17 C
Bengaluru
Friday, January 24, 2025

ಪಡಿತರ ವಿತರಕರಿಗೆ ಕಮಿಷನ್ ಹೆಚ್ಚಳ: ಸಿಎಂ ಸಿದ್ದರಾಮಯ್ಯ

ಬೆಂಗಳೂರು ಮಾರ್ಚ್​ 1;ಸಿಎಂ ಪಡಿತರ ವಿತರಕರಿಗೆ CM ಸಿದ್ದರಾಮಯ್ಯ ಸಿಹಿ ಸುದ್ದಿ ನೀಡಿದ್ದಾರೆ. ಪ್ರತಿ KG ಅಕ್ಕಿಗೆ ನೀಡುವ ಕಮಿಷನ್ ಮೊತ್ತವನ್ನು 1.50ಕ್ಕೆ ಹೆಚ್ಚಿಸಲಾಗುವುದು ಎಂದು ಹೇಳಿದ್ದಾರೆ. ‘ಈಗ ಪ್ರತಿ KG ಅಕ್ಕಿಗೆ 1.24 ಕಮಿಷನ್ ಇದೆ. ಪಡಿತರ ವಿತರಕರ(Rationdistrubutors) ಸಮಸ್ಯೆ ಗಮನಿಸಿದ್ದೇನೆ. ಸಚಿವ ಮುನಿಯಪ್ಪ ಅವರೂ ಈ ಬಗ್ಗೆ ಮನವಿ ಮಾಡಿದ್ದರು. ಎಲ್ಲ ಅಂಶ ಪರಿಗಣಿಸಿ ಕಮಿಷನ್(Commission) ಹೆಚ್ಚಿಸಲಾಗುವುದು ಎಂದು ತಿಳಿಸಿದ್ದಾರೆ. ದೇಶಾದ್ಯಂತ ಏಕರೂಪ ಕಮಿಷನ್ ಜಾರಿ ಮಾಡಬೇಕೆಂಬ ಒತ್ತಾಯ ಈ ಹಿಂದೆಯೇ ಕೇಳಿ ಬಂದಿತ್ತು.ನಿನ್ನೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅನ್ನಭಾಗ್ಯ ಯೋಜನೆಯ 10 ವರ್ಷಗಳ ಸಂಭ್ರಮಾಚರಣೆಯ ಅಂಗವಾಗಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಅವರು ವಿತರಕರ ಬಹುಕಾಲದ ಬೇಡಿಕೆಯಾಗಿರುವ ಈ ಘೋಷಣೆಯನ್ನು ಮಾಡಿದರು.ಹಸಿವಿನ ಜೊತೆಗೆ ದೇಶವನ್ನು ಅನಕ್ಷರತೆ, ಅನಾರೋಗ್ಯ ಮತ್ತು ನಿರುದ್ಯೋಗ ಮುಕ್ತ ಮಾಡುವುದೇ ನಮ್ಮ ಕಾಂಗ್ರೆಸ್ ಪಕ್ಷದ ಗುರಿ. ನಮ್ಮ ಹಿಂದಿನ ಸರ್ಕಾರದ ಕಾಲದಲ್ಲಿ ಜಾರಿಗೆ ತಂದಿದ್ದ ಅನ್ನಭಾಗ್ಯ, ಕ್ಷೀರಭಾಗ್ಯ ಕ್ಷೀರಧಾರೆ, ಕೃಷಿಭಾಗ್ಯ, ಪಶುಭಾಗ್ಯ ವಿದ್ಯಾಸಿರಿ, ಇಂದಿರಾಕ್ಯಾಂಟೀನ್ ಕಾರ್ಯಕ್ರಮಗಳೆಲ್ಲವೂ ಈ ಗುರಿಯೆಡೆಗೆ ಕರ್ನಾಟಕವನ್ನು ಕೊಂಡೊಯ್ಯುವ ಪ್ರಯತ್ನದಲ್ಲಿ ಯಶಸ್ವಿ ಆಗಿದ್ದೇವೆ ಎಂದರು.

Related News

spot_img

Revenue Alerts

spot_img

News

spot_img