21.1 C
Bengaluru
Monday, December 23, 2024

ಅಮೆರಿಕಾದಲ್ಲಿ ಮನೆ ಖರೀದಿಗೆ ನಗದು ವ್ಯವಹಾರ ಹೆಚ್ಚಳ; ಕಾರಣವೇನು..?

ಅಮೆರಿಕಾ: ಅಮೆರಿಕಾದಲ್ಲಿ ಖರೀದಿಸಲಾಗುತ್ತಿರುವ ಮನೆಗಳಲ್ಲಿ ಮೂರನೇ ಒಂದು ಭಾಗದಷ್ಟು ಹಣ ನೀಡುವ ಮೂಲಕ ಖರೀದಿಸಲಾಗುತ್ತಿದೆ. ಈ ವರ್ಷದ ಆರಂಭದಿಂದ ನಗದು ವ್ಯವಹಾರ ಸ್ವಲ್ಪಮಟ್ಟಿಗೆ ಕುಸಿದಿದ್ದರೂ ಸಹ, ಕೊರೊನಾ ಸಾಂಕ್ರಾಮಿಕದ ನಂತರ ಇನ್ನೂ ಹೆಚ್ಚಾಗಿದೆ.

ಇತ್ತಿಚೆಗೆ ಪ್ರಕಟವಾದ ರೆಡ್‌ಫಿನ್ ವರದಿಯ ಪ್ರಕಾರ, ಅಮೆರಿಕಾದಲ್ಲಿ ಜುಲೈನಲ್ಲಿ 31.4% ಮನೆ ಖರೀದಿಗಳನ್ನು ಎಲ್ಲಾ ನಗದು ಮೂಲಕ ಪಾವತಿಸಲಾಗಿದೆ . ಎಂಟು ವರ್ಷಗಳಲ್ಲಿ ತಲುಪಬೇಕಾದ ಗುರಿಯನ್ನು ಈ ವರ್ಷದ ಆರಂಭದಲ್ಲಿಯೇ ತಲುಪಿದೆ.

ರೆಡ್‌ಫಿನ್ ವರದಿಯಂತೆ 2011 ಕ್ಕೆ ಹೋಲಿಸಿದರೆ, ಅಮೆರಿಕಾದ ಹೆಚ್ಚು ಜನಸಂಖ್ಯೆ ಹೊಂದಿರುವ 41 ಮೆಟ್ರೋ ಪ್ರದೇಶಗಳಲ್ಲಿ ದಾಖಲೆ ಕಂಡು ಬಂದಿದೆ. ಲಭ್ಯವಿರುವ ಡೇಟಾದೊಂದಿಗೆ ಜುಲೈ ತಿಂಗಳಲ್ಲಿ ಅತೀ ಹೆಚ್ಚು ನಗದು ವ್ಯವಹಾರ ನಡೆದಿದೆ.

ಅಷ್ಟೊಂದು ನಗದು ಖರೀದಿದಾರರಾಗಲು ಕಾರಣವೇನು..?
2008 ರಿಂದ ಮೊದಲ ಬಾರಿಗೆ ಸಾಲದ ದರಗಳು ಈ ವಾರ 6% ಕ್ಕಿಂತ ಹೆಚ್ಚಿವೆ. ಮನೆ ಖರೀದಿಗೆ ಹಣಕಾಸು ಸಾಲ ಪಡೆಯಲು ಇದು ಸೂಕ್ತ ಸಮಯವಲ್ಲ. ಆದ್ದರಿಂದ ಯಾವುದೇ ಖರೀದಿದಾರರು ಸಾಧ್ಯವಾದಷ್ಟು ಹಣವನ್ನು ಪಾವತಿಸಲು ಬಯಸುತ್ತಾರೆ.

ಆದರೂ, ಸಾಲದ ದರಗಳು 3% ಕ್ಕಿಂತ ಕಡಿಮೆ ಇದ್ದಾಗ ಕೂಡ ನಗದು ಖರೀದಿದಾರರು ಹೆಚ್ಚಾಗಿದ್ದರು ಎಂದು ವರದಿ ಹೇಳಿದೆ.

ಸಾಂಕ್ರಾಮಿಕ ಸಮಯದಲ್ಲಿ ಅಮೆರಿಕನ್ನರು ತಮ್ಮ ಜೀವನವನ್ನು ಮರುಮೌಲ್ಯಮಾಪನ ಮಾಡಲು, ಮಾರಾಟ ಮಾಡಲು ಮತ್ತು ಹೊಸ ಪ್ರದೇಶಗಳಲ್ಲಿ ಮನೆಗಳನ್ನು ಖರೀದಿಸಲು ಹಣವನ್ನು ಬಳಸಿದ್ದಾರೆ. ಇದು ಕೂಡ ನಗದು ಖರೀದಿದಾರರ ಹೆಚ್ಚಳಕ್ಕೆ ಕಾರಣವಾಗಿದೆ.

“ಇದು ಮನೆ ಖರೀದಿದಾರರ ದಾಖಲೆಯ ಪಾಲನ್ನು ಹೆಚ್ಚಿಸಲು ಅವಕಾಶ ಮಾಡಿಕೊಟ್ಟಿತು. ಸಾಮಾನ್ಯವಾಗಿ ದೇಶದ ದುಬಾರಿ ಭಾಗದಿಂದ ಕೈಗೆಟುಕುವ ಭಾಗಗಳಿಗೆ ಜನ ಹೊರಟರು. ಸಾಂಕ್ರಾಮಿಕ ರೋಗದ ಪ್ರಾರಂಭದಿಂದಲೂ ಅಮೆರಿಕಾದಲ್ಲಿ ಮನೆಯ ಮೌಲ್ಯಗಳು ಗಗನಕ್ಕೇರಿವೆ. ಅಂದರೆ ಸ್ಯಾನ್ ಫ್ರಾನ್ಸಿಸ್ಕೋದಂತಹ ಬೆಲೆಬಾಳುವ ಸ್ಥಳದಲ್ಲಿ ಮನೆಯನ್ನು ಮಾರಾಟ ಮಾಡಿದ ಅಮೆರಿಕನ್ನರು ಲಾಸ್ ವೇಗಾಸ್‌ನಂತಹ ಕೈಗೆಟುಕುವ ಪ್ರದೇಶದಲ್ಲಿ ಹಣವನ್ನು ಪಾವತಿಸಿ ಮನೆ ಖರೀದಿಸಿದ್ದಾರೆ.

ನಗದು ಖರೀದಿದಾರರ ಹೆಚ್ಚಳಕ್ಕೆ ಹೂಡಿಕೆದಾರರು ಸಹ ಕೊಡುಗೆ ನೀಡುತ್ತಿದ್ದಾರೆ. 2022 ರ ಮೊದಲ ತ್ರೈಮಾಸಿಕದಲ್ಲಿ ಮಾರಾಟವಾದ US ಮನೆಗಳಲ್ಲಿ, 28% ಹೂಡಿಕೆದಾರರಿಂದ ಖರೀದಿಸಲ್ಪಟ್ಟಿದೆ ಎಂದು ಹಾರ್ವರ್ಡ್ ವಿಶ್ವವಿದ್ಯಾಲಯದ ವಸತಿ ಅಧ್ಯಯನಗಳ ಜಂಟಿ ಕೇಂದ್ರದ ಇತ್ತೀಚಿನ ವರದಿ ತಿಳಿಸಿದೆ.

ಇನ್ನೂ, ಹೂಡಿಕೆದಾರರು ಸಾಂಕ್ರಾಮಿಕ ರೋಗಕ್ಕಿಂತ ಮೊದಲು ಹೆಚ್ಚು ಮನೆಗಳನ್ನು ಖರೀದಿಸುವುದನ್ನು ಮುಂದುವರೆಸಿದ್ದಾರೆ. ಈ ವರ್ಷದ ಎರಡನೇ ತ್ರೈಮಾಸಿಕದಲ್ಲಿ ಹೂಡಿಕೆದಾರರು 87,500 US ಮನೆಗಳನ್ನು ಖರೀದಿಸಿದ್ದಾರೆ. ವರ್ಷದಿಂದ ವರ್ಷಕ್ಕೆ 5.9% ಹೆಚ್ಚಾಗಿದೆ ಎಂದು ರೆಡ್‌ಫಿನ್ ವರದಿ ತಿಳಿಸಿದೆ.

ನಗದು ಖರೀದಿದಾರರು ಎಲ್ಲಿ ಹೆಚ್ಚಾಗಿದ್ದಾರೆ..?
ಲಾಂಗ್ ಐಲ್ಯಾಂಡ್, ನ್ಯೂಯಾರ್ಕ್, ನಸ್ಸೌ ಕೌಂಟಿ ನಗದು ಖರೀದಿದಾರರಲ್ಲಿ ಹೆಚ್ಚಿನ ಪಾಲನ್ನು ಹೊಂದಿರುವ ಮೆಟ್ರೋ ಸಿಟಿಗಳಾಗಿವೆ. 66.5% ಪಾಲು ಪಡೆದಿವೆ. ಫ್ಲೋರಿಡಾದ ವೆಸ್ಟ್ ಪಾಮ್ ಬೀಚ್ (56.4%) ಮತ್ತು ಜಾಕ್ಸನ್‌ವಿಲ್ಲೆ (45.5%) ನಂತರದ ಸ್ಥಾನಗಳಲ್ಲಿವೆ.

ನಗದು ಖರೀದಿದಾರರು ಎಲ್ಲಿ ಕಡಿಮೆಯಾಗಿದ್ದಾರೆ..?
ರೆಡ್‌ಫಿನ್‌ನ ವರದಿಯ ಪ್ರಕಾರ, ಕ್ಯಾಲಿಫೋರ್ನಿಯಾ ಮತ್ತು ವಾಷಿಂಗ್‌ಟನ್‌ನಲ್ಲಿನ ಮೂರು ದುಬಾರಿ ಮಾರುಕಟ್ಟೆಗಳು ಎಲ್ಲಾ ನಗದು ಖರೀದಿದಾರರಲ್ಲಿ ಕಡಿಮೆ ಪಾಲನ್ನು ಹೊಂದಿವೆ. ಏಕೆಂದರೆ ಇಲ್ಲಿನ ಮೆನೆ ಬೆಲೆ ಹೆಚ್ಚಿದ್ದು, ಹೆಚ್ಚಿನ ಬೆಲೆಗಳು ನಗದು ರೂಪದಲ್ಲಿ ಪಾವತಿಸಲು ಕಷ್ಟವಾಗುತ್ತದೆ.

Related News

spot_img

Revenue Alerts

spot_img

News

spot_img