ಬೆಂಗಳೂರು, ಫೆ. 22 : ಡೆಡ್ ಎಂಡ್ ನಿವೇಶನದ ಬಗ್ಗೆ ಬಹಳ ಮುಖ್ಯವಾಗಿ ತಿಳಿದುಕೊಳ್ಳಬೇಕಾದ ವಿಚಾರವೆಂದರೆ, ಒಂದು ಬೀದಿ ಅಥವಾ ರಸ್ತೆ ಎಲ್ಲಿ ಕೊನೆಯಾಗುತ್ತದೋ ಅದನ್ನು ಡೆಡ್ ಎಂಡ್ ಎಂದು ಕರೆಯುತ್ತೇವೆ. ಡೆಡ್ ಎಂಡ್ ರಸ್ತೆಯಲ್ಲಿ ಇರುವ ಕೊನೆಯ ಮನೆಯನ್ನು ಡೆಡ್ ಎಂಡ್ ನಿವೇಶನ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಡೆಡ್ ಎಂಡ್ ಎಂದರೆ, ಕೊನೆ, ಮುಂದೆ ದಾರಿ ಇಲ್ಲ ಎನ್ನುವ ಅರ್ಥವನ್ನು ಕೊಡುತ್ತದೆ. ಕೆಲವರು ಬದುಕಿನ ಡೆಡ್ ಎಂಡ್, ಮೃತ್ಯು ಎಂದು ಹೇಳುತ್ತಾರೆ. ಆದರೆ, ಎಲ್ಲಾ ಡೆಡ್ ಎಂಡ್ ಗಳು ಮೃತ್ಯುವಿಗೆ ಸಂಬಂಧಿಸಿದ್ದಲ್ಲ ಎಂಬುದನ್ನು ಹೇಳಲಾಗಿದೆ.
ಡೆಡ್ ಎನ್ನುವುದನ್ನು ಮೃತ್ಯ ಎಂದು ಹೇಳಲಾಗುತ್ತದೆ. ಆದರೆ, ಯಾವ ದಿಕ್ಕಿನ ನಿವೇಶನದ ಬಗ್ಗೆ ಡೆಡ್ ಎಂಡ್ ಅನ್ನು ಹೇಗೆ ವಿವರಿಸಲಾಗಿದೆ ಎಂದು ತಿಳಿಯೋಣ ಬನ್ನಿ. ಉತ್ತರ ದಿಕ್ಕಿನಿಂದ ದಕ್ಷಿಣ ದಿಕ್ಕಿಗೆ ದಾರಿ ಏನಾದರೂ ಕೊನೆಯಾಗಿದ್ದರೆ, ಆ ದಾರಿಯಲ್ಲಿರುವ ಡೆಡ್ ಎಂಡ್ ನ ಎರಡೂ ನಿವೇಶನಗಳು ಅಶುಭವಾಗಿರುತ್ತವೆ. ಹಾಗಾಗಿ ಡೆಡ್ ಎಂಡ್ ಅಂತ ಬಂದಿದ್ದರೆ, ಅದು ದಕ್ಷಿಣ ದಿಕ್ಕಿನಲ್ಲಿದ್ದರೆ, ಅಗತ್ಯವಾಗಿ ಆ ನಿವೇಶನವನ್ನು ಖರೀದಿಸುವುದು ಸೂಕ್ತವಲ್ಲ. ಆದಷ್ಟೂ ಇಂತಹ ನಿವೇಶನಗಳನ್ನು ಖರೀದಿಸದೇ ಇರುವುದು ಬಹಳ ಸೂಕ್ತ ಎಂದು ಹೇಳಲಾಗಿದೆ.
ಪೂರ್ವ ದಿಕ್ಕಿನಲ್ಲಿ ಡೆಡ್ ಎಂಡ್ ಏನಾದರೂ ಬಂದರೆ, ಅಂದರೆ, ಅದು ವಿಧಿ ಶೂಲ ಎಂದು ಹೇಳಲಾಗುತ್ತದೆ. ಅದೂ ಕೂಡ ಅಶುಭ ಎಂದು ಹೇಳಲಾಗುತ್ತದೆ. ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ಡೆಡ್ ಎಂಡ್ ಬಂದರೆ, ಮತ್ತೆ ಅಲ್ಲಿ ಗಾಳಿ ಬೆಳಕಿನ ಅಭಾವವಿರುತ್ತದೆ. ಹಾಗಾಗಿ ಆದಷ್ಟು ಡೆಡ್ ನಿವೇಶನಗಳನ್ನು ಅವಾಯ್ಡ್ ಮಾಡುವುದು ಒಳ್ಳೆಯದು. ಏಳಿಗೆಗೆ ಸಹಕಾರಿಯಾಗುವುದಿಲ್ಲ. ಹಾಗಾಗಿ ಉತ್ತರ ಆಗಲೀ, ಪೂರ್ವ ದಿಕ್ಕೇ ಆಗಲಿ ಡೆಡ್ ಎಂಡ್ ಎಂದು ಬಂದಾಗ ಅದು ಅಶುಭ ಎಂದೇ ಹೇಳಲಾಗುತ್ತದೆ. ಹಾಗಾಗಿ ಆದಷ್ಟು ಡೆಡ್ ಎಂಡ್ ನಿವೇಶನಗಳನ್ನು ಖರೀದಿಸದೇ ಇರುವುದು ಒಳ್ಳೆಯದು.
ದಕ್ಷಿಣ, ಪೂರ್ವ, ಉತ್ತರ, ಪಶ್ಚಿಮ ಯಾವ ದಿಕ್ಕಿನಲ್ಲೇ ಡೆಡ್ ಎಂಡ್ ಬಂದಿದ್ದರೂ ಅದು ಅಶುಭವೇ. ಪ್ರಕೃತಿ ದತ್ತವಾಗಿ ಸಿಗುವ ಗಾಳಿ, ಬೆಳಕುಗಳನ್ನು ಬ್ಲಾಕ್ ಮಾಡಲಾಗುತ್ತದೆ. ಇದರಿಂದ ಮನೆಗೆ ಅಶೂಭ ಉಂಟಾಗುತ್ತದೆ. ಅಲ್ಲದೇ, ಮನೆಯ ಏಳಿಗೆಗೂ ಸಮಸ್ಯೆ ಆಗುತ್ತದೆ. ಹಾಗಾಗಿ ಡೆಡ್ ನಿವೇಶನಗಳನ್ನು ಅವಾಯ್ಡ್ ಮಾಡುವುದು ಒಳ್ಳೆಯದು. ಹಾಗಾಂತ ಡೆಡ್ ಎಂಡ್ ಇರುವ ಮನೆಗಳನ್ನು ಖರೀದಿಸದೇ ಇರಲು ಸಾಧ್ಯವಿಲ್. ಡೆಡ್ ಎಂಡ್ ನಿಂದ 100 ಅಡಿ ಅಥವಾ ಎರಡ ರೀಮದ ಮೂರು ಅಡಿ ದೂರವಿರುವ ಮನೆಗಳನ್ನು ಖರೀದಿಸಿದರೆ ಸಮಸ್ಯೆ ಇರುವುದಿಲ್ಲ.