# ISRO #Chairman #S Somnath #received #honorary doctorate #Governor
ಬೆಂಗಳೂರು;ಸೋಮನಾಥ್‌ಗೆ ಗೌರವ ಡಾಕ್ಟರೇಟ್ ಪ್ರದಾನ ಇಸ್ರೋ(Isro) ಅಧ್ಯಕ್ಷ ಎಸ್.ಸೋಮನಾಥ್ ಅವರಿಗೆ ಬೆಂಗಳೂರಿನ ರಾಜಭವನದಲ್ಲಿ ಬುಧವಾರದಂದು ರಾಜ್ಯಪಾಲ ಥಾವರ್ ಚಂದ್ ಗೆಹೋಟ್ ಅವರು ಗೌರವ ಡಾಕ್ಟರೇಟ್ ಪ್ರದಾನ ಮಾಡಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದ 58ನೇ ಘಟಿಕೋತ್ಸವ ಪ್ರಯುಕ್ತ ಎಸ್.ಸೋಮನಾಥ್ ಅವರಿಗೆ ಗೌರವ ಡಾಕ್ಟರೇಟ್ ಘೋಷಿಸಲಾಗಿತ್ತು. ಆದರೆ, ಘಟಿಕೋತ್ಸವ ದಿನದಂದು ಭಾಗವಹಿಸಲು ಸಾಧ್ಯವಾಗದ ಹಿನ್ನೆಲೆ ಇದೀಗ ಪ್ರದಾನ ಮಾಡಲಾಗಿದೆ.ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರ ಮತ್ತು ಇಸ್ರೋ ಕೈಗೊಂಡ ವಿವಿಧ ದೊಡ್ಡ ಪ್ರಮಾಣದ ಯೋಜನೆ ಗಳಲ್ಲಿ ಪ್ರಮುಖ ಪಾತ್ರಗಳೊಂದಿಗೆ, ಸೋಮನಾಥ್‌ರ ಕೊಡುಗೆಯು ಈ ಮಿಷನ್ ನ್ನು ಮುಂದಕ್ಕೆ ಕೊಂಡೊ ಯ್ಯುತ್ತಿದೆ. ಅವರ ನಾಯಕತ್ವ ಮತ್ತು ದೃಷ್ಟಿ ಭಾರತದ ಬಾಹ್ಯಾಕಾಶ ಪರಿಶೋಧನಾ ಕಾರ್ಯ ಕ್ರಮಗಳನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಸಹಾಯ ಮಾಡುತ್ತಿದೆ ಎಂದರು.ಇಸ್ರೋದ ಮಹತ್ವಾಕಾಂಕ್ಷಿ ಪ್ರಯತ್ನವಾಗಿದ್ದ ಚಂದ್ರಾಯಣ-2 ಬಾಹ್ಯಾಕಾಶ ನೌಕೆಯ ಲ್ಯಾಂಡರ್ಗೆ ಬಳಸಿದ್ದ ಎಂಜಿನ್ಗಳ ಅಭಿವೃದ್ಧಿ ಮತ್ತು ಜಿಸ್ಯಾಟ್-9ರಲ್ಲಿ ಬಳಕೆಯಾದ ಎಲೆಕ್ಟ್ರಿಕ್ ಪ್ರೊಪಲ್ಷನ್ ವ್ಯವಸ್ಥೆಯನ್ನು ರೂಪಿಸಿದ ಶ್ರೇಯವೂ ಸೋಮನಾಥ್ ಅವರಿಗೆ ಸೇರುತ್ತದೆ.ಜಿಎಸ್ಎಲ್ವಿ ಮಾರ್ಕ್ 3 (GSLV Mk-III) ಲಾಂಚರ್ ರೂಪಿಸುವಲ್ಲಿ ಸೋಮನಾಥ್ ಮುಖ್ಯಪಾತ್ರ ವಹಿಸಿದ್ದರು. ತಮ್ಮ ವೃತ್ತಿ ಜೀವನದ ಆರಂಭದ ದಿನಗಳಲ್ಲಿ ಪಿಎಸ್ಎಲ್ವಿ (Polar Satellite Launch Vehicle – PSLV) ಉಡಾವಣಾ ವಾಹನ ರೂಪಿಸುವ ತಂಡದಲ್ಲಿ ಟೀಂ ಲೀಡರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್, ಸರಕಾರದ ಪ್ರಧಾನ ಕಾರ್ಯ ದರ್ಶಿ ಶ್ರೀಕರ್ ಎಂ.ಎಸ್., ಬೆಂಗಳೂರು ವಿವಿ ಕುಲಪತಿ ಪ್ರೊ. ಜಯಕರ ಎಸ್.ಎಂ. ಮತ್ತಿತರರು ಇದ್ದರು.
