26.7 C
Bengaluru
Sunday, December 22, 2024

ಆರ್ಥಿಕ ಹಿಂಜರಿತ ಇರುವಾಗ ಚಿನ್ನ ಅಥವಾ ಭೂಮಿ ಯಾವುದರಲ್ಲಿ ಹೂಡಿಕೆ ಮಾಡುವುದು ಬೆಸ್ಟ್..!!

ಬೆಂಗಳೂರು, ಜೂ. 20 : ಪ್ರತಿಯೊಬ್ಬರೂ ಕೈಯಲ್ಲಿ ಹಣ ಹೆಚ್ಚಿದ್ದರೆ ಖರ್ಚು ಮಾಡಿಬಿಡುತ್ತೇವೆ ಎಂದು ಹಣವನ್ನು ಯಾವುದರಲ್ಲಾದರೂ ಹೂಡಿಕೆ ಮಾಡಲು ಬಯಸುತ್ತಾರೆ. ಹೀಗೆ ಹೂಡಿಕೆ ಮಾಡಲು ನಿಮ್ಮ ಬಳಿ ಹೆಚ್ಚಿನ ಮೊತ್ತವಿದ್ದರೆ, ಚಿನ್ನ ಹಾಗೂ ಭೂಮಿ ಇವೆರಡರಲ್ಲಿ ಯಾವುದು ಬೆಸ್ಟ್ ಎಂಬ ಪ್ರಶ್ನೆ ಏಳಬಹುದು. ಚಿನ್ನದ ಮೇಲೆ ಯಾರಿಗೆ ಆಸೆ ಇಲ್ಲ. ಕೆಲವರಿಗೆ ಎಷ್ಟೇ ಒಡವೆ ಇದ್ದರೂ ಮತ್ತೆ ಮತ್ತೆ ಬೇಕೆನಿಸುತ್ತದೆ. ಇನ್ನು ಕೆಲವರಿಗೆ ಸ್ವಲ್ಪ ಅಧಿಕ ಹಣವಿದ್ದರೆ ಅದನ್ನು ಮನೆ, ನಿವೇಶನ ಅಥವಾ ಜಮೀನುಗಳ ಮೇಲೆ ಹೂಡಿಕೆ ಮಾಡಲು ಬಯಸುತ್ತಾರೆ.

ಇನ್ನು ಕೆಲವರಿಗೆ ಯಾವುದರಲ್ಲಿ ಹೂಡಿಕೆ ಮಾಡುವುದು ಎಂಬ ಗೊಂದಲವಿರುತ್ತದೆ. ಅದರಲ್ಲೂ ಈಗ ಆರ್ಥಿಕ ಹಿಂಜರಿತವಿರುವ ಸಂದರ್ಭದಲ್ಲಿ ಹಣವನ್ನು ಯಾವಿದರಲ್ಲಿ ಹೂಡಿಕೆ ಮಾಡಿದರೆ ಲಾಭ ಸಿಗುತ್ತದೆ ಎಂಬ ಪ್ರಶ್ನೆಯೂ ಎದ್ದಿದೆ. ಹೀಗಿರುವಾಗ ತಜ್ಞರನ್ನು ಸಂಪರ್ಕಿಸುವುದು ಅಗತ್ಯ ವಾಗುತ್ತದೆ. ಇನ್ನು ತಜ್ಞರ ಪ್ರಕಾರ ಆರ್ಥಿಕ ಹಿಂಜರಿತ ಇರುವ ಸಂದರ್ಭದಲ್ಲಿ ಹಣವನ್ನು ಹೂಡಿಕೆ ಮಾಡಲು ಬೆಸ್ಟ್ ಎಂದರೆ ಅದು ಸ್ಟಾಕ್ ಮಾರ್ಕೆಟ್. ಮ್ಯೂಚುವಲ್ ಫಂಡ್ ಗಳಲ್ಲಿ ಹಣ ಹೂಡಿಕೆ ಮಾಡಿದರೆ, ಮುಂದಿನ ದಿನಗಳಲ್ಲಿ ಲಾಭವಿರುತ್ತದೆ.

ನಿಮ್ಮಲ್ಲಿರುವ ಹಣವಮನ್ನು ಇಬ್ಬಾಗ ಮಾಡಿ. ಬಳಿಕ ಒಂದು ಭಾಗವನ್ನು ಸ್ಟಾಕ್ ಮಾರ್ಕೆಟ್ ನಲ್ಲಿ ತಜ್ಷರ ಸಲಹೆ ಮೇರೆಗೆ ಇನ್ವೆಸ್ಟ್ ಮಾಡಿ. ಇದು ಮುಂದಿನ ದಿನಗಳಲ್ಲಿ ನಿಮಗೆ ಲಾಭವನ್ನು ತಂದುಕೊಡುತ್ತದೆ. ಯಾವುದರ ಮೇಲೆ ಹಣವನ್ನು ಎಷ್ಟು ಹೂಡಿಕೆ ಮಾಡಬೇಕು ಎಂಬುದನ್ನು ಅರಿತುಕೊಂಡು ಬಳಿಕ ಹೂಡಿಕೆ ಮಾಡಿದ. ಇನ್ನು ಚಿನ್ನದ ಮೇಲೆ ಮತ್ತೊಂದು ಭಾಗದ ಹಣವನ್ನು ಹೂಡಿಕೆ ಮಾಡಿ. ನಿಮಗೆ ಒಡವೆಗಳ ಅಗತ್ಯವಿದ್ದರೆ ಮಾತ್ರವೇ ಖರೀದಿಸಿ.

ಇಲ್ಲದೇ ಹೋದಲ್ಲಿ ಬಿಸ್ಕೆಟ್ ಗಳನ್ನು ಕೂಡ ಖರೀದಿಸಿ ಇಟ್ಟುಕೊಳ್ಳಬಹುದು. ಚಿನ್ನದ ಬೇಡಿಕೆ ಎಂದಿಗೂ ಕಡಿಮೆಯಾಗದ ಕಾರಣ, ಅದರ ಬೆಲೆಯೂ ಹೆಚ್ಚಾಗಿಯೇ ಇರುತ್ತದೆ. ಹಾಗಾಘಿ ಕೆಲವರು ಚಿನ್ನ ಹಾಗೂ ಬೆಳ್ಳಿಯ ಮೇಲೆ ಹೂಡಿಕೆ ಮಾಡಲು ಬಯಸುತ್ತಾರೆ. ಇನ್ನು ಚಿನ್ನ, ಸ್ಟಾಕ್ ಮಾರ್ಕೆಟ್ ಬಿಟ್ಟರೆ, ಭೂಮಿಯ ಮೇಲೆ ಇನ್ವೆಸ್ಟ್ ಮಾಡಲು ಬಯಸುತ್ತಾರೆ. ಅದೂ ಕೂಡ ಉತ್ತಮ ಹೂಡಿಕೆಯೇ. ಆದರೆ, ಭೂಮಿ, ಮನೆ, ಜಮೀನು ಖರೀದಿಗೆ ಕೊಂಚ ಹೆಚ್ಚಿನ ಮೊತ್ತವೇ ಬೇಕಾಗುತ್ತದೆ. ನಿಮ್ಮ ಆದಾಯದ ಮೇಲೆ ನಿರ್ಧರಿಸುವುದು ಸೂಕ್ತ.

Related News

spot_img

Revenue Alerts

spot_img

News

spot_img