24.2 C
Bengaluru
Sunday, December 22, 2024

ಗೃಹ ವಿಮೆ ಮಾಡಿಸಿದ್ದೀರಾ? ನಿಮಗೆ ಈ ಸೌಲಭ್ಯ ದೊರೆಯುತ್ತವೆ

ಸುದೀರ್ಘ ಸುಡುಬಿಸಿಲಿನ ಬಳಿಕ ನೈರುತ್ಯ ಮುಂಗಾರು ದೇಶದ ಅನೇಕ ಭಾಗಗಳಲ್ಲಿ ಒಂದು ತಾಜಾತನವನ್ನು ತಂದಿದೆ. ಮಳೆ ಮಾರುತ ಮತ್ತು ಮಳೆಯು ನಮ್ಮ ಬದುಕಿನಲ್ಲಿ ಉಲ್ಲಾಸವನ್ನು ತರುವ ಜೊತೆಗೆ ಸವಾಲುಗಳನ್ನೂ ತಂದೊಡ್ಡುತ್ತವೆ. ಈ ಸಂದರ್ಭದಲ್ಲಿ ತಮ್ಮ ಮನೆ ಮತ್ತು ವಸ್ತುಗಳಿಗೆ ಹಾನಿ ಉಂಟಾಗಬಹುದು ಎಂಬ ಆತಂಕ ಜನರಲ್ಲಿರುತ್ತದೆ.

ಪ್ರತಿ ವರ್ಷ, ದೇಶದ ವಿವಿಧ ಭಾಗಗಳು ಪ್ರವಾಹ, ಚಂಡಮಾರುತಗಳು, ಭೂಕುಸಿತಗಳು ಮತ್ತು ಇತರ ನೈಸರ್ಗಿಕ ವಿಕೋಪಗಳಿಗೆ ಸಾಕ್ಷಿಯಾಗುತ್ತವೆ. ಈ ಎಲ್ಲ‌ ಕಾರಣಗಳಿಂದ ನಿಮ್ಮ ಮನೆಗಳ ಸುರಕ್ಷತೆ ಬಗ್ಗೆ ಮುಂಗಾರು ನಿಮ್ಮನ್ನು ಚಿಂತೆಗೀಡು ಮಾಡಿದ್ದರೆ, ಸುಲಭವಾದ ಮಾರ್ಗೋಪಾಯವಿದೆ- ಅದೇನೆಂದರೆ ಗೃಹ ವಿಮೆ. ಗೃಹ ವಿಮೆಯು ಪಾಲಿಸಿದಾರರಿಗೆ ಅವರ ಮನೆ ಮತ್ತು ಅದರಲ್ಲಿರುವ ವಸ್ತುಗಳಿಗೆ ಆಕಸ್ಮಿಕ ನಷ್ಟ ಅಥವಾ ಹಾನಿಯಿಂದ ರಕ್ಷಣೆ ನೀಡುತ್ತದೆ.

ಹಣಕಾಸಿನ ರಕ್ಷಣೆ
ಗೃಹ ವಿಮೆಗಳು ಪಾಲಿಸಿದಾರರ ಮನೆಗಳಿಗೆ ಏನಾದರೂ ಹಾನಿ ಸಂಭವಿಸಿದಲ್ಲಿ ಅದಕ್ಕೆ ಹಣಕಾಸಿನ ರಕ್ಷಣೆ ಒದಗಿಸುತ್ತದೆ. ನೈಸರ್ಗಿಕ ವಿಪತ್ತುಗಳನ್ನಷ್ಟೇ ಅಲ್ಲದೇ, ಗೃಹ ವಿಮೆಯು ಬೆಂಕಿ ಮತ್ತು ಸಂಬಂಧಿತ ಅಪಾಯಗಳು, ಕಳ್ಳತನ ಮತ್ತು ಕಳ್ಳತನದಿಂದ ಉಂಟಾಗುವ ನಷ್ಟದ ವ್ಯಾಪ್ತಿ ಹೊಂದಿದೆ; ವಿದ್ಯುತ್ ವೋಲ್ಟೇಜ್ ಸಮಸ್ಯೆ ಮತ್ತು ಆಕಸ್ಮಿಕ ಹಾನಿಗಳಿಂದಾಗಿ ಗೃಹೋಪಕರಣಗಳಿಗೆ ಉಂಟಾಗುವ ಹಾನಿಯ ನಷ್ಟವನ್ನೂ ಭರಿಸುತ್ತದೆ.
ಆಸಕ್ತರು ತಮ್ಮ ಪ್ಲಾಟ್‌, ಅಪಾರ್ಟ್‌ಮೆಂಟ್‌, ಮನೆ ಅಥವಾ ವಿಲ್ಲಾಗಳಿಗೆ ವಿಮೆಯ ರಕ್ಷಣೆ ಪಡೆಯಬಹುದು. ಗೃಹ ವಿಮೆಯು ಈ ಕೆಳಗಿನ ಎರಡು ಅಂಶಗಳನ್ನು ತನ್ನ ವ್ಯಾಪ್ತಿಯಲ್ಲಿ ಹೊಂದಿದೆ:

ಕಟ್ಟಡಕ್ಕೆ ಮಾತ್ರ: ಈ ಮಾದರಿಯ ವಿಮೆಯು ಕಟ್ಟಡ ಅಥವಾ ನಿರ್ಮಿತಿಯನ್ನು ಒಳಗೊಳ್ಳುತ್ತದೆ.

ವಸ್ತುಗಳಿಗೆ ಮಾತ್ರ: ಇದು ಪೀಠೋಪಕರಣ, ಉಪಕರಣ, ಆಭರಣ ಮತ್ತು ಮನೆಯಲ್ಲಿ ಇರುವ ಎಲ್ಲಾ ಬೆಲೆಬಾಳುವ ವಸ್ತುಗಳನ್ನು ಒಳಗೊಳ್ಳುತ್ತದೆ.

ವಿಮಾದಾರರು ಇವೆರಡರಲ್ಲಿ ಯಾವುದೋ ಒಂದನ್ನು ಅಥವಾ ಎರಡನ್ನೂ ಖರೀದಿಸುವ ಅವಕಾಶ ಹೊಂದಿರುತ್ತಾರೆ. ಆದಾಗ್ಯೂ ಮನೆ ಮತ್ತು ವಸ್ತುಗಳ ಸಂಪೂರ್ಣ ರಕ್ಷಣೆಗಾಗಿ ಇವೆರಡನ್ನೂ ಒಳಗೊಂಡ ಸಮಗ್ರ (ಕಂಪರೆನ್ಸಿವ್)‌ ವಿಮೆಯ ಖರೀದಿ ಸೂಕ್ತ. ವಿಮಾದಾರರು ಬಾಡಿಗೆ ಮನೆಯಲ್ಲಿ ಇರುತ್ತಾರಾದರೆ ಅವರು ವಸ್ತುಗಳಿಗೆ ಮಾತ್ರ ವಿಮೆ ಖರೀದಿಸಬಹುದು.

ಮೌಲ್ಯಮಾಪನದ ಆಯ್ಕೆಗಳು:
ಕಟ್ಟಡದ ಹಾನಿಯನ್ನು ಸರಿದೂಗಿಸಲು ಪಾಲಿಸಿದಾರರು ಮೂರು ವಿಧದ ಮೌಲ್ಯಮಾಪನದ ಆಯ್ಕೆಗಳನ್ನು ಹೊಂದಿರುತ್ತಾರೆ.
• ಮರುಸ್ಥಾಪನೆ ಮೌಲ್ಯ ಆಧಾರ: ಇದರಲ್ಲಿ, ಸ್ವತ್ತು/ಆಸ್ತಿಗಳನ್ನು ದುರಸ್ತಿ ಮಾಡುವ, ಮರುಸ್ಥಾಪಿಸುವ ಅಥವಾ ಹೊಸದರೊಂದಿಗೆ ಬದಲಾಯಿಸುವ ಅವಕಾಶವನ್ನು ಹೊಂದಿರುತ್ತದೆ. ಆದರೆ ಇವು ವಿಮೆ ಮೊತ್ತಕ್ಕೆ ಸೀಮಿತವಾಗಿರುತ್ತದೆ.

ನಷ್ಟ ಪರಿಹಾರ ಮೌಲ್ಯ: ಅಸಮ್ಮತಿಸಿದ ಮೌಲ್ಯವನ್ನು ಕಡಿತಗೊಳಿಸಿದ ನಂತರ ಸ್ವತ್ತುಗಳು/ಆಸ್ತಿಯ ಮಾರುಕಟ್ಟೆ ಮೌಲ್ಯ ಆಧರಿಸಿ ಪರಿಹಾರ ನೀಡಲಾಗುತ್ತದೆ.

ಒಪ್ಪಿತ ಮೌಲ್ಯ: ಪಾಲಿಸಿ ಮಾಡಿಸುವಾಗ ಪಾಲಿಸಿದಾರ ಮತ್ತು ವಿಮಾ ಕಂಪನಿ ಮಾಡಿಕೊಂಡ ಒಪ್ಪಂದದ ಪ್ರಕಾರ ಕ್ಲೈಮ್‌ ಇತ್ಯರ್ಥ ಮಾಡಲಾಗುತ್ತದೆ. ಇದು ಪ್ಲಾಟ್‌, ಅಪಾರ್ಟ್‌ಮೆಂಟ್‌ಗಳಿಗೆ ಮಾತ್ರ ಅನ್ವಯಿಸುತ್ತದೆ.

ಸ್ವತ್ತುಗಳಿಗೆ ಉದ್ದೇಶಪೂರ್ವಕವಾಗಿ ಹಾನಿ ಉಂಟುಮಾಡುವುದು, ಸಹಜ ಸವಕಳಿ, ದೂಷಪೂರಿತ ಕಾಮಗಾರಿ, ವಿದ್ಯುತ್ ಉಪಕರಣಗಳ ಉತ್ಪಾದನಾ ದೋಷಗಳಿಂದಾಗುವ ಹಾನಿಗಳು ವಿಮೆಯ ವ್ಯಾಪ್ತಿಗೆ ಒಳಪಡುವುದಿಲ್ಲ.

ಮೌಲ್ಯಮಾಪನಕ್ಕೆ ಯಾವ ವಿಧಾನವನ್ನು ಅನುಸರಿಸಬೇಕು, ಯಾವ ವಿಧಾನದಿಂದ ಸಮರ್ಪಕ ಮೌಲ್ಯಮಾಪನ ಸಾಧ್ಯ ಎಂಬುದನ್ನು ನಿರ್ಧರಿಸಲು ಪರಿಣತರ ನೆರವು ಪಡೆಯುವುದು ತುಂಬಾ ಒಳ್ಳೆಯ ಆಯ್ಕೆ ಆಗಿರುತ್ತದೆ.

Related News

spot_img

Revenue Alerts

spot_img

News

spot_img