24.2 C
Bengaluru
Sunday, December 22, 2024

ಸಿದ್ದರಾಮಯ್ಯನವರ ಕನಸಿನ ಕೂಸಾದ ಇಂದಿರಾ ಕ್ಯಾಂಟೀನ್ ನ ನೂತನ ಫುಡ್ ಮೆನು ಬಿಡುಗಡೆ!

ಬೆಂಗಳೂರು ಜೂನ್ 21:ಕಳೆದ ಸೋಮವಾರ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಕನಸಿನ ಕೂಸಾದ ಇಂದಿರಾ ಕ್ಯಾಂಟೀನ್ ನ 250 ಶಾಖೆಗಳನ್ನು ಬೆಂಗಳೂರಿನಲ್ಲಿಆರಂಭಿಸಲು ಮಾತುಕತೆ ನಡೆಸಲಾಗಿದೆ ಎಂದು ತಿಳಿಸಿದ್ದರು ಅದರಂತೆಯೇ ಇಂದು ಜನಗಳ ಬಹುಬೇಡಿಕೆಯ ಇಂದಿರಾ ಕ್ಯಾಂಟೀನ್ ಮತ್ತೆ ಶುರುವಾಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿತ್ತು, ಅಂದುಕೊಂಡಂತೆ ಇಂದು ಇಂದಿರಾ ಕ್ಯಾಂಟೀನ್ ನ ನೂತನ ಫುಡ್ ಮೆನು ಬಿಡುಗಡೆಯಾಗಿದೆ.

ಯಾವ ಯಾವ ತಿಂಡಿ ಮತ್ತು ಊಟಗಳು ಮೆನು ಲಿಸ್ಟ್ ನಲ್ಲಿ ಇದೆ ನೋಡೋಣ ಬನ್ನಿ:-

(i) ಇಡ್ಲಿ-3, ಚಟ್ನಿ/ಸಾಂಬಾರ್ ……………………………………..ರೂ.5

(ii) ಬ್ರೆಡ್-2 ಮತ್ತು ಜಾಮ್………………………………………….ರೂ.5

(iii)ಮಂಗಳೂರು ಬನ್ಸ್-1…………………………………………….ರೂ.5

(iv)ಬನ್ಸ್-1…………………………………………………………..ರೂ.5

(v)ಟೀ ಅಥವಾ ಕಾಫಿ…………………………………………………..ರೂ.5

(vi)ವೆಜ್ ಪಲಾವ್/ಟೊಮೋಟೊ ಬಾತ್……………………………….ರೂ.5

(vii)ಖಾರ ಪೊಂಗಲ್,ಚಟ್ನಿ…………………………………………….ರೂ.5

(ix)ಬಿಸಿ ಬೇಳೆ ಬಾತ್……………………………………………………ರೂ.5

(x)ಅನ್ನ,ತರಕಾರಿ ಸಾಂಬಾರ್……………………………………………ರೂ.10

(xi)ರಾಗಿ ಮುದ್ದೆ-2, ಸೊಪ್ಪು ಸಾಂಬಾರ್……………………………….ರೂ.10

(xii)ಚಪಾತಿ-2,ಪಲ್ಯ……………………………………………………ರೂ.10

ಬಡವರು,ಶ್ರೀಮಂತರು ಎನ್ನದೆ ಪ್ರತಿಯೊಬ್ಬರು ಒಂದೇ ಎಂಬ ಧ್ಯೇಯದೊಂದಿಗೆ ಇಂದಿರಾ ಕ್ಯಾಂಟೀನ್ ನಡೆಯುತ್ತಿದೆ, ಸಾಕಷ್ಟು ವಿದ್ಯಾರ್ಥಿಗಳು, ಹೆಚ್ಚಿನದಾಗಿ ಸರ್ಕಾರಿ ಕೆಲಸಕ್ಕಾಗಿಯೇ ಓದುತ್ತಿರುವವರು, ಇಂದಿರಾ ಕ್ಯಾಂಟೀನ್ ನ ಊಟವನ್ನೇ ನಂಬಿಕೊಂಡಿದ್ದರು, ಅದೀನ ಪುನಃ ಬಂದಿರುವುದು ಅವರ ಪಾಲಿನ ಆಶಾಕಿರಣವಾಗಿದೆ.

Related News

spot_img

Revenue Alerts

spot_img

News

spot_img