28.2 C
Bengaluru
Wednesday, July 3, 2024

Interim Budget 2024 Highlights: ಮಧ್ಯಂತರ ಬಜೆಟ್ ಹೈಲೈಟ್ಸ್

#Interim #Budget 2024 #Interim Budget #highlights
Union budget2024;ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸುತ್ತಿದ್ದಾರೆ. ನರೇಂದ್ರ ಮೋದಿ ಸರ್ಕಾರದ 2ನೇ ಅವಧಿಯ ಕೊನೆಯ ಬಜೆಟ್‌ ಇದಾಗಿದೆ. ನಿರ್ಮಲಾ ಸೀತಾರಾಮನ್ 6ನೇ ಬಾರಿಗೆ ಬಜೆಟ್ ಮಂಡಿಸುತ್ತಿರುವುದು ವಿಶೇಷವಾಗಿದೆ.ವಿತ್ತ ಸಚಿವೆ ನಿರ್ಮಲಾ ಬಜೆಟ್ ಓದಲು ಆರಂಭಿಸಿದ್ದಾರೆ. ದೇಶದ ಜನತೆ ಭವಿಷ್ಯದತ್ತ ನೋಡುತ್ತಿದ್ದಾರೆ. 2014ರಲ್ಲಿ ಪ್ರಧಾನಿ ಮೋದಿ ಕೆಲಸ ಆರಂಭಿಸಿದಾಗ ಸಾಕಷ್ಟು ಸವಾಲುಗಳಿದ್ದವು. ಸಾರ್ವಜನಿಕರಿಗೆ ಗರಿಷ್ಠ ಉದ್ಯೋಗಾವಕಾಶಗಳನ್ನು ನೀಡಲಾಗಿದೆ. ದೇಶದಲ್ಲಿ ಹೊಸ ಉದ್ದೇಶ ಮತ್ತು ಭರವಸೆ ಹುಟ್ಟಿಕೊಂಡಿದೆ. ಸಾರ್ವಜನಿಕರು ನಮ್ಮನ್ನು ಎರಡನೇ ಬಾರಿಗೆ ಸರ್ಕಾರಕ್ಕೆ ಆಯ್ಕೆ ಮಾಡಿದ್ದಾರೆ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಮಂತ್ರದೊಂದಿಗೆ ಮುನ್ನಡೆಯುತ್ತೇವೆ ಎಂದು ತಿಳಿಸಿದರು.

2047ರ ವೇಳೆಗೆ ಭಾರತ ಅಭಿವೃದ್ಧಿ ಹೊಂದಿದ ದೇಶ

ಕೇಂದ್ರ ಸರ್ಕಾರ ಸಾರ್ವಜನಿಕ ಕಲ್ಯಾಣ ಯೋಜನೆಗಳನ್ನು ದಾಖಲೆ ಸಮಯದಲ್ಲಿ ಪೂರ್ಣಗೊಳಿಸಿದೆ ಎಂದು ವಿತ್ತ ಸಚಿವೆ ನಿರ್ಮಲಾ ತಮ್ಮ ಬಜೆಟ್ ಭಾಷಣದಲ್ಲಿ ಹೇಳಿದ್ದಾರೆ. ಭಾರತವನ್ನು 2047ರ ವೇಳೆಗೆ ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುತ್ತೇವೆ. ದೇಶದ 80 ಕೋಟಿ ಜನರಿಗೆ ಆಹಾರ ಒದಗಿಸಲಾಗಿದ್ದು, ಹಳ್ಳಿಗಳ ಅಭಿವೃದ್ಧಿಗೆ ಒತ್ತು ನೀಡಿದ್ದೇವೆ. ನಮ್ಮ ಅಧಿಕಾರಾವಧಿಯಲ್ಲಿ ಉದ್ಯೋಗಾವಕಾಶಗಳು ಹೆಚ್ಚಿವೆ. ರೈತರ ಆರ್ಥಿಕ ಆದಾಯ ಕೂಡ ಅಧಿಕವಾಗಿದೆ ಎಂದು ಅವರು ಹೇಳಿದ್ದಾರೆ.

3000 ಹೊಸ ಐಟಿಐಗಳ ಸ್ಥಾಪನೆ;

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಕೌಶಲ ಭಾರತ ಮಿಷನ್ 1.4 ಕೋಟಿ ಯುವಕರಿಗೆ ತರಬೇತಿ ನೀಡಿದೆ, 54 ಲಕ್ಷ ಯುವಕರಿಗೆ ಕೌಶಲ್ಯ ಮತ್ತು ಮರು-ಕುಶಲತೆಯನ್ನು ನೀಡಿದೆ ಮತ್ತು 3000 ಹೊಸ ಐಟಿಐಗಳನ್ನು ಸ್ಥಾಪಿಸಿದೆ. ಹೆಚ್ಚಿನ ಸಂಖ್ಯೆಯ ಸಾಂಸ್ಥಿಕ ಉನ್ನತ ಶಿಕ್ಷಣ, ಅವುಗಳೆಂದರೆ 7 ಐಐಟಿಗಳು, 16 ಐಐಐಟಿಗಳು, 7 ಐಐಎಂಗಳು. 15 ಏಮ್ಸ್ ಮತ್ತು 390 ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲಾಗಿದೆ.

300 ಯುನಿಟ್‌ವರೆಗೆ ಉಚಿತ ವಿದ್ಯುತ್:
ನಿರ್ಮಲಾ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಮುಂದಿನ 5 ವರ್ಷಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ ಇನ್ನೂ ಎರಡು ಕೋಟಿ ಮನೆಗಳನ್ನು ನಿರ್ಮಿಸಲಾಗುವುದು ಎಂದು ನಿರ್ಮಲಾ ಹೇಳಿದರು. ಹೊಸದಾಗಿ ನಿರ್ಮಾಣ ಮಾಡುವ ಮನೆಗಳಿಗೆ 300 ಯುನಿಟ್‌ವರೆಗೆ ಉಚಿತ ವಿದ್ಯುತ್ ನೀಡಲಾಗುವುದು ಎಂದು ತಿಳಿಸಿದರು.

ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರಿಗೆ ಭರ್ಜರಿ ಸಿಹಿಸುದ್ದಿ;

ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ ಹಾಗೂ ಅಂಗನವಾಡಿ ಸಹಾಯಕಿಯರಿಗೆ ಅನುಕೂಲ ಕಲ್ಪಿಸೋ ನಿಟ್ಟಿನಲ್ಲಿ ಆಯುಷ್ಮಾನ್ ಭಾರತ್ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ಈ ಮೂಲಕ ಆಶಾ, ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಆರೋಗ್ಯ ಕಾಳಜಿಯನ್ನು ಸರ್ಕಾರ ವಹಿಸಲಿದೆ ಎಂಬುದಾಗಿ ಹೇಳಿದರು.

ರೈತರು, ಮಹಿಳೆಯರು ಮತ್ತು ಯುವಕರಿಗೆ ಒತ್ತು

ಪ್ರಧಾನಮಂತ್ರಿ ಜನ್‌ ಧನ್ ಯೋಜನೆಯ ಮೂಲಕ ಬುಡಕಟ್ಟು ಸಮುದಾಯವನ್ನು ತಲುಪಬೇಕಿದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು. ಮೂಲಸೌಕರ್ಯ ಅಭಿವೃದ್ಧಿ ವೇಗ ಪಡೆದುಕೊಂಡಿದ್ದು, ಸರ್ಕಾರದ ಯೋಜನೆಗಳು ಸಾರ್ವಜನಿಕರಿಗೆ ತಲುಪುತ್ತಿವೆ. ಬಡತನ ನಿರ್ಮೂಲನೆಗೆ ಸರ್ಕಾರ ಶ್ರಮಿಸುತ್ತಿದೆ. ಸಂಸತ್ತಿನಲ್ಲಿ ಮಹಿಳೆಯರಿಗೆ ಮೀಸಲಾತಿ ಕಲ್ಪಿಸಲು ಕಾನೂನು ತರಲಾಗಿದೆ. ಗ್ರಾಮೀಣಾಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಪ್ರತಿ ಮನೆಗೂ ನೀರು ಪೂರೈಸಲಾಗುತ್ತಿದೆ ಎಂದು ವಿವರಿಸಿದರು.

ಮತ್ತ್ವ ಸಂಪದ ಯೋಜನೆ ವಿಸ್ತರಣೆ (Expansion of Matthva Sampada Yojana)
ಪ್ರಧಾನ ಮಂತ್ರಿ ಮತ್ತ್ವ ಸಂಪದ ಯೋಜನೆ ವಿಸ್ತರಿಸಲಾಗುವುದು. ಮೀನು ಉತ್ಪಾದನೆ ದ್ವಿಗುಣಗೊಂಡಿದೆ ಎಂದು ನಿರ್ಮಲಾ ಹೇಳಿದ್ದಾರೆ. ಮೂರು ಪ್ರಮುಖ ರೈಲ್ವೆ ಕಾರಿಡಾರ್‌ಗಳನ್ನು ಅಭಿವೃದ್ಧಿಪಡಿಸಿ, ವಿಮಾನ ನಿಲ್ದಾಣಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ. ನಗರ ಪ್ರದೇಶಗಳಲ್ಲಿ ಸಾರಿಗೆ ಸೌಕರ್ಯ ಸರಳೀಕರಣಗೊಳಿಸಲು ಮೆಟ್ರೋ ರೈಲು ಆರಂಭಕ್ಕೆ ಒತ್ತು ನೀಡಲಾಗುತ್ತದೆ. ಒಂದೇ ಭಾರತ ರೈಲುಗಳನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ತಿಳಿಸಿದರು.

3 ಕೋಟಿ ಹೊಸ ‘ಲಕ್ಷಪತಿ ದೀದಿ’ ನಮ್ಮ ಗುರಿ

2024ನೇ ಸಾಲಿನ ಮಧ್ಯಂತರ ಬಜೆಟ್ ಮಂಡಿಸಲಾಗುತ್ತಿದ್ದು, ಈ ಸಂದರ್ಭದಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಲಖ್ಪತಿ ದೀದಿ ಯೋಜನೆ ಕುರಿತು ಪ್ರಸ್ತಾಪಿಸಿದರು.ಈ ಯೋಜನೆಯ ಮೂಲಕ 2025ರ ವೇಳೆಗೆ ಲಕ್ಷಾಂತರ ಮಹಿಳೆಯರನ್ನು ಲಕ್ಷಾಧಿಪತಿಗಳನ್ನಾಗಿ ಮಾಡಲಾಗುವುದು ಎಂದರು.

 ಬಜೆಟ್ 2024: ಉಚಿತ ಸೋಲಾರ್ ವಿದ್ಯುತ್

ಮೋದಿ ಸರ್ಕಾರ ಉಚಿತ ಸೋಲಾರ್ ವಿದ್ಯುತ್ ಘೋಷಿಸಿದೆ- ಒಂದು ಕೋಟಿ ಮನೆಗಳಿಗೆ ಪ್ರತಿ ತಿಂಗಳು 300 ಯೂನಿಟ್ ವಿದ್ಯುತ್‌ ಉಚಿತವಾಗಿ ನೀಡಲಾಗುವುದು ಎಂದು ಬಜೆಟ್ ಮಂಡಿಸುತ್ತಿರುವ ನಿರ್ಮಲಾ ಸೀತಾರಮನ್ ಹೇಳಿದರು.ಈ ಯೋಜನೆಯ ಬಗ್ಗೆ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಪ್ರತಿಷ್ಠಾಪನೆಯ ಐತಿಹಾಸಿಕ ದಿನದಂದು ಪ್ರಧಾನ ಮಂತ್ರಿಯವರ ಸಂಕಲ್ಪ ಮಾಡಿದ್ದರು ಎಂದು ಸೀತಾರಾಮನ್ ಹೇಳಿದರು.

 ಬಜೆಟ್ 2024: ಹೊಸ ತೆರಿಗೆ ನೀತಿ ಘೋಷಣೆ

ಕೇಂದ್ರ ಸರ್ಕಾರ ಹೊಸ ತೆರಿಗೆ ವ್ಯವಸ್ಥೆ ಜಾರಿಗೆ ತಂದಿದೆ. ವಾರ್ಷಿಕ 7 ಲಕ್ಷ ರೂ.ವರೆಗೆ ತೆರಿಗೆ ವಿಧಿಸಲಾಗುವುದಿಲ್ಲ ಎಂದು ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದ್ದಾರೆ. ಇದೇ ವೇಳೆ ಕಾರ್ಪೊರೇಟ್ ತೆರಿಗೆಯನ್ನು ಶೇಕಡಾ 30 ರಿಂದ 22ಕ್ಕೆ ಇಳಿಸಲಾಗಿದೆ. ಆದಾಯ ತೆರಿಗೆ ಪಾವತಿಯನ್ನು ಸುಲಭಗೊಳಿಸಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಹಿಂದಿನ ವರ್ಷದ ಆದಾಯ ತೆರಿಗೆ ಸ್ಲಾಬ್‌ಗಳಲ್ಲಿ ಯಾವುದೇ ಬದಲಾವಣೇ ಮಾಡಲಾಗಿಲ್ಲ.

Related News

spot_img

Revenue Alerts

spot_img

News

spot_img