22.4 C
Bengaluru
Friday, November 22, 2024

ಪ್ರಥಮ ಬಾರಿಗೆ 4ಲಕ್ಷ ಕೋಟಿ ಡಾಲರ್ ದಾಟಿದ ಜಿಡಿಪಿ ಹೊಸ ಇತಿಹಾಸ ಸೃಷ್ಟಿಸಿದ ಭಾರತ

#India #Created #New history #Crossing #4 lakh doller #GDP

ನವದೆಹಲಿ;ಭಾರತದ ಒಟ್ಟಾರೆ ಆಂತರಿಕ ಉತ್ಪನ್ನ(GDP) ಮೊದಲ ಬಾರಿಗೆ 4 ಟ್ರಿಲಿಯನ್ ಡಾಲರ್ ದಾಟಿದೆ. ನವೆಂಬರ್ 18 ರಂದು ಭಾರತ ಈ ಮೈಲಿಗಲ್ಲು(milestone) ಸಾಧಿಸಿತು. ಈಗ ಭಾರತವು ವಿಶ್ವದ 4ನೇ ಅತಿದೊಡ್ಡ ಆರ್ಥಿಕತೆಯಾಗುವ ಸಮೀಪದಲ್ಲಿದೆ. 26.7 ಟ್ರಿಲಿಯನ್ ಡಾಲರ್ ಆರ್ಥಿಕತೆಯೊಂದಿಗೆ ಅಮೆರಿಕ ಮೊದಲ ಸ್ಥಾನದಲ್ಲಿದೆ, 19.24 ಟ್ರಿಲಿಯನ್ ಡಾಲರ್‌ಗಳೊಂದಿಗೆ ಚೀನಾ 2ನೇ ಸ್ಥಾನದಲ್ಲಿದೆ, 4.39 ಟ್ರಿಲಿಯನ್ ಡಾಲರ್‌ಗಳೊಂದಿಗೆ ಜಪಾನ್(Japan) 3ನೇ ಸ್ಥಾನದಲ್ಲಿದೆ ಮತ್ತು 4.28 ಟ್ರಿಲಿಯನ್ ಡಾಲರ್‌ಗಳ GDPಯೊಂದಿಗೆ ಜರ್ಮನಿ 4ನೇ ಸ್ಥಾನದಲ್ಲಿದೆ.ನ.18ರಂದು ಪ್ರಕಟವಾದ ಜಾಗತಿಕ ದೇಶಗಳ ಜಿಡಿಪಿಯ(GDP) ಲೈವ್ ಪಟ್ಟಿಯಲ್ಲಿ ಈ ಅಂಕಿ-ಅಂಶಗಳು ಕಂಡುಬಂದಿವೆ ಎಂಬುದಾಗಿ ಮಾಧ್ಯಮ ವರದಿಗಳು ತಿಳಿಸಿವೆ.

ಕೇಂದ್ರ ಹಣಕಾಸು ಇಲಾಖೆ ಅಥವಾ ರಾಷ್ಟ್ರೀಯ ಅಂಕಿ-ಅಂಶಗಳ ಕಚೇರಿ ಅಧಿಕೃತವಾಗಿ ಈ ಬಗ್ಗೆ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ವರದಿಗಳು ವ್ಯಾಪಕವಾಗಿ ಸಾಮಾಜಿಕ ಮಾಧ್ಯಮಗಳಲ್ಲೂ ಮೈಲುಗ ಪ್ರಸಾರವಾಗಿವೆ. ಜಾಗತಿಕ ಬಿಕ್ಕಟ್ಟಿನ ನಡುವೆಯೂ ಭಾರತದ ಸಾಧನೆಗಾಗಿ ವಿವಿಧ ನಾಯಕರು, ಬಿಜೆಪಿ ಮುಖಂ ನಮ ಪ್ರಧಾನಿ ನರೇಂದ್ರ ಮೋದಿ ನಾಯಕತ್ವದ ಸಾಧನೆಯನ್ನು ಪ್ರಶಂಸಿದ್ದಾರೆ. 2027ರೊಳಗೆ ಭಾರತ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿಹೊರಹೊಮ್ಮಲಿದೆ ಎಂಬುದಾಗಿ ಕೇಂದ್ರ ವಿತ್ತಸಚಿವೆ ನಿರ್ಮಲಾ ಸೀತಾರಾಮ್ ಕೂಡ ಹೇಳಿದ್ದರೆ, ಭಾರತದ ಪ್ರಧಾನ ಆರ್ಥಿಕ ಸಲಹೆಗಾರರಾದ ಖ್ಯಾತ ಆರ್ಥಿಕ ತಜ್ಞ ಅನಂತ ನಾಗೇಶ್ವರ್ ಅವರು ಭಾರತ ಮುಂದಿನ ಏಳು ವರ್ಷಗಳಲ್ಲಿ 7 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನು ತಲುಪುವ ಗುರಿ ಹೊಂದಿದೆ ಎಂದಿದ್ದಾರೆ.ಪ್ರಧಾನಿ ನರೇಂದ್ರ ಮೋದಿಯವರ ಪರಿವರ್ತನಶೀಲ, ಡೈನಾಮಿಕ್(Dynamic) ಮತ್ತು ದೂರದೃಷ್ಟಿಯ ನಾಯಕತ್ವದ ಕಾರಣದಿಂದ ಈ ಅಭೂತಪೂರ್ವ ಎತ್ತರಕ್ಕೆ ಏರಲು ಸಾಧ್ಯವಾಗಿದೆ ಎಂಬುದಾಗಿ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ತಿಳಿಸಿದ್ದಾರೆ.

Related News

spot_img

Revenue Alerts

spot_img

News

spot_img