26.4 C
Bengaluru
Monday, December 23, 2024

ರಾಜ್ಯಾದ್ಯಂತ ನ.7ರ ವರೆಗೆ ಪಡಿತರ ಅಂಗಡಿ ಬಂದ್ ಮಾಡಲು ತೀರ್ಮಾನ

# decided # close # ration shop #till November 7 #across state

ಬೆಂಗಳೂರು: ರಾಜ್ಯಾದ್ಯಂತ ಪಡಿತರ ಅಂಗಡಿ ಬಂದ್‌ ರಾಜ್ಯಾದ್ಯಂತ ಪಡಿತರ ಅಂಗಡಿ ಬಂದ್ ಮಾಡಲು ಪಡಿತರ ವಿತರಕರು(Ration Distributors) ತೀರ್ಮಾನ ಮಾಡಿದ್ದಾರೆ. ನವೆಂಬರ್ 7ರವರೆಗೂ ಪಡಿತರ ವಿತರಿಸದಿರಲು ನಿರ್ಧರಿಸಿದ್ದಾರೆ. ಹೀಗಾಗಿ ಪಡಿತರ ಚೀಟಿದಾರರಿಗೆ ಪ್ರಸಕ್ತ ತಿಂಗಳಿನಲ್ಲಿ ಪಡಿತರ ಪಡೆಯಲು ವಿಳಂಬವಾಗುವ ಸಾಧ್ಯತೆ ಇದೆ. ಸರಕಾರ ಫಲಾನುಭವಿಗಳಿಗೆ ಅಕ್ಕಿ ಬದಲು ಹಣ ನೀಡುವುದನ್ನು ನಿಲ್ಲಿಸಬೇಕು ಎಂಬುದು ನ್ಯಾಯಬೆಲೆ ಅಂಗಡಿ (Fair Price Shop) ನಡೆಸುವವರ ಪ್ರಮುಖ ಬೇಡಿಕೆಯಾಗಿದೆ.ನವೆಂಬರ್ 7ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನ್ಯಾಯಬೆಲೆ ಅಂಗಡಿ ಮಾಲೀಕರು ಬೃಹತ್ ಪ್ರತಿಭಟನೆ ಕೈಗೊಂಡಿದ್ದಾರೆ.ರಾಜ್ಯಾದ್ಯಂತ ಸಾವಿರಾರು ನ್ಯಾಯಬೆಲೆ ಅಂಗಡಿ ಮಾಲೀಕರು ಭಾಗಿಯಾಗುವ ನಿರೀಕ್ಷೆಯಿದೆ.ಅಕ್ಕಿ ಬದಲು ಫಲಾನುಭವಿಗಳಿಗೆ ಹಣ ನೀಡುವುದನ್ನು ವಿರೋಧಿಸಿ ನ್ಯಾಯಬೆಲೆ ವಿತರಕರ ಸಂಘ ಅಕ್ಟೋಬರ್‌ನಲ್ಲಿ ಪ್ರತಿಭಟನೆಗೆ ಕರೆ ನೀಡಿತ್ತು. ರಾಜ್ಯಾದ್ಯಂತ 20,350 ನ್ಯಾಯಬೆಲೆ ಅಂಗಡಿಗಳು ಪ್ರತಿಭಟನೆಗೆ ಬೆಂಬಲ ನೀಡಿದ್ದವು. ಇದೀಗ ಮತ್ತೆ ರಾಜ್ಯಾದ್ಯಂತ ಪ್ರತಿಭಟನೆ ಮಾಡಲು ನಿರ್ಧರಿಸಿದೆ.ಕೇರಳ ಮತ್ತು ಮಹಾರಾಷ್ಟ್ರ ಮಾದರಿಯಲ್ಲೇ ಕಮಿಷನ್ ನೀಡಬೇಕು. ಕ್ವಿಂಟಲ್‌ಗೆ 250 ಕಮಿಷನ್ ನೀಡಲು ಆದೇಶಿಸಬೇಕು.ಈ ಕುರಿತಂತೆ ಮೂರ್ನಾಲ್ಕು ಬಾರಿ ಆಹಾರ ಇಲಾಖೆ ಸಚಿವರು, ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದರೂ ಸಮಸ್ಯೆಯನ್ನು ಬಗೆಹರಿಸಿಲ್ಲ,ಮುಖ್ಯಮಂತ್ರಿಗಳು ಸಮಸ್ಯೆ ಬಗೆಹರಿಸಬೇಕು ಎಂದು ಸಂಘದ ಅಧ್ಯಕ್ಷ ಟಿ. ಕೃಷ್ಣಪ್ಪ ಒತ್ತಾಯಿಸಿದ್ದಾರೆ.

ಪಡಿತರ ವಿತರಕರ ಬೇಡಿಕೆಗಳು

*ಪಡಿತರ ವಿತರಣೆಗೆ ನೀಡಲಾಗುವ ಕಮಿಷನ್ ಹಣವನ್ನು ಹೆಚ್ಚಿಸಬೇಕು.

*ಪಡಿತರ ಸೋರಿಕೆ ತಡೆಗೆ ಸಗಟು ಮಳಿಗೆಗಳಲ್ಲಿ ಎಲೆಕ್ಟ್ರಾನಿಕ್ ಆಧಾರಿತ ತೂಕದ ಯಂತ್ರ ಅಳವಡಿಸಬೇಕು.

*ಆಹಾರಧಾನ್ಯ ವಿತರಣೆ ವೇಳೆ ಕಾರ್ಡ್‌ದಾರರಿಗೆ ಮುದ್ರಿತ ರಸೀದಿ ನೀಡುವಂತೆ ಹೊರಡಿಸಿರುವ ಆದೇಶವನ್ನು ತಕ್ಷಣ ವಾಪಸ್ ಪಡೆಯಬೇಕು

*DBT ಮೂಲಕವೇ ಕಮಿಷನ್ ಹಣವನ್ನು ಪಡಿತರ ವಿತರಕರಿಗೆ ನೀಡಬೇಕು

*ಪ್ರತಿ ಕ್ವಿಂಟಾಲ್ ಅಕ್ಕಿ ವಿತರಿಸಲು 250 ರೂಪಾಯಿ ಕಮಿಷನ್ ನೀಡಬೇಕು

*ಮಾಲೀಕರು ಮೃತಪಟ್ಟರೆ ಅವರ ಕುಟುಂಬಕ್ಕೆ ನೆರವು ನೀಡಬೇಕು

*ಸರ್ವರ್ ಸಮಸ್ಯೆ ಇರುವುದರಿಂದ ಪ್ರತಿ ಜಿಲ್ಲೆಗೂ ಪ್ರತ್ಯೇಕ ಸರ್ವರ್ ಸೆಂಟರ್ ಕಲ್ಪಿಸಬೇಕು

Related News

spot_img

Revenue Alerts

spot_img

News

spot_img