25.8 C
Bengaluru
Friday, November 22, 2024

ಹೊಸ ವರ್ಷಕ್ಕೆ ಕೊರೋನಾ ಸ್ಫೋಟದ‌ ಸಂಭವ ಹೆಚ್ಚು ಸೋಂಕಿನ ಲಕ್ಷಣಗಳು ಏನೇನು.?

ಪ್ರಸ್ತುತ ದೇಶದಲ್ಲಿ ಕೊರೋನಾ ಹೆಚ್ಚಾಗುತ್ತಿದ್ದು, ಈಗಾಗಲೇ ರಾಜ್ಯದಲ್ಲೂ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಿದೆ. ಅಲ್ಲದೆ, ಕೊರೋನಾ ಸೋಂಕಿತ‌ ಪಾಸಿಟಿವ್ ಪ್ರಕರಣಗಳ ಸಂಖ್ಯೆಯಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಇದರ ಬೆನ್ನಲೇ ತಜ್ಞರು ಶಾಕಿಂಗ್ ಮಾಹಿತಿಯನ್ನ ಹೊರಹಾಕಿದ್ದಾರೆ.

ದಿನನಿತ್ಯ 2500 ಕೋವಿಡ್ ಟೆಸ್ಟ್ ಮಾಡುವ ಗುರಿ
ಜನವರಿ ಮೊದಲ ವಾರದಲ್ಲಿ ಕರ್ನಾಟಕದಲ್ಲಿ ಕೊರೋನಾ ಸ್ಪೋಟವಾಗಲಿದೆ ಎಂದು ಐಐಎಸ್ಸಿ (IISC) ಹಾಗೂ ಟಿಎಸಿ ತಜ್ಞರು ಶಾಕ್ ನೀಡಿದ್ದಾರೆ. ಜನವರಿ ಮೊದಲ ವಾರದಲ್ಲಿ ಕರ್ನಾಟಕದಲ್ಲಿ ಕೊರೊನಾ ಸ್ಪೋಟವಾಗಲಿದೆ, ಜನವರಿ ಮೊದಲ ವಾರ ಏರಿಕೆಯಾಗಿ ಫೆಬ್ರವರಿಯಲ್ಲಿ ಇಳಿಕೆಯಾಗುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ನೀಡಿದ್ದಾರೆ. ಈ ಹಿನ್ನೆಲೆ ಬೆಂಗಳೂರಿನಲ್ಲಿ ಪ್ರತಿನಿತ್ಯ 2500 ಕೋವಿಡ್ ಟೆಸ್ಟ್ ಗಳನ್ನು ಮಾಡಲಾಗುತ್ತೆ.

ಜೆ-N1 ಪ್ರಮುಖ ಲಕ್ಷಣಗಳೇನು ಗೊತ್ತಾ..?

ವಿಶ್ವದಾದ್ಯಂತ ಕೋವಿಡ್ ಸೋಂಕಿನ ಹೊಸ ರೂಪಾಂತರ ಜೆಎನ್ .1‌ (JN.1) ಅಬ್ಬರಿಸುತ್ತಿದ್ದು, ಇದೀಗ ಭಾರತದಲ್ಲಿ ಆತಂಕ ಸೃಷ್ಟಿಸಿದೆ. ನೆರೆಯ ರಾಜ್ಯವಾದ ಕೇರಳದಲ್ಲಿ, ಜೆಎನ್ .1 ವೈರಸ್ ಡಿಸೆಂಬರ್ 8 ರಂದು 78 ವರ್ಷದ ಮಹಿಳೆಯಲ್ಲಿ ಮೊದಲು ಕಾಣಿಸಿಕೊಂಡಿತು. ಈಗ ಜೆಎನ್.1 ರೂಪಾಂತರಿ ಕರ್ನಾಟಕ ಸೇರಿದಂತೆ ಹಲವಾರು ರಾಜ್ಯಗಳಿಗೆ ವಿಸ್ತರಿಸುತ್ತಿರುವುದರಿಂದ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆರೋಗ್ಯ ಮಾರ್ಗಸೂಚಿಗಳನ್ನು ಹೊರಡಿಸಿವೆ.ಕೋವಿಡ್ ರೂಪಾಂತರವು ವೇಗವಾಗಿ ಹರಡುತ್ತಿದೆ ಮತ್ತು ಕೆಲವು ಸಾವುಗಳು ಸಂಭವಿಸಿವೆ. ಆದ್ದರಿಂದ ಹೊಸ ರೂಪಾಂತರದ ರೋಗಲಕ್ಷಣಗಳನ್ನು ನಿರ್ಲಕ್ಷಿಸದಿರುವುದು ಅಪಾಯಕಾರಿ..

Related News

spot_img

Revenue Alerts

spot_img

News

spot_img