#IT #attack # Meghana #group # Bengaluru
ಬೆಂಗಳೂರ;ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ IT(Income tax) ಅಧಿಕಾರಿಗಳು ಫೀಲ್ಡಿಗಿಳಿದಿದ್ದಾರೆ. ಆಂಧ್ರ ಮೂಲದ ಮೇಘನಾ ಫುಡ್ಸ್ ಗ್ರೂಪ್‌ನ(Meghana foods group) ರೆಸ್ಟೋರೆಂಟ್‌ಗಳು & ಕಚೇರಿಗಳ ಮೇಲೆ ರೇಡ್ ಮಾಡಿದ್ದಾರೆ. ಕೋರಮಂಗಲದಲ್ಲಿ ಇರುವ ಕಚೇರಿ, ಇಂದಿರಾನಗರ, ಜಯನಗರ ಮತ್ತಿತರ ಕಡೆಗಳಲ್ಲಿ ಇರುವ ರೆಸ್ಟೋರೆಂಟ್‌ಗಳು ಸೇರಿ ಅನೇಕ ಕಡೆ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಮೇಘನಾ ಫುಡ್ಸ್ ಬೆಂಗಳೂರಿನಲ್ಲಿ 9 ಔಟ್‌ಲೆಟ್‌ಗಳನ್ನು ಹೊಂದಿದ್ದು, ಆದಾಯ ತೆರಿಗೆ ಪಾವತಿಯಲ್ಲಿ ಭಾರೀ ವ್ಯತ್ಯಾಸ ಕಂಡು ಬಂದ ಹಿನ್ನೆಲೆ ಈ ಕಾರ್ಯಾಚರಣೆ ನಡೆಸಲಾಗಿದೆ,ಮೇಘನಾ ಫುಡ್ಸ್ ಹೆಸರಿನಲ್ಲಿ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳನ್ನು ಹೊಂದಿರುವ ಕಂಪನಿ, ಬೆಂಗಳೂರಿನಲ್ಲಿ ಒಂಬತ್ತು ಔಟ್‌ಲೆಟ್‌ಗಳನ್ನು ಹೊಂದಿದೆ. ಹೈದರಾಬಾದ್ ಮೂಲದ ಕಂಪನಿ ಸ್ಥಾಪಕರು 2006ರಿಂದ ಬೆಂಗಳೂರಿನಲ್ಲಿ ಶಾಖೆಗಳನ್ನು ತೆರೆದಿದ್ದಾರೆ.ಕರ್ನಾಟಕ ಮತ್ತು ಗೋವಾ ವಿಭಾಗದ ಐಟಿ ಅಧಿಕಾರಿಗಳ ತಂಡ ನಗರದಲ್ಲಿರುವ 10ಕ್ಕೂ ಹೆಚ್ಚು ಕಡೆ ದಾಳಿ ನಡೆಸಿ ದಾಖಲೆ ಪರಿಶೀಲಿಸುತ್ತಿದೆ.