17.4 C
Bengaluru
Tuesday, December 24, 2024

ಚಂದ್ರಯಾನ-3 ಲ್ಯಾಂಡಿಂಗ್ ಕ್ಷಣವನ್ನು ಲೈವ್ ತೋರಿಸಲು ಇಸ್ರೋ ಸಿದ್ಧತೆ

#ISRO #Chandrayaan-3 #landing # moment live
ಬೆಂಗಳೂರು ಆ 22;ಭಾರತದ ಮಹತ್ವದ ಯೋಜನೆಯಾದ ಚಂದ್ರಯಾನ 3(Chandrayana 3) ತನ್ನ ಗುರಿಯನ್ನ ಭಾಗಶಃ ತಲುಪಿದೆ. ಚಂದ್ರಯಾನ-3 ಮತ್ತು ಚಂದ್ರಯಾನ-2 ಆರ್ಬಿಟರ್ ಮಧ್ಯೆ ಸಂವಹನ ಕಾರ್ಯ ಜೋಡಿಸುವ ಕೆಲಸ ಯಶಸ್ವಿಯಾಗಿದೆ. ಆಗಸ್ಟ್ 23 ರಂದು (ಬುಧವಾರ) ಸಂಜೆ 6:04 ಕ್ಕೆ ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಮ್ ಲ್ಯಾಂಡರ್ ಇಳಿಯಲಿದೆ ಎಂದು ಇಸ್ರೋ ತಿಳಿಸಿದೆ. ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್ ಇಳಿಯುವುದನ್ನು ಆಗಸ್ಟ್ 23 ರಂದು ಸಂಜೆ 5:27 ರಿಂದ ನೇರಪ್ರಸಾರ ವೀಕ್ಷಿಸಬಹುದು.ಲ್ಯಾಂಡಿಂಗ್ ಕ್ಷಣವನ್ನ ಇಡೀ ಜಗತ್ತಿಗೆ ತಿಳಿಸಲು ಇಸ್ರೋ ಲೈವ್ ವ್ಯವಸ್ಥೆ ಕೂಡ ಮಾಡಿದೆ. ಚಂದ್ರಯಾನ 3 ಲ್ಯಾಂಡಿಂಗ್ ಕ್ಷಣವನ್ನ ಇಡೀ ಜಗತ್ತಿಗೆ ತೋರಿಸಲು ಇಸ್ರೋ ಇಸ್ರೋ ಯುಟೂಬ್​ : https://youtube.com/watch?v=DLA_64yz8Ss ಇಸ್ರೋ ಅಧಿಕೃತ ಫೇಸ್​ಬುಕ್​ನಲ್ಲೂ (https://www.facebook.com/ISRO) ಸಹ ನೀವು ಚಂದ್ರನ ಮೇಲೆ ಲ್ಯಾಂಡಿಂಗ್ ಆಗುವುದನ್ನು ಕಣ್ತುಂಬಿಕೊಳ್ಳಬಹುದು.ಇಸ್ರೋ ವೆಬ್​ಸೈಟ್​ : https://isro.gov.in ಇಲ್ಲಿ ವೀಕ್ಷಿಸಬಹುದು .

ಇಸ್ರೋ ಅಂತಿಮ ಡಿ-ಬೂಸ್ಟಿಂಗ್ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ಆಗಸ್ಟ್ 23 ರಂದು ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್​ ಮಾಡಲಿದೆ.ಚಂದ್ರಯಾನ-3 ಗಗನನೌಕೆಯು ಚಂದ್ರನ ಸನಿಹದಿಂದ ಫೋಟೋಗಳನ್ನು ಕ್ಲಿಕ್ಕಿಸಿದೆ. ವಿಕ್ರಮ್ ಲ್ಯಾಂಡರ್ ಕ್ಲಿಕ್ಕಿಸಿದ ಈ ಫೋಟೋಗಳನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಅಧಿಕೃತ ಟ್ವಿಟರ್(Twitter) ಖಾತೆಯಲ್ಲಿ ಹಂಚಿಕೊಂಡಿದೆ. ಫೋಟೋದಲ್ಲಿ ಭೂಮಿಗೆ ಕಾಣಿಸದ ಚಂದ್ರನ ಮತ್ತೊಂದು ಮುಖ ಕಾಣಿಸಿದೆ. ಚಂದ್ರನ ಮಗ್ಗಲಿನಲ್ಲಿ ಸಾಕಷ್ಟು ಕುಳಿಗಳು ಇರುವುದು ಫೋಟೋದಲ್ಲಿ ಕಂಡು ಬಂದಿದೆ. ಲ್ಯಾಂಡರ್ ಹಜಾರ್ಡ್ ಡಿಟೆಕ್ಷನ್ ಆಂಡ್‌ ಅವಾಯಿಡೆನ್ಸ್ ಕ್ಯಾಮೆರಾ ಮೂಲಕ ಈ ಚಿತ್ರಗಳನ್ನು ಸೆರೆಹಿಡಿಯಲಾಗಿದೆ.ಜುಲೈ 14 ರಂದು ಭಾರತೀಯ ಬಾಹ್ಯಕಾಶ ಸಂಸ್ಥೆ-ಇಸ್ರೋ ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಚಂದ್ರಯಾನ-3 ಅನ್ನು ಉಡಾವಣೆ ಮಾಡಿತ್ತು. ಒಂದೊಂದೇ ಕಕ್ಷೆ ಪ್ರವೇಶಿಸುತ್ತಾ ಆಗಸ್ಟ್ 5 ರಂದು ಚಂದ್ರನ ಕಕ್ಷೆಯನ್ನು ಪ್ರವೇಶಿಸಿತ್ತು. ಬಳಿಕ ವಿಕ್ರಮ್ ‍ಲ್ಯಾಂಡರ್ ಭೂಮಿಯ ಜತೆಗೆ ಚಂದ್ರನ ವಿಡಿಯೋ ದೃಶ್ಯ ಚಿತ್ರೀಕರಿಸಿ ರವಾನಿಸಿತ್ತು.

Related News

spot_img

Revenue Alerts

spot_img

News

spot_img