26.7 C
Bengaluru
Sunday, December 22, 2024

ಸುಳ್ಳು ಮಾಹಿತಿ ನೀಡಿದವರ ಮನೆ ಬಾಗಿಲಿಗೆ ಆದಾಯ ತೆರಿಗೆ ಇಲಾಖೆಯಿಂದ ಬರಲಿದೆ ನೋಟೀಸ್

ಬೆಂಗಳೂರು, ಆ. 02 : ತೆರಿಗೆ ವಿನಾಯ್ತಿ ಪಡೆಯುವ ಬಗ್ಗೆ ಈಗಾಗಲೇ ಹಲವು ಮಾರ್ಗಗಳನ್ನು ತಿಳಿಸಿಕೊಡಲಾಗಿದೆ. ಬಾಡಿಗೆ ಮನೆಯಲ್ಲಿದ್ದರೆ, ನಿಮ್ಮ ಬಾಡಿಗೆ ಹಣ ಮೇಲೂ ತೆರಿಗೆ ವಿನಾಯ್ತಿಯನ್ನು ಪಡೆಯಬಹುದು. ಬಾಡಿಗೆ ಕಟ್ಟುವ ಹಣಕ್ಕೆ ಹೇಗೆ ತೆರಿಗೆ ವಿನಾಯ್ತಿ ಸಿಗುತ್ತದೆ. ಜೊತೆಗೆ ಗೃಹಸಾಲ ಪಾವತಿ ಮಾಡುತ್ತಿದ್ದರೂ ತೆರಿಗೆ ವಿನಾಯ್ತಿ ಸಿಗುತ್ತದೆ. ಹೀಗಾಗಿ ಹಲವು ಜನರು ಸುಳ್ಳು ಹೇಳಿ ತೆರಿಗೆ ರಿಯಾಯಿತಿಯನ್ನು ಪಡೆದುಕೊಳ್ಳುತ್ತಿದ್ದಾರೆ. ಆದರೆ, ಇದೀಗ ಆದಾಯ ತೆರಿಗೆ ಇಂತಹವರಿಗೆ ನೋಟೀಸ್ ನೀಡಲಿದೆ.

ಎಐ ಅಂದರೆ ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡು ಹೇಗೆಲ್ಲಾ ತೆರಿಗೆ ವಿನಾಯ್ತಿಯನ್ನು ಪಡೆಯಬಹುದು ಅಂತ ಮಾಹಿತಿ ಪಡೆಯುತ್ತಿದ್ದಾರೆ. ಆ ಮೂಲಕ ತಾವು ಗೃಹಸಾಲದ ಇಎಂಐ ಪಾವತಿಸುತ್ತಿರುವುದಾಗಿಯೂ ಹಾಗೆಯೇ ಸಂಬಂಧಿಕರ ಮನೆಯಲ್ಲಿ ಬಾಡಿಗೆಗೆ ಇದ್ದು, ಅಲ್ಲೂ ಬಾಡಿಗೆ ಪಾವತಿಸುತ್ತಿರುವುದಾಗಿ ಹೇಳಿ ತೆರಿಗೆ ವಿನಾಯ್ತಿ ಅನ್ನು ಪಡೆದುಕೊಳ್ಳುತ್ತಿದ್ದಾರೆ. ಕೆಲವರು ಗೃಹಸಾಲವಿದ್ದು, ಅದಕ್ಕೆ ಇಎಂಐ ಅನ್ನು ಪಾವತಿ ಮಾಡುತ್ತಿರುವುದಾಗಿ ಸುಳ್ಳು ದಾಖಲೆಯನ್ನು ತೋರಿಸಿ ಟ್ಯಾಕ್ಸ್ ಎಕ್ಸೆಂಪ್ಶನ್ ಪಡೆಯುತ್ತಿರುತ್ತಾರೆ.

ಈ ಬಗ್ಗೆ ತೆರಿಗೆ ಅಧಿಕಾರಿಗೆಳಿಗೆ ಮಾಹಿತಿ ಲಭ್ಯವಾಗಿದ್ದು, ಈ ಬಗ್ಗೆ ಕೂಲಂಕುಷವಾಗಿ ಪರಿಶೀಲನೆಯನ್ನು ನಡೆಸಲಾಗುತ್ತಿದೆ. ನೀವೂ ಕೂಡ ಏನಾದರೂ ಸುಳ್ಳು ಮಾಹಿತಿ ನೀಡಿ ತೆರಿಗೆ ವಿನಾಯ್ತಿ ಅನ್ನು ಪಡೆಯುತ್ತಿದ್ದೀರಾ.? ಆದಾಯ ತೆರಿಗೆ ಇಲಾಖೆಗೆ ಮೋಸ ಮಾಡುತ್ತಿದ್ದೀರಾ ಎಂದರೆ, ಗ್ಯಾರೆಂಟಿ ಸಿಕ್ಕಿ ಬೀಳ್ತೀರಾ. ಸೋ.. ನೀವು ಎಚ್ಚರದಿಂದ ಇರುವುದು ಬಹಳ ಮುಖ್ಯವಾಗುತ್ತಿದೆ. ಬಾಡಿಗೆಯ ಮೇಲಿನ ತೆರಿಗೆ ವಿನಾಯ್ತಿಯು ವೈಯಕ್ತಿಕ ಇಲ್ಲವೇ ಹಿಂದೂ ಅವಿಭಜಿತ ಕುಟುಂಬಕ್ಕೆ ಸಿಗುತ್ತದೆ.

ಬಾಡಿಗೆ ಮೇಲೆ ತೆರಿಗೆ ವಿನಾಯ್ತಿ ಪಡೆಯಲು ಆತ ವಾಸವಿರುವ ನಗರದಲ್ಲಿ ಸ್ವಂತ ಮನೆಯನ್ನು ಹೊಂದಿರಬಾರದು. ವ್ಯಕ್ತಿಯು ಪೋಷಕರ ಜೊತೆಗೆ ವಾಸವಿದ್ದರೆ, 80GG ತೆರಿಗೆ ವಿನಾಯ್ತಿಯನ್ನು ಪಡೆಯಬಹುದು. ಬಾಡಿಗೆ ಮೇಲಿನ ತೆರಿಗೆ ವಿನಾಯಿತಿ ಪಡೆಯಲು 10BA ಫಾರ್ಮ್ ಅನ್ನು ಸಲ್ಲಿಸಬೇಕು. ಪ್ಯಾನ್ ಕಾರ್ಡ್ ಮಾಹಿತಿಯನ್ನು ನೀಡಬೇಕು. ನೀವೇನಾದರೂ ಸುಲ್ಳು ದಾಖಲೆ ನೀಡಿದ್ದರೆ ಆದಾಯ ತೆರಿಗೆ ಇಲಾಖೆಯಿಂದ ನಿಮ್ಮ ಕೈಗೆ ನೋಟೀಸ್ ಬರುವುದಂತೂ ಗ್ಯಾರೆಂಟಿ.

Related News

spot_img

Revenue Alerts

spot_img

News

spot_img