದು ಮಾಮೂಲಿಯಾಗಿತ್ತು

ಹೈ ಕೋರ್ಟ್ ನ ನ್ಯಾಯಮೂರ್ತಿ ವೆಂಕಟೇಶ್ ಟಿ.ನಾಯಕ್ ಅವರಿದ್ದ ಏಕಸದಸ್ಯಪೀಠ ಈ ಆದೇಶವನ್ನು ನೀಡಿದೆ. ವಕೀಲರ ವಾದ ಆಲಿಸಿದ ಬಳಿಕ ನ್ಯಾಯಾಲಯ ಆತ್ಮಹತ್ಯೆ ಪ್ರಕರಣಗಳಲ್ಲಿ ಸಿಗುವ ಡೆತ್ ನೋಟ್(death note) ಗಳಲ್ಲಿ ಕೆಲವು ಬಾರಿ ವ್ಯಕ್ತಿಯ ಹೆಸರುಗಳು ಉಲ್ಲೇಖವಾಗಿರುತ್ತದೆ. ಅಂತಹ ಪ್ರಕರಣಗಳಲ್ಲಿ ಮೊದಲಿಗೆ ತನಿಖೆ ನಡೆಸಿ ನೋಟ್ ನಲ್ಲಿನ ಅಂಶಗಳ ಸತ್ಯಾಸತ್ಯತೆ ಪರಿಶೀಲಿಸುವ ಬದಲು ತಕ್ಷಣಕ್ಕೆ ಐಪಿಸಿ 306ರಡಿ ಆತ್ಮಹತ್ಯೆಗೆ ಪ್ರಚೋದನೆ ನೀಡಿ, ಅಪರಾಧ ಎಸಗಿದ್ದಾರೆನ್ನುವಂತೆ ಭಾವಿಸಿ ಅವರನ್ನು ಬಂಧಿಸುವುದು ಮಾಮೂಲಿಯಾಗಿದೆ.

ಆತ್ಮಹತ್ಯೆಯ ಹಿಂದೆ ಆ ವ್ಯಕ್ತಿಯ ಕೈವಾಡ ಇದ್ಯಾ…?

ಆತ್ಮ ಹತ್ಯೆಗೆ ಮುನ್ನ ಡೆತ್ ನೋಟ್ ನಲ್ಲಿನ ಬರೆದಿರುವ ಅಂಶಗಳು ಹಾಗು ಸಾಂದರ್ಭಿಕ ಸಾಕ್ಷ್ಯಗಳನ್ನು ಪರಿಶೀಲಿಸಿ, ನಿಜವಾಗಿಯೂ ಆತ್ಮಹತ್ಯೆಯ ಹಿಂದೆ ಆ ವ್ಯಕ್ತಿಯ ಕೈವಾಡ ಇದಿಯೋ ಇಲ್ಲವೋ ಎಂಬುದನ್ನು ಪರಿಶೀಲಿಸಬೇಕಾಗುತ್ತದೆ. ಆದರೆ ಸತ್ಯಾಂಶ ಎಂಬುವುದು ಬೇಗ ಬಯಲಾಗುವುದಿಲ್ಲ. ನಿರಪರಾದಿಗೆ ಶಕ್ಷೆ(punishment)ತಡೆಯಲು ಪೂರ್ಣ ಪ್ರಮಾಣದ ತನಿಖೆ ಮತ್ತು ವಿಚಾರಣೆ ಎರಡೂ ನಡೆಯಬೇಕಾಗುತ್ತದೆ ಎಂದು ಹೈ ಕೋರ್ಟ್ ನ್ಯಾಯಾಲಯ ಹೇಳಿದೆ.

ಚೈತನ್ಯ ರೆವೆನ್ಯೂ ಫ್ಯಾಕ್ಟ್ ನ್ಯೂಸ್. ಬೆಂಗಳೂರು

Related News

spot_img

Revenue Alerts

spot_img

News

spot_img