18 C
Bengaluru
Thursday, January 23, 2025

ದೇಶದಲ್ಲಿ ತಲೆ ಎತ್ತಲಿವೆ 8 ಹೊಸ ನಗರಗಳು!!

ಬೆಂಗಳೂರು, ಮೇ. 20 : ದೇಶದಲ್ಲಿ ಈಗಿರುವ ನಗರಗಳು ತುಂಬಿ ತುಳುಕುತ್ತಿವೆ. ದೇಶದ ಮೂಲೆ ಮೂಲೆಗಳಿಂದಲೂ ಕೆಲಸ ಅರಸಿ ಪ್ರತಿಯೊಬ್ಬರು ನಗರಗಳಿಗೆ ವಲಸೆ ಬರುತ್ತಾರೆ. ಹೀಗಾಗಿ ನಗರಗಳಲ್ಲಿ ಕೆಲಸ ಮಾಡುವ ಅವಕಾಶಗಳು ಹೆಚ್ಚು ಎಂಬ ಕಾರಣಕ್ಕೆ ಎಲ್ಲರೂ ಬರುತ್ತಾರೆ. ಇದರಿಂದ ನಗರಗಳು ತುಂಬಿ ಹೋಗಿವೆ. ಜನಸಂಖ್ಯೆ ಹೆಚ್ಚಾಗಿರುವುದರಿಂದ ನಗರಗಳಲ್ಲಿ ಮೂಲಸೌಕರ್ಯ ಪೂರೈಕೆಗೆ ಸಮಸ್ಯೆ ಆಗುತ್ತಿದೆ. ಇದರೊಂದಿಗೆ ಟ್ರಾಫಿಕ್ ಕಿರಿಕಿರಿ ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸಿಬೇಕಾಗಿದೆ.

ಹೀಗಾಗಿ ಅಸ್ತಿತ್ವದಲ್ಲಿರುವ ನಗರಗಳಿರುವ ಜೊತೆಗೆ ಎಂಟು ಹೊಸ ನಗರಗಳನ್ನು ಅಭಿವೃದ್ಧಿಪಡಿಸಲು ಹೊಸ ಯೋಜನೆಯನ್ನು ರೂಪಿಸುವ ಚಿಂತನೆಯಲ್ಲಿ ಕೇಂದ್ರ ಸರ್ಕಾರವಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ದೇಶದಲ್ಲಿ ಹೊಸ ನಗರಗಳನ್ನು ಅಭಿವೃದ್ಧಿಪಡಿಸಬೇಕು ಎಂದು 15ನೇ ಹಣಕಾಸು ಆಯೋಗ ವರದಿಯನ್ನು ಕೇಂದ್ರಕ್ಕೆ ಶಿಫಾರಸು ಮಾಡಿದೆ. ಈ ಬಗ್ಗೆ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಇಲಾಖೆಯ ಜಿ20 ಘಟಕದ ನಿರ್ದೇಶಕ ಎಂ. ಬಿ. ಸಿಂಗ್ ಹೇಳಿದ್ದಾರೆ.

ಈದರ ಪ್ರಕಾರ, ದೇಶದ ರಾಜ್ಯಗಳಲ್ಲಿ 26 ಹೊಸ ನಗರಗಳನ್ನು ಅಭಿವೃದ್ಧಿಪಡಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆಗಳನ್ನು ಕಳುಹಿಸಲಾಗಿದೆ. ಇದನ್ನು ಪರಿಶೀಲಿಸಿ ಹೊಸ ನಗರಗಳನ್ನು ಎಲ್ಲಿ ನಿರ್ಮಿಸಬೇಕು, ಯಾವಾಗ ನಿರ್ಮಿಸಲಾಗುತ್ತದೆ ಎಂಬ ಬಗ್ಗೆ ಚಿಂತನೆ ನಡೆಸಬಹುದು. ಕನಿಷ್ಠ 200 ಕಿ.ಮೀ ವ್ಯಾಪ್ತಿಯಲ್ಲಿ ಸಾಮಾಜಿಕ ಮತ್ತು ಆರ್ಥಿಕ ಚಟುವಟಿಕೆಗಳು ಹೆಚ್ಚಾಗುತ್ತವೆ. ಹೊಸ ನಗರಗಳ ಸ್ಥಾಪನೆಗೆ ಆರ್ಥಿಕ ಮಾರ್ಗಸೂಚಿಯನ್ನು ಅಂತಿಮಗೊಳಿಸಬೇಕಿದೆ. ಆದರೆ, ಈ ಬಗ್ಗೆ ಕೇಂದ್ರ ಸರ್ಕಾರವೇ ಎಲ್ಲಾ ನಿರ್ಧಾರಗಳನ್ನು ಕೈಗೊಳ್ಳಬೇಕಿದೆ ಎಂದು ಹೇಳಿದ್ದಾರೆ.

Related News

spot_img

Revenue Alerts

spot_img

News

spot_img