ದೇಶದ ಎರಡನೇ ಅತಿ ದೊಡ್ಡ ಐಟಿ, ಸಾಫ್ಟ್‌ವೇರ್ ದೈತ್ಯ ಕಂಪನಿ ಇನ್ಫೋಸಿಸ್ ಬೆಂಗಳೂರಿನಲ್ಲಿ ಹೊಸದಾಗಿ ಐದು ಲಕ್ಷ ಚದರ ಅಡಿ ಕಚೇರಿ ಜಾಗವನ್ನು ಹದಿನೈದು ವರ್ಷಗಳ ಅವಧಿಗೆ ಲೀಸ್‌ಗೆ ಪಡೆದುಕೊಂಡಿದೆ ಎಂದು ಮೂಲಗಳು ತಿಳಿಸಿವೆ.
ಈಗ ಯಲಹಂಕದ ‘ನಾರ್ತ್‌ಗೇಟ್’ನಲ್ಲಿ ಹೊಸ ಕಚೇರಿ ಜಾಗವನ್ನು ಗುತ್ತಿಗೆಗೆ ಪಡೆದುಳ್ಳುವ ಮೂಲಕ ಕಂಪೆನಿಯು ತನ್ನ ವಹಿವಾಟನ್ನು ಮತ್ತಷ್ಟು ವಿಸ್ತರಿಸಲಿದೆ. ಈ ಲೀಸ್ ಒಪ್ಪಂದವು ಇತ್ತೀಚೆಗೆ ನಡೆದ ಅತಿ ದೊಡ್ಡ ಆಫೀಸ್ ಲೀಸ್ ಡೀಲ್ ಎನ್ನಲಾಗಿದೆ.
ಇನ್ಫೋಸಿಸ್ ಈ ಲೀಸ್ ಒಪ್ಪಂದದಂತೆ ಚದರ ಅಡಿಗೆ ₹ 51 ಬಾಡಿಗೆ ಪಾವತಿಸಲಿದೆ. ಲೀಸ್ ಐದು ವರ್ಷಗಳ ಲಾಕ್ ಇನ್ ಅವಧಿ ಹೊಂದಿದ್ದು, 15 ವರ್ಷಗಳ ಗುತ್ತಿಗೆ ಹೊಂದಿದೆ ಎಂದು ಈ ಬಗ್ಗೆ ತಿಳಿದುಕೊಂಡಿರುವ ಮೂವರು ವ್ಯಕ್ತಿಗಳು ತಿಳಿಸಿದ್ದಾರೆ.
ಯಲಹಂಕದಲ್ಲಿರುವ ನಾರ್ತ್‌ಗೇಟ್ ಅನ್ನು ಮಾಡರ್ನ್ ಅಸೆಟ್ ಮ್ಯಾನೇಜ್‌ಮೆಂಟ್ ಅಭಿವೃದ್ಧಿಪಡಿಸಿದೆ. ಈ ಗ್ರೇಡ್ –ಎ ಸೆಜ್ ಟೆಕ್ ಪಾರ್ಕ್ 13.3 ಎಕರೆ ಪ್ರದೇಶದಲ್ಲಿ ವಿಸ್ತರಿಸಿದ್ದು, 3 ಮಿಲಿಯನ್ ಚದರ ಅಡಿಯಲ್ಲಿ ಕಟ್ಟಡ ಪ್ರದೇಶ ಹೊಂದಿದೆ.