ಬೆಂಗಳೂರು, ಜೂ. 10 : ಮರದ ನೆಲ ಹಾಸಿನ ಮನೆಗಳು ಈಗ ಭಾರತದ ಟ್ರೆಂಡ್ ಆಗಿವೆ. ಮನೆಯನ್ನು ನವೀಕರಿಸುವ ಯೋಚನೆ ಇದ್ದರೆ, ಅಥವಾ ಹೊಸ ಮನೆಯನ್ನು ಕಟ್ಟುವುದಾದರೆ, ಈಗ ಮರದ ನೆಲಹಾಸುವನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಮನೆಗೆ ರಾಜರ ಕಾಲದ ಅರಮನೆಗಳ ವೈಭವವನ್ನು ತರಲು ಮರದ ನೆಲಹಾಸು ಸಹಕಾರಿಯಾಗಿದೆ. ಮರದ ನೆಲಹಾಸುವಿಗೆ ಸಾಕಷ್ಟು ರೀತಿಯ ಆಯ್ಕೆಗಳಿವೆ. ಯಾವ ಮರದ ನೆಲಹಾಸು ಉತ್ತಮ.
ಹಾರ್ಡ್ ವುಡ್ ಅನ್ನು ನಿಮ್ಮ ಮನೆಯ ನೆಲಕ್ಕೆ ಅಳವಡಿಸಿದರೆ, ಸೂಕ್ತ. ಇದನ್ನು ಸ್ವಚ್ಛಗೊಳಿಸುವುದು ಸುಲಭ. ಇದರಿಂದ ಹೆಚ್ಚಿನ ಸಮಸ್ಯೆಗಳು ಕಾಣಿಸುವುದಿಲ್ಲ. ಹಾರ್ಡ್ ವುಡ್ ಬಹಳ ವರ್ಷಗಳ ಕಾಲ ಬಾಳಿಕೆ ಸಹ ಬರುತ್ತದೆ. ಇದನ್ನು ಹಲವು ಬಾರಿ ಪರಿಷ್ಕರಿಸಬಹುದು. ಇದನ್ನು ಅಳವಡಿಸಲು ಕಾರ್ಮಿಕರ ಸಂಖ್ಯೆ ಹೆಚ್ಚಿರಬೇಕಾಗುತ್ತದೆ. ಇನ್ನು ಭಾರತದಲ್ಲಿ ಬೆಂಗಳೂರು ಮತ್ತು ಈಶಾನ್ಯ ಭಾರತದ ಪ್ರದೇಶಕ್ಕೆ ಹಾರ್ಡ್ ವುಡ್ ನೆಲ ಹಾಸುವಿನ ಮನೆಗಳು ಹೊಂದಿಕೆಯಾಗುತ್ತವೆ. ಇಲ್ಲಿನ ವಾತಾವರಣಕ್ಕೆ ಹಾರ್ಡ್ ವುಡ್ ಸೂಕ್ತವಾಗಿದೆ. ಇದನ್ನು ಹೆಚ್ಚಿನ ಶಾಖ ಇರುವ ಪ್ರದೇಶದಲ್ಲಿ ಅಳವಡಿಸಲು ಕಷ್ಟವಾಗುತ್ತದೆ. ಉಷ್ಣತೆ ಹೆಚ್ಚಿದ್ದರೆ, ಮರ ಕುಗ್ಗಬಹುದು. ಹಾರ್ಡ್ ವುಡ್ ಅನ್ನು ಸುಲಭವಾಗಿ ನಿರ್ವಹಿಸಬಹುದು.
ಇಂಜಿನಿಯರ್ಡ್ ವುಡ್ ಮನೆಯ ಯಾವ ಪ್ರದೇಶಕ್ಕದರೂ ಹೊಂದಿಕೊಲ್ಳುತ್ತದೆ. ಇದನ್ನು ಒಂದು ಅಥವಾ ಎರಡು ಬಾರಿ ಮಾತ್ರವೇ ರಿಫರ್ನಿಶ್ ಮಾಡಬಹುದು. ಇಂಜಿನಿಯರ್ಡ್ ವುಡ್ ನ ನೆಲಹಾಸು ಮುಂಬೈ ಮತ್ತು ಕೊಲ್ಕತ್ತಾ ಪ್ರದೇಶಕ್ಕೆ ಸರಿ ಹೊಂದುತ್ತದೆ. ಇಂಜಿನಿಯರ್ಡ್ ವುಡ್ ನ ನೆಲಹಾಸು ತೇವಾಂಶದ ಪ್ರದೇಶದಿಂದ ದೂರವಿದ್ದರೆ ಚೆನ್ನ, ಇಲ್ಲದಿದ್ದರೆ, ಬೇಗನೇ ನಿಮ್ಮ ಮನೆಯ ನೆಲಹಾಸು ಹಾಳಾಗಬಹುದು.
ಹೆಸರೇ ಸೂಚಿಸುವಂತೆ ಲ್ಯಾಮಿನೇಟೆಡ್ ವುಡ್ ಮರವಲ್ಲ. ಬದಲಿಗೆ ಸಿಂಥೆಟಿಕ್ ಮೇಟಿರಿಯಲ್ ನಿಂದ ತಯಾರಿಸಿದ್ದು. ಇದನ್ನು ಲ್ಯಾಮಿನೇಟ್ ಮಾಡಲಾಗಿರುತ್ತದೆ. ಇದರ ನೆಲವು ಒದ್ದೆ ಇದ್ದಾಗ ಜಾರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದರೆ ನೆಲದ ಮೇಲೆ ಯಾವುದೇ ಕಲೆಗಳನ್ನು ಉಳಿಸುವುದಿಲ್ಲ. ಇನ್ನು ಬೆಚ್ಚಿಗೆ ಇಡಲು ಇದು ಸಹಕಾರಿಯಾಗುತ್ತದೆ. ಕಾಲುಗಳು ಕೊರೆಯಲು ಬಿಡುವುದಿಲ್ಲ. ಇದನ್ನು ರಾಜಸ್ಥಾನ, ಹರಿಯಾಣ, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದಲ್ಲಿ ವಾಸಿಸುವ ಜನರು ಖಂಡಿತವಾಗಿಯೂ ಇದನ್ನು ಪರಿಗಣಿಸಬಹುದು. ಇನ್ನು ಇದನ್ನು ಅಳವಡಿಸುವುದು ಕೂಡ ಬಹಳ ಸುಲಭದ ಕೆಲಸವಾಗಿದೆ.
ಪರಿಸರ ಸ್ನೇಹಿಯಾಗಿರುವ ಆಧುನಿಕ ಮನೆಗಳಿಗೆ ಸರಿ ಹೊಂದುವ ಬಿದಿರು. ಅನುಸ್ಥಾಪಿಸಲು ಸುಲಭ. ಅತ್ಯಂತ ಬೆಚ್ಚಗಿನ ಸ್ಥಳಗಳನ್ನು ಹೊರತುಪಡಿಸಿ, ಹೆಚ್ಚಿನ ಹವಾಮಾನ ಪರಿಸ್ಥಿತಿಗಳಲ್ಲಿ ಬಿದಿರು ಸ್ನೇಹಪರವಾಗಿರುತ್ತದೆ. ಆದರೆ ಇದು ಎಚ್ಚರಿಕೆಯೊಂದಿಗೆ ಕಾಪಾಡಬೇಕಾಗುತ್ತದೆ. ನಿಮ್ಮ ಪೀಠೋಪಕರಣಗಳನ್ನು ಆಗಾಗ್ಗೆ ಚಲಿಸುವ ಮೂಲಕ ಏಕರೂಪದ ಸೂರ್ಯನ ಬೆಳಕನ್ನು ನೀವು ಖಚಿತಪಡಿಸಿಕೊಳ್ಳಬೇಕು. ಇದು ಅನುಸ್ಥಾಪಿಸಲು ಸುಲಭವಾಗಿರುತ್ತದೆ