26.9 C
Bengaluru
Friday, July 5, 2024

ಭಾರತದ ರಿಯಲ್ ಎಸ್ಟೇಟ್ ಶ್ರೀಮಂತ ಪಟ್ಟಿ ಬಿಡುಗಡೆ : ಮೊದಲ ಮೂರು ಸ್ಥಾನ ಯಾರದ್ದು..?

ಬೆಂಗಳೂರು, ಮೇ. 29 : ಭಾರತದಲ್ಲಿ ರಿಯಲ್‌ ಎಸ್ಟೇಟ್‌ ಉದ್ಯಮವೇನೋ ಗಗನಕ್ಕೇರುತ್ತಿದೆ. ರಿಯಲ್‌ ಎಸ್ಟೇಟ್‌ ಉದ್ಯಮದಲ್ಲಿ ಸಾಕಷ್ಟು ಮಂದಿ ಇದ್ದಾರೆ. ಆ ಉದ್ಯಮಿಗಳಲ್ಲಿ ಅತೀ ಶ್ರೀಮಂತರು ಯಾರು..? ಟಾಪ್ ಒನ್‌ ಸ್ಥಾನದಲ್ಲಿರುವ ಉದ್ಯಮಿಗಳು ಯಾರು ಎಂದು ತಿಳಿಯೋಣ ಬನ್ನಿ.

ಗ್ರೋಹೆ-ಹುರುನ್ ಇಂಡಿಯಾ ರಿಯಲ್ ಎಸ್ಟೇಟ್ ಶ್ರೀಮಂತ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಭಾರತದ ರಿಯಲ್‌ ಎಸ್ಟೇಟ್‌ ಉದ್ಯಮದಲ್ಲಿ ಟಾಪ್‌ ಸ್ಥಾನದಲ್ಲಿರುವವರ ಬಗ್ಗೆ ಮಾಹಿತಿ ನೀಡಿದೆ. ಈ ವರದಿಯ ಪ್ರಕಾರ, ಭಾರತದ ಅತ್ಯಂತ ಶ್ರೀಮಂತ ರಿಯಲ್ ಎಸ್ಟೇಟ್ ಉದ್ಯಮಿಯ ಟಾಪ್‌ ಒನ್‌ ಸ್ಥಾನದಲ್ಲಿ ರಾಜೀವ್ ಸಿಂಗ್ ಇದ್ದಾರೆ. ಇವರು ರಿಯಲ್‌ ಎಸ್ಟೇಟ್‌ ಉದ್ಯಮಿ, , ವಾಣಿಜ್ಯೋದ್ಯಮಿ ಮತ್ತು ಡಿಎಲ್ಎಫ್‌ ಅಧ್ಯಕ್ಷರಾಗಿದ್ದಾರೆ. ರಾಜೀವ್‌ ಅವರು 59,030 ಕೋಟಿ ರೂಪಾಯಿ ಸಂಪತ್ತಿನ ಒಡೆಯರಾಗಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಎರಡನೇ ಸ್ಥಾನದಲ್ಲಿ ಮುಂಬೈ ಮೂಲದ ಲೋಧಾ ಗ್ರೂಪ್ ಮ್ಯಾಕ್ರೋಟೆಕ್ ಡೆವಲಪರ್ಸ್‌ನ ಮಂಗಲ್ ಪ್ರಭಾತ್ ಲೋಧಾ ಫ್ಯಾಮಿಲಿ ಇದೆ. ಈ ಕುಟುಂಬ 42,270 ಕೋಟಿ ರೂಪಾಯಿ ಸಂಪತ್ತನ್ನು ಹೊಂದಿದೆ. ಮೂರನೇಯದಾಗಿ, ಆರ್‌ಎಂಝಡ್ ಕಾರ್ಪ್‌ನ ಅರ್ಜುನ್ ಮೆಂಡಾ ಮತ್ತು ಕುಟುಂಬ 37,000 ಕೋಟಿ ರೂಪಾಯಿ ಸಂಪತ್ತನ್ನು ಹೊಂದಿದ್ದು, ಮೂರನೇ ಸ್ಥಾನದಲ್ಲಿದೆ. ಟಾಪ್‌ ಹತ್ತು ಸ್ಥಾನದಲ್ಲಿ ಮೊದಲ ಮೂರು ಸ್ಥಾನಗಳಲ್ಲನ್ನು ಇವರು ಅಲಂಕರಿಸಿದ್ದಾರೆ.

ಅಷ್ಟಕ್ಕೂ ಈ ಮೂವರು ಟಾಪರ್ಸ್‌ ಗಳು ಯಾರು ಎಂಬುದನ್ನು ತಿಳಿಯುವುದಾದರೆ, ರಿಯಲ್ ಎಸ್ಟೇಟ್ ಕಿಂಗ” ಎಂದೇ ಖ್ಯಾತರಾಗಿದ್ದ ಕುಶಾಲ್ ಪಾಲ್ ಸಿಂಗ್ ಅವರ ಪುತ್ರ ರಾಶಜೀವ್‌ ಸಿಂಗ್‌, ಸದ್ಯ ರಾಜೀವ್‌ ಅವರು ಕಳೆದ ಮೂರು ವರ್ಷಗಳಿಂದ ಡಿಎಲ್ಎಫ್ ನ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಮ್ಯಾಕ್ರೋಟೆಕ್ ಡೆವಲಪರ್ಗಳ ಸ್ಥಾಪಕರಾಗಿರುವ 67 ವರ್ಷದ ಮಂಗಲ್ ಪ್ರಭಾತ್ ಲೋಧಾ ಅವರು ಎರಡನೇ ಸ್ಥಾನವನ್ನು ಪಡೆದಿದ್ದಾರೆ. RMZ ಕಾರ್ಪ್ ನ ಸ್ಥಾಪಿಸಿದವರೇ ಅರ್ಜುನ್ ಮೆಂಡಾ ಮತ್ತು ಕುಟುಂಬ.

Related News

spot_img

Revenue Alerts

spot_img

News

spot_img