22.9 C
Bengaluru
Friday, July 5, 2024

ನಿಯಮ ಬಾಹಿರ ನೋಂದಣಿ: ಬಳ್ಳಾರಿ ಉಪ ನೋಂದಣಾಧಿಕಾರಿ ಅಮಾನತು

ಜಿಲ್ಲಾಧಿಕಾರಿ ಬಳ್ಳಾರಿ ರವರು, ಜಿಲ್ಲಾನೋಂದಣಾಧಿಕಾರಿ ಬಳ್ಳಾರಿ ರವರ ವರದಿಯನ್ವಯ ಶ್ರೀಯುತ ಆನಂದ ರಾವ್ ಬದನೆಕಾಯಿ ಉಪನೋಂದಣಿ ಅಧಿಕಾರಿ ಬಳ್ಳಾರಿ, ಇವರು ಸರ್ಕಾರದ ಸುತ್ತೋಲೆ ಸಂಖ್ಯೆ ಕಂಇ/344 ಮು.ನೋ.ಮು, 2008 ದಿನಾಂಕ 06/04/2009 ರನ್ನು ಉಲ್ಲಂಘಸಿ ಸಾಕಷ್ಟುಕ್ರಯ ಪತ್ರ ಮಾಡುವ ಬದಲಾಗಿ ಹಕ್ಕು ಬಿಡುಗಡೆಯ ಪತ್ರಗಳನ್ನುನೋಂದಣಿ ಮಾಡಿರುವುದು ಕಂಡು ಬಂದಿದ್ದು ಇದರಿಂದ ಸರ್ಕಾರಕ್ಕೆ ಸಾಕಷ್ಟು ಮುದ್ರಾಂಕ ಶುಲ್ಕ ಪಾವತಿಯನ್ನು ತಪ್ಪಿಸಿ ಸರ್ಕಾರದ ಬೊಕ್ಕಸಕ್ಕೆ ಸಾಕಷ್ಟು ಆರ್ಥಿಕ ನ‍ಷ್ಟವನ್ನು ಉಂಟುಮಾಡಿರುತ್ತಾರೆ ಇದಲ್ಲದೆ,ಸದರಿ ವಹಿವಾಟಿನಲ್ಲಿ ಆಸ್ತಿಗಳು ಭೂ ಪರಿವರ್ತನೆಗೊಳ್ಳದೆ ಕೃಷಿ ಜಮೀನನಲ್ಲಿ ಮಾಡಿರುವ ನಿವೇಶನಗಳಾಗಿದ್ದು ಇವಗಳನ್ನು ಕೇವಲ ಪಹಣಿಗಳ ಆದಾರದ ಮೇರೆಗೆ ಉಪ ನೋಂದಣಾಧಿಕಾರಿ ಬಳ್ಳಾರಿ ರವರು ನಿಯಮಬಾಹೀರವಾಗಿ ನೋಂದಣಿ ಮಾಡಿರುವುದಾಗಿ ಜಿಲ್ಲಾ ನೋಂದಣಾದಿಕಾರಿಗಳು ವರದಿ ಸಲ್ಲಿಸಿರುತ್ತಾರೆ.

ಸದರಿ ವರದಿಯ ಅಂಶಗಳನ್ನು ಮತ್ತು ಅದರೊಂದಿಗೆ ಸಲ್ಲಿಸಲಾದ ಕಾವೇರಿ ಇ.ಸಿ. ಪೋರ್ಟಲ್ ಇಂಡೆಕ್ಸ್‍ : ii ರನ್ನು ಪರಿಶೀಲಿಸಲಾಗಿ ಉಪನೋಂದಣಾದಿಕಾರಿಗಳು ನೂರಾರು ಭೂ ಪರಿವರ್ತನೆಗೊಳ್ಳದಿರುವ ಕೃಷಿ ಜಮೀನಿನಲ್ಲಿ ಮಾಡಿರುವ ನಿವೇಶನಗಳನ್ನು ಖಾತಾ ಫಾರಂ-2 ದಾಖಲೆಯನ್ನು ಪಡೆದುಕೊಳ್ಳದೆ ಮತ್ತು ಹಕ್ಕು ಬಿಡುಗಡೆ ಮೂಲಕ ಕ್ರಯ ಪತ್ರಗಳನ್ನು ನೋಂದಣಿಮಾಡಿದ್ದು ಹಾಗು ಹಲವಾರು ದಾಸ್ತಾವೇಜುಗಳಿಗೆ ಕೈ ಬರಹದ ಅನಧಿಕೃತ ಫಾರಂ-3 ಆಧಾರದ ಮೇಲೆ ನಿಯಮಬಾಹೀರವಾಗಿ ನೊಂದಣಿ ಮಾಡಿರುವುದು ಸಲ್ಲಿಸಲಾದ ದಾಖಲೆಗಳಿಂದ ದೃಢ ಪಟ್ಟಿರುತ್ತದೆ , ಅದ್ದರಿಂದ ಸದರಿಯವರು ಸರ್ಕಾರದ ನಿಯಮ ಹಾಗು ಸುತ್ತೋಲೆಗಳಲ್ಲಿನ ನಿರ್ದೇಶನಗಳನ್ನು ಪಾಲಿಸುವಲ್ಲಿ ವಿಪಲರಾಗಿದ್ದು ಸರ್ಕಾರಿ ಕೆಲಸವನ್ನು ನಿರ್ವಹಿಸುವಲ್ಲಿ ನಿರ್ಲಕ್ಷತೆ ತೋರಿದ್ದು ಇವರ ಬೇಜವ್ದಾರಿ ತನದಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟವನ್ನುಂಟು ಮಾಡಿ ಕರ್ತವ್ಯ ಲೋಪವೆಸಗಿರುವುದು ಕಂಡು ಬರುತ್ತದೆ.

ಈ ಕುರಿತು ಸದರಿ ನೌಕರರಿಗೆ ಕಂದಾಯ ಅಧಿಕಾರಿಗಳ ಸಭೆಗಳಲ್ಲಿ ಮತ್ತು ಮೌಖಿಕವಾಗಿಯು ಹಲವುಬಾರಿ ಎಚ್ಚರಿಕೆಯನ್ನು ನೀಡಿದರೂ ಸಹ ಸದರಿಯವರು ಮೇಲೆ ತಿಳಿಸಿದ ಲೋಪಗಳನ್ನು ತಿದ್ದಿಕೊಳ್ಳದೆ ನಿಯಮಬಾಹೀರವಾಗಿ ನೋಂದಣಿ ಮಾಡುವುದನ್ನು ಮುಂದುವರಿಸಿರುತ್ತಾರೆ , ಆದ್ದರಿಂದ ಬಳ್ಳಾರಿ ಉಪ ನೋಂದಣಿ ಕಛೇರಿಯಲ್ಲಿ ಸರ್ಕಾರದ ಸುತ್ತೋಲೆ ಮತ್ತು ನಿಯಮಾವಳಿಗಳನ್ನು ಉಲ್ಲಂಘಿಸಿ ಮಾಡುತ್ತಿರುವ ನೋಂದಣಿಯನ್ನು ಹಾಗೂ ಇದರಿಂದ ಸರ್ಕಾರದ ಬೊಕ್ಕಸಕ್ಕೆ ಹಾಗುತ್ತಿರುವ ಆರ್ಥಿಕ ನಷ್ಟವನ್ನು ತಡೆಯಲು ಸದರಿ ನೌಕರರ ವಿರುದ್ಧ ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ ಇವರನ್ನು ಸರ್ಕಾರಿ ಸೇವೆಯಿಂದ ನಿಲಂಬನೆಗೊಳಿಸುವುದು ಸೂಕ್ತವೆಂದು ಮನಗಂಡು ಸರ್ಕಾರದ ಬೊಕ್ಕಸಕ್ಕೆ ಆರ್ಥಿಕ ನಷ್ಟವನ್ನುಂಟುಮಾಡಿ ಕರ್ತವ್ಯ ಲೋಪವೆಸಗಿರುವ ಹಿನ್ನಲೆಯಲ್ಲಿ ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ,ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು-1957ರ ನಿಯಮ 10(1)ರಂತೆ ಪ್ರದತ್ತವಾದ ಅಧಿಕಾರವನ್ನು ಚಲಾಹಿಸಿ ಸದರಿಯವರವಿರುದ್ಧ ಇಲಾಖ ವಿಚಾರಣಯನ್ನು ಕಾಯ್ದಿರಿಸಿ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸರ್ಕಾರಿ ಸೇವೆಯಿಂದ ನಿಲಂಬನೆಗೊಳಿಸಿ ಆದೇಶಿಸಿದೆ, ಸದರಿಯವರು ಕರ್ನಾಟಕ ನಾಗರೀಕ ಸೇವಾ ನಿಯಮ – 1956 ರ ನಿಯಮ 98 ರ ಅನ್ವಯ ಜೀವನಾಂಶ ಭತ್ಯೆ ಪಡೆಯಲು ಅರ್ಹರಿರುತ್ತಾರೆ , ಅಮಾನತ್ತಿನ ಅವಧಿಯಲ್ಲಿ ನೌಕರರು ಸಕ್ಷಮ ಪ್ರಾಧಿಕಾರದ ಅನುಮತಿ ಪಡೆಯದೆ ಕೇಂದ್ರ ಸ್ಥಾನವನ್ನು ಬಿಡತಕ್ಕದ್ದಲ್ಲ ಎಂದು ಜಿಲ್ಲಾಧಿಕಾರಿ ಯವರು ಬಳ್ಳಾರಿ ಜಿಲ್ಲೆ , ಬಳ್ಳಾರಿ ಇವರು ದಿನಾಂಕ 25-01-2023 ರಂದು ಆದೇಶ ಹೊರಡಿಸಿರುತ್ತಾರೆ.

Related News

spot_img

Revenue Alerts

spot_img

News

spot_img