20.4 C
Bengaluru
Friday, November 22, 2024

ಭಾರತ ದೇಶವು ೨೦೨೭ ರ ಹೊತ್ತಿಗೆ ಮುಂದುವರೆದ ರಾಷ್ಟ್ರವಾಗಿ ಬೆಳೆಯಬೇಕು: ಆರ್ ಬಿಐ ನ ಮಾಜಿ ಗವರ್ನರ್ ರಘುರಾಮ್ ರಾಜನ್

ಭಾರತ ದೇಶವು ೨೦೨೭ ರ ಹೊತ್ತಿಗೆ ಮುಂದುವರೆದ ರಾಷ್ಟ್ರವಾಗಿ ಬೆಳೆಯಬೇಕು. ಆರ್ ಬಿಐ ನ ಮಾಜಿ ಗವರ್ನರ್ ರಘುರಾಮ್ ರಾಜನ್ ಅವರು ಈಗಿನ ಆರ್ಥಿಕ ಅಭಿವೃದ್ಧಿಯನ್ನು ಮತ್ತಷ್ಟು ಹೆಚ್ಚಿಸಲೇ ಬೇಕು, ಇಲ್ವವಾದರೆ ೨೦೪೭ ರ ವೇಳೆಗೆ ಆರ್ಥಿಕವಾಗಿ ಅಭಿವೃದ್ದಿ ಹೋಮದಲು ತುಂಬಾ ಕಷ್ಟ ಎಂದು ಹೇಳಿದ್ದಾರೆ.

*ದೇಶದ ಜನಸಂಖ್ಯೆ ಬೆಳವಣಿಗೆ ಆರ್ಥಿಕ ಅಭಿವೃದ್ಧಿ ಮೇಲೆ ಪರಿಣಾಮ ಬೀರುತ್ತಾ..?

ದೇಶದಲ್ಲಿ ಜನಸಂಖ್ಯೆ ಬೆಳವಣಿಗೆಯು ಭಾರತ ದೇಶದ ಆರ್ಥಿಕ ಅಭಿವೃದ್ಧಿಯ ಮೇಲೆ ಮುಖ್ಯವಾಗಿ ಪರಿಣಾಮ ಬೀರುತ್ತದೆ. ಅಲ್ಲದೆ ವಯಸ್ಸಾದ ಜನಸಂಖ್ಯೆಗೆ ಹೆಚ್ಚಾದರೆ ದೇಶದ ಆರ್ಥಿಕತೆಗೆ ಹೊರೆಯಾಗುತ್ತದೆ. ೨೦೨೩ ರಲ್ಲಿ ಭಾರತವು ಭಾರತವು 5 ಪ್ರತಿಶತದಷ್ಟು ಆರ್ಥಿಕ ಬೆಳವಣಿಗೆಯನ್ನು2023 ರಲ್ಲಿ ಸಾಧಿಸಿದರೆ ಭಾರತವು ಅದೃಷ್ಟಶಾಲಿಯಾಗಲಿದೆ ಎಂದು ಅವರು ಕಳೆದ ವರ್ಷದ ಕಾಮೆಂಟ್ ಗೆ ಪ್ರತಿಕ್ರಿಯಿಸಿದ ರಾಜನ್ ನಾನು ಸಂಪೂರ್ಣವಾಗಿ ಸರಿ ಎಂದು ಹೇಳಿದರು. ನಾವು ಅದೃಷ್ಟವಂತರು. ಜಗತ್ತು ಹೆಚ್ಚು ಬಲವಾಗಿ ಬೆಳೆಯಿತು.

ಭಾರತೀಯ ಆರ್ಥಿಕತೆಯು ವೇಗದ ದರದಲ್ಲಿ ಬೆಳೆಯುವುದನ್ನು ನೋಡಲು ನನಗೆ ತುಂಬಾ ಸಂತೋಷವಾಗಿದೆ..!

ಭಾರತದ ಬೆಳವಣಿಗೆಯ ದರವೂ ಪ್ರಬಲವಾಗಿದ್ದರೂ ಖಾಸಗಿ ಹೂಡಿಕೆ ಮತ್ತು ಖಾಸಗಿ ಬಳಕೆ ಹೆಚ್ಚಿಲ್ಲ ಎಂದು ರಘುರಾಮ್ ರಾಜನ್ ಹೇಳಿದ್ದಾರೆ. ಅವರ ವಾದವನ್ನು ತಳ್ಳಿಹಾಕಲು ಯುಎಸ್ಎ ತನ್ನ ಆರ್ಥಿಕ ಬೆಳವಣಿಗೆಯ ಅಂದಾಜನ್ನು ಶೇಕಡಾವಾರು ೩ ಅಂಕಗಳಿಂದ ಸೋಲಿಸಿದೆ ಎಂದು ಹೇಳಿದರು. ನಾವು ಈಗ ಬೆಳೆಯುತ್ತಿದ್ದೇವೆ ಶೇ. ಆರೂವರೆ ಅದು ಶೇಕಡಾ ಒಂದೂವರೆ ಪಾಯಿಂಟ್ ಹೆಚ್ಚು. ಭಾರತೀಯ ಆರ್ಥಿಕತೆಯು ವೇಗದ ದರದಲ್ಲಿ ಬೆಳೆಯುವುದನ್ನು ನೋಡಲು ನನಗೆ ತುಂಬಾ ಸಂತೋಷವಾಗಿದೆ ಮತ್ತು ಅದು ಶೇಕಡಾ 8 ಕ್ಕೆ ವೇಗವನ್ನು ಬಯಸುತ್ತದೆ ಎಂದು ರಾಜನ್ ಹೇಳಿದರು.

ಪ್ರಸ್ತುತ ಬೆಳವಣಿಗೆಯ ವೇಗ ವಯಸ್ಸಿಗೆ ಅನುಗುಣವಾಗಿ ಅಭಿವೃದ್ಧಿಯಾಗುವಂತೆ ಕಾಣುತ್ತಿಲ್ಲ. ದೇಶವನ್ನು ಶ್ರೀಮಂತಗೊಳಿಸಲು ಇದು ಸಾಕಾಗುವುದಿಲ್ಲ. ಕಾರ್ಮಿಕ ವರ್ಗಕ್ಕೆ ಎಲ್ಲರನ್ನು ನೇಮಿಸಿಕೊಳ್ಳಲು ಸಾಧ್ಯವಿಲ್ಲ. 2047 ರ ವೇಳೆಗೆ 100 ವರ್ಷಗಳ ಸ್ವಾತಂತ್ರ್ಯೋತ್ಸವವನ್ನು ಪ್ರಧಾನಿ ನರೇಂದ್ರ ಮೋದಿ ಅಮೃತಮಹೋತ್ಸವ ಎಂದು ಬಣ್ಣಿಸಿದ್ದಾರೆ. ಅಷ್ಟೊತ್ತಿಗಾಗಲೇ ದೇಶ ಸಿರಿವಂತವಾಗುವುದು ಕಷ್ಟ ಎಂಬುದು ರಾಜನ್ ಅಭಿಮತವಾಗಿದೆ.

ಚೈತನ್ಯ, ‌ರೆವಿನ್ಯೂ ಫ್ಯಾಕ್ಟ್ ನ್ಯೂಸ್, ಬೆಂಗಳೂರು

Related News

spot_img

Revenue Alerts

spot_img

News

spot_img