Incometax#Rule#2023-24#financial year
ಬೆಂಗಳೂರ;2023-24 ಹೊಸ ಹಣಕಾಸು ವರ್ಷ (financial year 2023-24) ಏಪ್ರಿಲ್ 1 ರಂದು ಆರಂಭವಾಗುತ್ತದೆ. ಹಣದುಬ್ಬರದ ಹೊರೆ ಶ್ರೀ ಸಾಮಾನ್ಯರ ಮೇಲೆ ಹೆಚ್ಚಾಗುವ ಸಾಧ್ಯತೆಯಿದೆ. ಹೊಸ ಹಣಕಾಸು ವರ್ಷದ ಆರಂಭದೊಂದಿಗೆ ಹಲವು ವಸ್ತುಗಳು ದುಬಾರಿಯಾಗಲಿವೆ. ಇದು ನೇರವಾಗಿ ಜನಸಾಮಾನ್ಯರ ಜೇಬಿನ ಮೇಲೆ ಪರಿಣಾಮ ಬೀರಲಿದೆ.ಕೇಂದ್ರ ಬಜೆಟ್‌ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಾಡಿರುವ ಘೋಷಣೆಗಳು ಇದೇ ಸಮಯದಲ್ಲಿ ಜಾರಿಗೆ ಬರುತ್ತವೆ.ಆದಾಯ ತೆರಿಗೆ ಸ್ಲ್ಯಾಬ್‌ನಲ್ಲಿನ ಬದಲಾವಣೆಗಳಿಂದ ಹಿಡಿದು ಸಾಲದ ಮ್ಯೂಚುಯಲ್ ಫಂಡ್‌ಗಳ ಮೇಲೆ ದೀರ್ಘಾವಧಿಯ ಬಂಡವಾಳ ಗಳಿಕೆ ಪ್ರಯೋಜನವಿಲ್ಲ ಎಂಬ ಇತ್ತೀಚಿನ ನಿಯಮದವರೆಗೆ, ಏಪ್ರಿಲ್ 1 ರಿಂದ ಜಾರಿಗೆ ಬರಲಿರುವ ಬದಲಾವಣೆಗಳು ಇಲ್ಲಿವೆ.
*ತೆರಿಗೆ ರಿಯಾಯಿತಿ ಮಿತಿಯನ್ನು ವಿಸ್ತರಿಸಲಾಗಿದೆ
ಸರ್ಕಾರವು 2023ರ ಬಜೆಟ್‌ನಲ್ಲಿ ತೆರಿಗೆ ರಿಯಾಯಿತಿ ಮಿತಿಯನ್ನು ರೂ. 5 ಲಕ್ಷದಿಂದ ರೂ. 7 ಲಕ್ಷಕ್ಕೆ ವಿಸ್ತರಿಸಿದೆ. ತೆರಿಗೆ ರಿಯಾಯಿತಿ ಎಂದರೆ ತೆರಿಗೆದಾರರು ಪಾವತಿಸಿದ ತೆರಿಗೆಗಳು ಅವರ ತೆರಿಗೆ ಹೊಣೆಗಾರಿಕೆಯನ್ನು ಮೀರಿದರೆ ಅದನ್ನು ಪಡೆಯಲು ಅರ್ಹರಾಗಿರುತ್ತಾರೆ. ಸರಳವಾಗಿ ಹೇಳುವುದಾದರೆ, ಆರ್ಥಿಕ ವರ್ಷದಲ್ಲಿ ರೂ 7 ಲಕ್ಷದವರೆಗಿನ ಆದಾಯ ಹೊಂದಿರುವ ತೆರಿಗೆದಾರರು ವಿನಾಯಿತಿಗಳನ್ನು ಪಡೆಯಲು ಏನನ್ನೂ ಹೂಡಿಕೆ ಮಾಡಬೇಕಾಗಿಲ್ಲ ಮತ್ತು ಅಂತಹ ವ್ಯಕ್ತಿಯು ಮಾಡಿದ ಹೂಡಿಕೆಯ ಪ್ರಮಾಣವನ್ನು ಲೆಕ್ಕಿಸದೆ ಸಂಪೂರ್ಣ ಆದಾಯವು ತೆರಿಗೆ ಮುಕ್ತವಾಗಿರುತ್ತದೆ.
* ಸ್ಟ್ಯಾಂಡರ್ಡ್ ಡಿಡಕ್ಷನ್: ಹಳೆಯ ತೆರಿಗೆ ಪದ್ಧತಿಯಲ್ಲಿ 50,000 ರೂ. ಕಡಿತದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಇದನ್ನು ಹೊಸ ತೆರಿಗೆ ಪದ್ಧತಿಗೂ ವಿಸ್ತರಿಸಲಾಗಿದೆ. ಆದ್ದರಿಂದ, ವಾರ್ಷಿಕ ಆದಾಯ ರೂ 5.15 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ವೇತನದಾರರು 52,500 ರೂ.ನಷ್ಟು ಪ್ರಯೋಜನ ಪಡೆಯುತ್ತಾರೆ.
*ಆದಾಯ ತೆರಿಗೆ ಸ್ಲ್ಯಾಬ್‌ಗಳಲ್ಲಿ ಬದಲಾವಣೆಗಳು;ಹೊಸ ಆದಾಯ ತೆರಿಗೆ ಸ್ಲ್ಯಾಬ್ ಈ ಕೆಳಗಿನಂತೆ ಇವೆ
0-3 ಲಕ್ಷ – ಶೂನ್ಯ
3-6 ಲಕ್ಷ – 5%
6-9 ಲಕ್ಷ- 10%
9-12 ಲಕ್ಷ – 15%
12-15 ಲಕ್ಷ – 20%
15 ಲಕ್ಷಕ್ಕಿಂತ ಹೆಚ್ಚು- 30%
*ಹಿರಿಯ ನಾಗರಿಕರಿಗೆ ಅನುಕೂಲಗಳು
ಹಿರಿಯ ನಾಗರಿಕರ ಉಳಿತಾಯ ಯೋಜನೆಗೆ ಗರಿಷ್ಠ ಠೇವಣಿ ಮಿತಿಯನ್ನು 15 ಲಕ್ಷದಿಂದ 30 ಲಕ್ಷಕ್ಕೆ ಹೆಚ್ಚಿಸಲಾಗುವುದು.ಮಾಸಿಕ ಆದಾಯ ಯೋಜನೆಗೆ ಗರಿಷ್ಠ ಠೇವಣಿ ಮಿತಿಯನ್ನು ಏಕ ಖಾತೆಗಳಿಗೆ 4.5 ಲಕ್ಷದಿಂದ 9 ಲಕ್ಷಕ್ಕೆ ಮತ್ತು ಜಂಟಿ ಖಾತೆಗಳಿಗೆ 7.5 ಲಕ್ಷದಿಂದ 15 ಲಕ್ಷಕ್ಕೆ ಹೆಚ್ಚಿಸಲಾಗುವುದು.
*ಮಾರುಕಟ್ಟೆ ಸಂಯೋಜಿತ ಡಿಬೆಂಚರ್‌ಗಳು:
ಏಪ್ರಿಲ್ 1 ರ ನಂತರ, ಎಂಎಲ್‌ಡಿಗಳಲ್ಲಿನ ಹೂಡಿಕೆಯು ಅಲ್ಪಾವಧಿಯ ಬಂಡವಾಳ ಆಸ್ತಿಗಳಾಗಿರುತ್ತದೆ. ತಜ್ಞರ ಪ್ರಕಾರ, ಮ್ಯೂಚುವಲ್ ಫಂಡ್ ಉದ್ಯಮದ ಮೇಲೆ ಇಂತಹ ಕ್ರಮದ ಪರಿಣಾಮವು ಕೊಂಚಮಟ್ಟಿಗೆ ಋಣಾತ್ಮಕವಾಗಿರುತ್ತದೆ.
*ಭೌತಿಕ ಚಿನ್ನವನ್ನು ಇ-ಚಿನ್ನದ ರಸೀದಿಯಾಗಿ ಪರಿವರ್ತನೆ
ಕೇಂದ್ರ ಸರ್ಕಾರ 2023 ರ ಬಜೆಟ್ (budget)ನ ಬಗ್ಗೆ ಮಾಹಿತಿಯನ್ನು ತಿಳಿಸುವಾಗ,ಭೌತಿಕ ಚಿನ್ನವನ್ನು ಎಲೆಕ್ಟ್ರಾನಿಕ್ ಚಿನ್ನದ ರಶೀದಿ (ಇಜಿಆರ್) ಆಗಿ ಪರಿವರ್ತಿಸಿದರೆ ಯಾವುದೇ ಬಂಡವಾಳ ಲಾಭದ ತೆರಿಗೆ ಇರುವುದಿಲ್ಲ,ಈ ರೀತಿಯ ನಿಯಮಗಳು ಕ್ಷಣಿಕವಾಗಿ ಅಂದರೆ ಏಪ್ರಿಲ್ 1, 2023 ರಿಂದ ಜಾರಿಗೆ ಬರಲಿದೆ ಎಂದು ತಿಳಿಸಿದೆ.