26.7 C
Bengaluru
Sunday, December 22, 2024

ನೀವು ಬಾಡಿಗೆ ಮನೆಯಲ್ಲಿ ಇದ್ದೀರ? ಹಾಗಾದರೆ ನಿಮ್ಮ ಈ 10 ಹಕ್ಕುಗಳ ಬಗ್ಗೆ ತಿಳಿದುಕೊಳ್ಳಿ!

#Builders#Buyers#Help Guide#Indian Real Estate#Owners#Real Estate Terms#Tenants.

ನವದೆಹಲಿ , ಮೇ.12: ಹಳ್ಳಿಗಳ ದೇಶದಲ್ಲಿ ಹೆಚ್ಚಿನ ಜನರು ತಮ್ಮ ಕೆಲಸದ ಕಾರಣಕ್ಕಾಗಿ ನಗರ ಪ್ರದೇಶಗಳಲ್ಲಿ ಬಂದು ವಾಸಿಸುತ್ತಿರುತ್ತಾರೆ. ಇದೇ ಕಾರಣಕ್ಕೆ ಬಾಡಿಗೆ ಮನೆಗಳ ವಾಸ್ತವ್ಯ ಅನಿವಾರ್ಯ. ಆದರೆ, ಭಾರತೀಯ ಮಹಾನಗರಗಳಲ್ಲಿ ಮನೆ ಬಾಡಿಗೆ ದಿನದಿಂದ ದಿನಕ್ಕೆ ದುಬಾರಿಯಾಗುತ್ತಿದೆ.
ಇದರ ಜೊತೆಗೆ ಬಾಡಿಗೆದಾರರಿಗೆ ತಮ್ಮ ಹಕ್ಕುಗಳ ಬಗ್ಗೆ ತಿಳಿದಿರುವುದೇ ಇಲ್ಲ.

ಹೀಗಾಗಿ ಮನೆಯನ್ನು ಬಾಡಿಗೆಗೆ ಪಡೆಯಲು ಹುಡುಕುತ್ತಿರುವ ವ್ಯಕ್ತಿಯು ಬಾಡಿಗೆ ನಿಯಂತ್ರಣ ಕಾಯಿದೆಯಡಿಯಲ್ಲಿ ಇರುವ ಮೂಲಭೂತ ಹಕ್ಕುಗಳ ಬಗ್ಗೆ ತಿಳಿದಿರಬೇಕು. ಈ ಮೂಲಭೂತ ಹಕ್ಕುಗಳು ಅನ್ಯಾಯದಿಂದ ಮನೆಯಿಂದ ಹೊರಹಾಕುವಿಕೆಯ ವಿರುದ್ಧದ ಹಕ್ಕು, ನ್ಯಾಯಯುತ ಬಾಡಿಗೆಯನ್ನು ಪಾವತಿಸುವ ಹಕ್ಕು ಮತ್ತು ಇತರ ಅಗತ್ಯ ಸೇವೆಗಳನ್ನು ಪಡೆಯುವ ಹಕ್ಕನ್ನು ಒಳಗೊಂಡಿವೆ.
ಕಾನೂನಿನಡಿಯಲ್ಲಿ ತಮಗಿರುವ ಈ ಹಕ್ಕುಗಳ ಬಗ್ಗೆ ತಿಳಿಯದೆ, ಬಾಡಿಗೆದಾರರು ಶೋಷಣೆಗೆ ಬಲಿಯಾಗಬಹುದು. ಬಾಡಿಗೆ ನಿಯಂತ್ರಣ ಕಾಯಿದೆಯಡಿ ಒಳಗೊಂಡಿರುವ ಬಾಡಿಗೆದಾರನಿಗಿರುವ ವಿವಿಧ ಹಕ್ಕುಗಳನ್ನು ಕೆಳಗೆ ನೋಡುವ.

1. ಬಾಡಿಗೆದಾರನ ಮನೆ ವಾಸಯೋಗ್ಯವಾಗಿರಬೇಕು.

2. ತಮ್ಮ ಮನೆ ಮಾಲೀಕರ ಗುರುತು ಪರಿಚಯ ಚೆನ್ನಾಗಿರಬೇಕು.

3. ಯಾವುದೇ ತೊಂದರೆಯಿಲ್ಲದೆ ಮನೆಯಲ್ಲಿ ವಾಸಿಸುವ ಹಕ್ಕು

4. ತಾವು ಬಾಡಿಗೆಗೆ ಇರುವ ಮನೆಯ ಕಾರ್ಯಕ್ಷಮತೆ ಪ್ರಮಾಣಪತ್ರವನ್ನು ( Energy Performance Certificate) ನೋಡುವ ಹಕ್ಕು.

5. ಬಾಡಿಗೆಯಲ್ಲಿ ಅನ್ಯಾಯವಾಗಿ ಹೆಚ್ಚಳ ಮಾಡಿದರೇ ಅದರ ವಿರುದ್ಧ ಪ್ರತಿಭಟಿಸುವ ಹಕ್ಕು

6. ಮನೆಯಿಂದ ಬಲವಂತವಾಗಿ ಹೊರಹಾಕುವಿಕೆಯನ್ನು ನಿರಾಕರಿಸುವ/ಪ್ರತಿಭಟಿಸುವ ಹಕ್ಕು

7. ಮನೆ ಬಾಡಿಗೆ ಅವಧಿಯ ಕೊನೆಯಲ್ಲಿ ಭದ್ರತಾ ಠೇವಣಿ ಮರಳಿ ಪಡೆಯುವ ಹಕ್ಕು

8. ಮನೆ ಮಾಲೀಕನು ಬಾಡಿಗೆದಾರರಿಗೆ ಕರಾರು ಮುಕ್ತಾಯವಾಗಬೇಕು ಎಂದು ಹೇಳಿದರೇ, ನೋಟಿಸ್ ಅವಧಿ ನಿಡಬೇಕು ಎಂದು ಕೇಳುವ ಹಕ್ಕು

9. ಬಾಡಿಗೆ ನಿಯಂತ್ರಣ ಕಾಯಿದೆಯಡಿಯಲ್ಲಿ ಬಾಡಿಗೆದಾರರ ವಾರಸುದಾರರು ಕೂಡ ಎಲ್ಲಾ ಹಕ್ಕುಗಳಿಗೆ ಅರ್ಹರಾಗಿರುತ್ತಾರೆ.

10. ಬಾಡಿಗೆದಾರರು ಯಾವುದೇ ವಿವಾದಗಳನ್ನು ಬಾಡಿಗೆ ನಿಯಂತ್ರಣ ನ್ಯಾಯಾಲಯಕ್ಕೆ ಹೋಗುವ ಹಕ್ಕು
ಬಾಡಿಗೆ ನಿಯಂತ್ರಣ ಕಾನೂನು ಬಾಡಿಗೆದಾರರು ಮತ್ತು ಮನೆ ಮಾಲೀಕರ ಹಕ್ಕುಗಳನ್ನು ರಕ್ಷಿಸುತ್ತದೆ. ಬಾಡಿಗೆದಾರರನ್ನು ಬಲವಂತವಾಗಿ ಹೊರಹಾಕಲು ಭೂಮಾಲೀಕರ ಅಧಿಕಾರವನ್ನು ನಿರ್ಬಂಧಿಸುತ್ತದೆ ಮತ್ತು ಹಿಡುವಳಿದಾರರಿಗೆ ಹಿಡುವಳಿ ಭದ್ರತೆಯನ್ನು ಖಾತ್ರಿಗೊಳಿಸುತ್ತದೆ.

ಈ ಕಾಯಿದೆಯ ಪ್ರಕಾರ ಬಾಡಿಗೆ ವಸತಿಗೆ ತೆರಳುವ ಮೊದಲು ಬಾಡಿಗೆದಾರರು ಮತ್ತು ಮನೆ ಮಾಲೀಕರು ನಡುವೆ ಲಿಖಿತ ಒಪ್ಪಂದಕ್ಕೆ ಸಹಿ ಹಾಕಬೇಕು. ಬಾಡಿಗೆ ಒಪ್ಪಂದವು ಮಾನ್ಯವಾಗಿದ್ದರೆ, ಹಕ್ಕುಗಳು ಮತ್ತು ಕರ್ತವ್ಯಗಳನ್ನು ಕಾನೂನಿನಿಂದ ರಕ್ಷಿಸಬಹುದು ಮತ್ತು ಜಾರಿಗೊಳಿಸಬಹುದು.

Related News

spot_img

Revenue Alerts

spot_img

News

spot_img