27.9 C
Bengaluru
Saturday, July 6, 2024

ಐಟಿ ಇಲಾಖೆಯಿಂದ ಆದಾಯ ತೆರಿಗೆ ಪಾವತಿದಾರರಿಗೆ ವಿನೂತನ ಮೊಬೈಲ್ ಆಪ್ ಬಿಡುಗಡೆ

ನವದೆಹಲಿ ಮಾ. 24 : ಆದಾಯ ತೆರಿಗೆ ಇಲಾಖೆಯು ತೆರಿಗೆ ಪಾವತಿದಾರರ ಅನುಕೂಲಕ್ಕೆಂದು ಅವರ ವಿವಿಧ ಆದಾಯ ಮೂಲಗಳ ಮಾಹಿತಿ ವಿವರ ಇರುವ, ವಾರ್ಷಿಕ ಮಾಹಿತಿ ಹೇಳಿಕೆ ಅಥವಾ ತೆರಿಗೆದಾರರ ಮಾಹಿತಿ ಸಾರಾಂಶ ವೀಕ್ಷಿಸಲು ಎಐಎಸ್ ಫಾರ್ ಟ್ಯಾಕ್ಸ್ ಪೇಯರ್ ಮೊಬೈಲ್ ಆಂಡ್ರಾಯ್ಡ್ ಆಪ್ ಅನ್ನು ಬಿಡುಗಡೆ ಮಾಡಿದೆ.ವಾರ್ಷಿಕ ಮಾಹಿತಿ ವರದಿ (AIS- Annual Information Statement) ಮತ್ತು ಸಂಕ್ಷಿಪ್ತ ತೆರಿಗೆಪಾವತಿದಾರ ಮಾಹಿತಿ ಇವುಗಳಲ್ಲಿರುವ ಮಾಹಿತಿಯನ್ನು ಎಐಎಸ್ ಮೊಬೈಲ್ ಅಪ್ಲಿಕೇಶನ್​ನಲ್ಲೇ ವೀಕ್ಷಿಸಬಹುದು. ಟಿಡಿಎಸ್, ಬಡ್ಡಿ, ಷೇರು ವಹಿವಾಟು, ತೆರಿಗೆ ಪಾವತಿ, ಐಟಿ ರೀಫಂಡ್, ಜಿಎಸ್​ಟಿ ಡೇಟಾ ಮೊದಲಾದವಕ್ಕೆ ಸಂಬಂಧಿಸಿದ ಹಲವಾರು ಮಾಹಿತಿಯನ್ನೂ ಈ ಆ್ಯಪ್​ನಲ್ಲಿ ಕಾಣಬಹುದು. ಇದು ಗೂಗಲ್ ಪ್ಲೇ ಸ್ಟೋರ್ ಹಾಗೂ ಆಪ್ ಸ್ಟೋರ್ ನಲ್ಲಿ ಲಭ್ಯವಿದೆ ಎಂದು ಆದಾಯ ತೆರಿಗೆ ಇಲಾಖೆ ‌ ತಿಳಿಸಿದೆ.ಅಲ್ಲದೇ ತೆರಿಗೆ ಪಾವತಿದಾರರು ಈ ಆ್ಯಪ್​ನಲ್ಲಿ ಫೀಡ್​ಬ್ಯಾಕ್ ಕೂಡ ನೀಡಬಹುದಾದ ವ್ಯವಸ್ಥೆ ಇದೆ.

Annual Information Statement(AIS) ಎಂದರೇನು?

26AS ಫಾರ್ಮ್​ನಲ್ಲಿರುವ ಸಮಗ್ರ ಮಾಹಿತಿ ದರ್ಶನವೇ ಎಐಎಸ್. ಈ ಸ್ಟೇಟ್ಮೆಂಟ್​ನಲ್ಲಿ ನೀಡಲಾಗಿರುವ ಮಾಹಿತಿ ಬಗ್ಗೆ ತೆರಿಗೆ ಪಾವತಿದಾರರು ಫೀಡ್​ಬ್ಯಾಕ್ ನೀಡುವ ಅವಕಾಶ ಇರುತ್ತದೆ. ಈ ಫೀಡ್​ಬ್ಯಾಕ್ ನಂತರದ ರಿಪೋರ್ಟೆಡ್ ವ್ಯಾಲ್ಯೂ ಮತ್ತು ಮಾಡಿಫೈಡ್ ವ್ಯಾಲ್ಯೂ ಎರಡೂ ಕೂಡ ಎಐಎಸ್​ನಲ್ಲಿ ಇರುತ್ತದೆ.

ಉದ್ದೇಶವೇನು?
ತೆರಿಗೆದಾರರಿಗೆ ಅನ್ ಲೈನ್ ಫೀಡ್ ಬ್ಯಾಕ್ ಅವಕಾಶದ ಜೊತೆಗೆ ತೆರಿಗೆ ಕುರಿತು ಸಂಪೂರ್ಣ ಮಾಹಿತಿ ಒದಗಿಸೋದು ಎಐಎಸ್ ಉದ್ದೇಶವಾಗಿದೆ. ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಯನ್ನು ಇನ್ನಷ್ಟು ಸುಗಮವಾಗಿಸಲು ಎಐಎಸ್ ನೆರವು ನೀಡುತ್ತದೆ.

ಬಳಸೋದು ಹೇಗೆ?

ಇನ್ಕಮ್ ಟ್ಯಾಕ್ಸ್ ಪೋರ್ಟಲ್ https://www.incometax.gov.in ಇಲ್ಲಿಗೆ ಹೋಗಿ ಲಾಗಿನ್ ಆದ ಬಳಿಕ ಸರ್ವಿಸಸ್ ಟ್ಯಾಬ್ ಅಡಿಯಲ್ಲಿರುವ ಆನುಯಲ್ ಇನ್ಫಾರ್ಮೇಶನ್ ಸ್ಟೇಟ್ಮೆಂಟ್ (ಎಐಎಸ್) ಮೇಲೆ ಕ್ಲಿಕ್ ಮಾಡಬೇಕು. ಪೋರ್ಟಲ್​ಗೆ ಲಾಗಿನ್ ಆಗಿದ್ದರೆ ಮಾತ್ರ ಈ ಸೇವೆ ಲಭ್ಯ ಇರುತ್ತದೆ.ಈ ಅಪ್ಲಿಕೇಶನ್‌ನಲ್ಲಿ ಪ್ರದರ್ಶಿಸಲಾದ ಮಾಹಿತಿಯ ಕುರಿತು ಪ್ರತಿಕ್ರಿಯೆಯನ್ನು ನೀಡುವ ಆಯ್ಕೆಯನ್ನು ಮತ್ತು ಸೌಲಭ್ಯವನ್ನು ತೆರಿಗೆದಾರರು ಹೊಂದಿದ್ದಾರೆ. ಈ ಆಪ್ ಒಳಗೆ ಪ್ರವೇಶಿಸಲು, ತೆರಿಗೆದಾರರು‌ ತಮ್ಮ ಪ್ಯಾನ್ ಸಂಖ್ಯೆ ಯನ್ನು ಒದಗಿಸುವ ಮೂಲಕ ಅಪ್ಲಿಕೇಶನ್‌ನಲ್ಲಿ ನೋಂದಾಯಿಸಿಕೊಳ್ಳಬೇಕು, ಇ-ಫೈಲಿಂಗ್ ಪೋರ್ಟಲ್‌ನಲ್ಲಿ ನೋಂದಾಯಿಸಲಾದ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್‌ನಲ್ಲಿ ಕಳುಹಿಸಲಾದ ಒಟಿಪಿಯೊಂದಿಗೆ ದೃಢೀಕರಿಸಬೇಕು. ದೃಢೀಕರಣದ ನಂತರ, ತೆರಿಗೆದಾರರು ಮೊಬೈಲ್ ಅಪ್ಲಿಕೇಶನ್ ಅನ್ನು ಪ್ರವೇಶಿಸಲು 4-ಅಂಕಿಯ ಪಿನ್ ಅನ್ನು ಹೊಂದಿಸಬಹುದು.

ಎಐಎಸ್​ನಲ್ಲಿ ಕಾಣುವ ಮಾಹಿತಿಯನ್ನು ಎರಡು ಭಾಗವಾಗಿ ವರ್ಗೀಕರಿಸಬಹುದು.ಎಐಎಸ್​ನಲ್ಲಿ ಕಾಣುವ ಮಾಹಿತಿಯನ್ನು ಎರಡು ಭಾಗವಾಗಿ ವರ್ಗೀಕರಿಸಬಹುದು.ಜನರನ್ ಇನ್ಫಾರ್ಮೇಶನ್ ಅಥವಾ ಸಾಮಾನ್ಯ ಮಾಹಿತಿಯಲ್ಲಿ ತೆರಿಗೆ ಪಾವತಿದಾರರ ಸಾಮಾನ್ಯ ಮಾಹಿತಿ ಇರುತ್ತದೆ. ಪ್ಯಾನ್ ನಂಬರ್, ಆಧಾರ್ ನಂಬರ್, ತೆರಿಗೆಪಾವತಿದಾರನ ಹೆಸರು, ಜನ್ಮ ದಿನಾಂಕ, ಸಂಸ್ಥೆಯಾದರೆ ಅದರ ಸ್ಥಾಪನಾ ದಿನಾಂಕ, ಮೊಬೈಲ್ ನಂಬರ್, ಇಮೇಲ್ ವಿಳಾಸ, ಭೌತಿಕ ವಿಳಾಸ ಇತ್ಯಾದಿ ಮಾಹಿತಿ ಒಂದು ಭಾಗದಲ್ಲಿರುತ್ತದೆ.ಇನ್ನೊಂದು ವರ್ಗದಲ್ಲಿ ಟಿಡಿಎಸ್ ಅಥವಾ ಟಿಸಿಎಸ್ ಮಾಹಿತಿಯಿರುತ್ತದೆ. ತೆರಿಗೆ ಪಾವತಿ, ಎಸ್ ಎಫ್ ಟಿ ಮಾಹಿತಿ, ಡಿಮ್ಯಾಂಡ್ ಹಾಗೂ ರೀಫಂಡ್ ಮತ್ತಿತರ ಮಾಹಿತಿ ಇರುತ್ತದೆ. ಇದರಲ್ಲಿನ ಇತರ ಮಾಹಿತಿಯಲ್ಲಿ ರೀಫಂಡ್ ಮೇಲಿನ ಬಡ್ಡಿ, ವಿದೇಶಿ ಕರೆನ್ಸಿ ಖರೀದಿ, ವಿದೇಶಗಳಿಗೆ ಹಣ ವರ್ಗಾವಣೆ ಮಾಹಿತಿ ಇರುತ್ತದೆ. ಎಐಎಸ್ ಆ್ಯಪ್ ನಿಂದ ತೆರಿಗೆದಾರರು ತೆರಿಗೆಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ತಕ್ಷಣಕ್ಕೆ ನೋಡಲು ಸಾಧ್ಯವಾಗಲಿದೆ.

Related News

spot_img

Revenue Alerts

spot_img

News

spot_img