ಬೆಂಗಳೂರು, ಜೂ. 14 : ಎಲ್ಲಾ ವಯಸ್ಸಿನವರೂ ಜೀವನದ ಪ್ರತೀ ಹಂತದಲ್ಲೂ ಉಳಿತಾಯವನ್ನು ಮಾಡಲು ಎಫ್ಡಿ ಸಹಕಾರಿಯಾಗಿದೆ. ಇದು ಆರ್ಥಿಕ ತುರ್ತು ಪರೀಸ್ಥಿತಿಯಲ್ಲಿ ಸಹಾಯ ಮಾಡುತ್ತದೆ. ಹಾಗಾಗಿಯೇ ಎಫ್ಡಿ ಅನ್ನು ಸುರಕ್ಷಿತ ಹೂಡಿಕೆಯ ಸಾಧನವಾಗಿ ಪರಿಗಣಿಸಲಾಗಿದೆ. ಎಫ್ ಡಿ ದರಗಳು ಹೆಚ್ಚಾದಂತೆಯೇ ಜನಸಾಮಾನ್ಯರಿಗೆ ಆಕರ್ಷಕ ಉಳಿತಾಯದ ಆಯ್ಕೆಯಾಗಲಿವೆ. ಅಲ್ಲದೆ, ಎಫ್ಡಿಗಳಲ್ಲಿ ಹೂಡಿಕೆ ಮಾಡುವಾಗ ಎಷ್ಟು ಅವಧಿಯ ಎಫ್ಡಿಗಳಲ್ಲಿ ಹೂಡಿಕೆ ಮಾಡಬೇಕು ಎಂಬುದನ್ನು ನಿರ್ಧರಿಸಬೇಕು.
ನೀವು ರಿಸ್ಕ್ ತೆಗೆದುಕೊಳ್ಳುವ ಹೂಡಿಕೆದಾರರಾಗಿದ್ದರೆ, ಅಲ್ಪಾವಧಿಯಿಂದ – ಮಧ್ಯಮಾವಧಿಯ ಎಫ್ಡಿಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಮಧ್ಯಮ ಅವಧಿಯಲ್ಲಿ ನಿಮಗೆ ಹಣದ ಅಗತ್ಯವಿದ್ದರೆ, 2 ರಿಂದ 3 ವರ್ಷಗಳ ಅವಧಿಯ ಎಫ್ಡಿಯಲ್ಲಿ ಠೇವಣಿ ಮಾಡಬಹುದು. ಹಿರಿಯ ನಾಗರಿಕರು ಸಾಮಾನ್ಯವಾಗಿ ರಿಸ್ಕ್ ತೆಗೆದುಕೊಳ್ಳುವುದು ಕಡಿಮೆ ಆಗಿರುತ್ತದೆ. ಹಿರಿಯ ನಾಗರಿಕರು ಸಾಮಾನ್ಯ ಜನರಿಗಿಂತ 0.25% ರಿಂದ 0.5% ರಷ್ಟು ಹೆಚ್ಚಿನ ಬಡ್ಡಿದರಗಳನ್ನು ಪಡೆಯುತ್ತಾರೆ.
ಅಲ್ಪಾವಧಿ ಹಾಗೂ ಧೀರ್ಘಾವಧಿ ಎಫ್ ಡಿಗಳ ಮೇಲಿನ ಬಡ್ಡಿ ದರ ಕನಿಷ್ಠ 7 ದಿನಗಳಿಂದ ಹಿಡಿದು 10 ವರ್ಷಗಳವರೆಗೆ ಇರುತ್ತದೆ. ಅಲ್ಪಾವಧಿ, ಮಧ್ಯಮಾವಧಿ, ದೀರ್ಘಾವಧಿಯ ಎಫ್ ಡಿಗಳು ಎಂದು ವರ್ಗೀಕರಿಸಲಾಗಿದೆ. 7 ದಿನಗಳಿಂದ 12 ತಿಂಗಳುಗಳ ಅವಧಿಯ ಎಫ್ಡಿಗಳು ಅಲ್ಪಾವಧಿಯದ್ದಾಗಿವೆ. ಇನ್ನು ನಿಮ್ಮ ಬಳಿ ದೊಡ್ಡ ಮೊತ್ತವಿದ್ದರೆ, ಒಂದೇ ಎಫ್ಡಿ ತೆರೆಯುವುದು ಸೂಕ್ತವೇ ಇಲ್ಲ, ಹಣವನ್ನು ವಿಂಗಡಿಸಿ ಎರಡು ಮೂರು ತೆರೆಯುವುದು ಉತ್ತಮವೇ ಎಂಬುದನ್ನು ನೋಡಬೇಕು.
ದೊಡ್ಡ ಮೊತ್ತದ ಹಣವನ್ನು ಒಂದೇ ಬಾರಿಗೆ ಠೇವಣಿ ಮಾಡಿದರೆ, ನಿಮಗೆ ಹಣ ಬೇಕೆಂದಾಗ ಪಡೆಯಲು ಸಾಧ್ಯವಾಗುವುದಿಲ್ಲ. ಒಂದೇ ನಿಶ್ಚಿತ ಠೇವಣಿ ಇದ್ದಾಗ ಒಟ್ಟಿಗೆ ರಿಟರ್ನ್ಸ್ ಅನ್ನು ಪಡೆಯಬಹುದು. ಆದರೆ, ಎಫ್ಡಿಯನ್ನು ರದ್ದುಪಡಿಸಲು ದಂಡವನ್ನು ಕಟ್ಟ ಬೇಕಾಗುತ್ತದೆ. ಇನ್ನು ಹಣವನ್ನು ವಿಂಗಡಣೆ ಮಾಡಿದಾಗ ಸಣ್ಣ ಸಣ್ಣ ಎಫ್ಡಿಯಲ್ಲಿ ಹೂಡಿಕೆ ಮಾಡಬಹುದು. ಆಗ ನಿಮಗೆ ತುರ್ತು ಹಣ ಬೇಕೆಂದಾಗ ಯಾವುದಾದರೂ ಒಂದು ಎಫ್ಡಿಯನ್ನು ಮಾತ್ರವೇ ಪಡೆಯಬಹುದು. ಆದರೆ, ಹೆಚ್ಚಿನ ಎಫ್ಡಿಗಳನ್ನು ಟ್ರ್ಯಾಕ್ ಮಾಡುವುದು ಕಷ್ಟವಾಗುತ್ತದೆ.