22 C
Bengaluru
Monday, December 23, 2024

ಪೂರ್ವ ದಿಕ್ಕಿನ ಯಾವ ಭಾಗದಲ್ಲಿ ಮುಖ್ಯದ್ವಾರ ಇಡಬೇಕು? ವಾಸ್ತುತಜ್ಞ ನಯನ್‌ಕುಮಾರ್ ಸಲಹೆ

ಒಂದು ಮನೆಗೆ ನಿವೇಶನದ ನಾಲ್ಕು ದಿಕ್ಕು, ಮನೆ ನಿರ್ಮಾಣದ ವಾಸ್ತು ಎಷ್ಟು ಮುಖ್ಯವೋ ಮನೆಯ ಮುಖ್ಯ ದ್ವಾರದ ವಾಸ್ತು ಕೂಡ ಅಷ್ಟೇ ಮುಖ್ಯ. ಮನೆ ವಾಸ್ತು ಸರಿಯಿದ್ದು, ಮುಖ್ಯದ್ವಾರದ ವಾಸ್ತು ಎಡವಟ್ಟಾದರೂ ವಾಸ್ತು ಪಾಲಿಸಿ ಪ್ರಯೋಜನ ಆಗುವುದಿಲ್ಲ. ಮನೆಯ ಮುಖ್ಯದ್ವಾರ ವಾಸ್ತು ಪಾಲನೆಯಲ್ಲಿ ಸ್ವಲ್ಪ ಎಡವಟ್ಟಾದರೂ ಸಮಸ್ಯೆಗಳು ಎದುರಾಗುತ್ತವೆ ಎನ್ನುತ್ತದೆ ವೇದಿಕ್ ವಾಸ್ತು ಶಾಸ್ತ್ರ. ಹೀಗಾಗಿ ಮನೆಯ ವಾಸ್ತು ಜತೆಗೆ ಮನೆಯ ಮುಖ್ಯದ್ವಾರದ ವಾಸ್ತು ಕೂಡ ಅಷ್ಟೇ ಮಹತ್ವ ಪಡೆದುಕೊಂಡಿದೆ. ಮನೆಯ ಮುಖ್ಯದ್ವಾರ ವಾಸ್ತು ಪ್ರಕಾರ ಇಡುವ ಬಗ್ಗೆ ವೇದಿಕ್ ವಾಸ್ತು ತಜ್ಞ ನಯನ್‌ಕುಮಾರ್ ಇಲ್ಲಿ ಸಂಕ್ಷಿಪ್ತವಾಗಿ ವಿವರಿಸಿದ್ದಾರೆ.

ಮನೆಯ ಮುಖ್ಯದ್ವಾರ ವಾಸ್ತು:
ಮನೆ ನಿರ್ಮಿಸುವ ಪ್ರತಿಯೊಬ್ಬರು ವಾಸ್ತು ನೋಡಿಯೇ ಮನೆ ಕಟ್ಟುತ್ತಾರೆ. ವಾಸ್ತು ಸರಿಯಿದೆ ಎಂದು ಮನೆ ಮುಖ್ಯದ್ವಾರ ವಾಸ್ತು ವಿಚಾರದಲ್ಲಿ ನಿರ್ಲಕ್ಷ್ಯ ಭಾವನೆ ತಾಳುತ್ತಾರೆ. ಆದರೆ ವೇದಿಕ್ ವಾಸ್ತು ಶಾಸ್ತ್ರದಲ್ಲಿ ಮನೆ ವಾಸ್ತು ಎಷ್ಟು ಮುಖ್ಯವೋ ಮನೆ ಮುಖ್ಯ ದ್ವಾರ ವಾಸ್ತು ಕೂಡ ಅಷ್ಟೇ ಮಹತ್ವವಿದೆ. ಮನೆ ಬಾಗಿಲು ಯಾವ ದಿಕ್ಕಿನಲ್ಲಿ ವಾಸ್ತು ಪ್ರಕಾರ ಹೇಗೆ ಇಡಬೇಕು ಎಂಬುದನ್ನು ವಾಸ್ತು ತಜ್ಞರು ನಾಲ್ಕು ದಿಕ್ಕಿನ ವಿವರ ತ್ರಿಡಿ ಚಿತ್ರಪಟದ ಮೂಲಕ ವಿವರಿಸಿದ್ದಾರೆ.

ಒಂದೊಂದು ದಿಕ್ಕಿನಲ್ಲೂ ಬದಲಾವಣೆ:
ಬೆಂಗಳೂರಿನಂತಹ ಮಹಾ ನಗರಗಳಲ್ಲಿ ಮನೆ ನಿರ್ಮಿಸುವಾಗ ಕೇವಲ ಪೂರ್ವಕ್ಕೆ ಮಹಾದ್ವಾರ ಇಡಲು ಸಾಧ್ಯವಿಲ್ಲ. ಅಥವಾ ಉತ್ತರ ದಿಕ್ಕಿಗೆ ಮಹಾದ್ವಾರ ಇಟ್ಟು ಮನೆ ನಿರ್ಮಿವುದು ಅಸಾಧ್ಯ. ಅನಿವಾರ್ಯವಾಗಿ ನಾಲ್ಕು ದಿಕ್ಕಿನಲ್ಲಿ ಒಂದು ದಿಕ್ಕಿನಲ್ಲಿ ಮಹಾದ್ವಾರ ಇಡುವ ಅನಿವಾರ್ಯತೆ ಎದುರಾಗುತ್ತದೆ. ವೈದಿಕ ವಾಸ್ತು ಶಾಸ್ತ್ರದ ಪ್ರಕಾರ ಒಂದು ಮನೆಗೆ ನಾಲ್ಕು ದಿಕ್ಕಿನಲ್ಲಿ ಮುಖ್ಯ ದ್ವಾರ ಇಡಬಹುದು. ಆದರೆ ಯಾವ ಭಾಗದಲ್ಲಿ, ಎಷ್ಟು ಅಡಿ ಅಂತರದಲ್ಲಿ ಮನೆ ಬಾಗಿಲು ಇಡುತ್ತೇವೆ ಎಂಬುದು ಬಹಳ ಮುಖ್ಯವಾಗುತ್ತದೆ.

ಮನೆಗೆ ಮುಖ್ಯದ್ವಾರ ಇಡುವ ಮುನ್ನ ನಿವೇಶನ ವಿಂಗಡಣೆ:
ನಿವೇಶನದ ಯಾವುದೇ ದಿಕ್ಕಿನಲ್ಲಿ ಮಹಾದ್ವಾರ ಇಡುವುದಾದರೂ ಆ ನಿವೇಶನದ ಒಂದು ದಿಕ್ಕಿನ ಪೂರ್ಣ ಅಡಿಗಳನ್ನು ಲೆಕ್ಕಕ್ಕೆ ಪರಿಗಣಿಸಬೇಕು. ಅದನ್ನು ಎಂಟು ಸಮ ಭಾಗಗಳಗಿ ವಿಂಗಡಣೆ ಮಾಡಬೇಕು. ಎಂಟು ಸಮ ಭಾಗಗಳನ್ನು ಗುರುತು ಮಾಡಿ, ಯಾವ ಭಾಗಕ್ಕೆ ವಾಸ್ತು ಸರಿಯಾಗಿ ಬರುತ್ತದೆಯೋ ಆ ಭಾಗದಲ್ಲಿ ಮಹಾದ್ವಾರ ಇಡಬೇಕು. ಅದರಲ್ಲಿ ಮೊದಲ ಭಾಗವಾಗಿ ಪೂರ್ವ ದಿಕ್ಕಿನಲ್ಲಿ ಮಹಾದ್ವಾರ ಇಡುವುದಾದರೆ ಹೇಗೆ ಇಡಬೇಕು ಎಂಬುದನ್ನು ಇಲ್ಲಿ ವಿವರಿಸಲಾಗಿದೆ.

ಮನೆಯ ಪೂರ್ವ ದಿಕ್ಕಿಗೆ ಮಹಾದ್ವಾರ ಇದ್ದರೆ..
ಪೂರ್ವ ದಿಕ್ಕಿನ ಅಳತೆ ಮಾಡುವ ವಿವರ: ಯಾವುದೇ ಒಂದು ನಿರ್ಮಾಣ ಹಂತದ ಮನೆಯ ಪೂರ್ವ ದಿಕ್ಕಿಗೆ ಮಹಾದ್ವಾರ ಇಡುವುದಾದರೆ ಮೊದಲು ಆ ನಿವೇಶನದ ಪೂರ್ವ ದಿಕ್ಕನ್ನು ಅಳತೆ ಮಾಡಬೇಕು. ಉದಾಹರಣೆಗೆ ಪೂರ್ವ ದಿಕ್ಕಿನ ನಿವೇಶನ 40 ಅಡಿ ಇದ್ದಲ್ಲಿ, ಅದನ್ನು ಎಂಟು ಸಮ ಭಾಗಗಳನ್ನಾಗಿ ವಿಂಗಡಣೆ ಮಾಡಬೇಕು. ಐದು ಅಡಿಗೆ ಒಂದು ಭಾಗವಾಗಿ ಭಾಗಿಸಿದರೆ 80 ಅಡಿ ಆಗುತ್ತದೆ. ಅಂದರೆ ಐದು ಅಡಿಗೆ ಒಂದು ಭಾಗ ಎಂದು ಎಂಟು ಭಾಗಗಳನ್ನು ವಿಂಗಡಣೆ ಮಾಡಿ ಗುರುತು ಹಾಕಿಕೊಳ್ಳಬೇಕು. ಈ ಗಣನೆಯನ್ನು ದೇವಮೂಲೆಯಿಂದ ಪ್ರಾರಂಭಿಸಬೇಕು. ಅಂದರೆ ಈಶಾನ್ಯದಿಂದ ಪ್ರಾರಂಭಿಸಿ ಆಗ್ನೇಯ ಮೂಲೆಯ ವರೆಗೆ ಎಣಿಕೆ ತೆಗೆದುಕೊಳ್ಳಬೇಕು.

ಪೂರ್ವ ದಿಕ್ಕಿನ ಮೊದಲೇ ಭಾಗದಲ್ಲಿ ಮಹಾದ್ವಾರ ಇಟ್ಟರೆ ?
ಪೂರ್ವ ದಿಕ್ಕಿನ ಮೊದಲ ಐದು ಅಡಿ ವ್ಯಾಪ್ತಿಗೆ ಬರುವ ಒಂದನೇ ಭಾಗದಲ್ಲಿ (ಈಶಾನ್ಯದಿಂದ ಪ್ರಾರಂಭಿಸಿ ಆಗ್ನೇಯ ಕಡೆಗೆ ಮೊದಲ ಭಾಗ) ಮುಖ್ಯದ್ವಾರ ಇಟ್ಟರೆ ವೇದಿಕ್ ವಾಸ್ತು ಶಾಸ್ತ್ರದ ಪ್ರಕಾರ ಅನಿರೀಕ್ಷಿತ ಬೆಂಕಿ ಅವಘಡ, ಅಪಘತ, ಅನಿರೀಕ್ಷಿತ ನಷ್ಟ ಉಂಟು ಮಾಡುತ್ತದೆ. ವೇದಿಕ್ ವಾಸ್ತು ಪ್ರಕಾರ ಮೊದಲೇ ಭಾಗದಲ್ಲಿ ಮುಖ್ಯದ್ವಾರ ಇಡುವುದು ಒಳಿತು ಅಲ್ಲ.

ಪೂರ್ವ ದಿಕ್ಕಿನ ಎರಡನೇ ಭಾಗದ ವಿವರ:
ಒಂದು ಮನೆಯ ಪೂರ್ವ ದಿಕ್ಕಿನ ಎರಡನೇ ಭಾಗದಲ್ಲಿ ಮುಖ್ಯದ್ವಾರ ಇಡುವುದು ಒಳಿತು ಅಲ್ಲ ಎನ್ನುತ್ತದೇ ವೈದಿಕ ವಾಸ್ತು ಶಾಸ್ತ್ರ. ಅರಿವು ಇಲ್ಲದೇ ಎರಡು ಇಂಚು ಎಡವಟ್ಟು ಮಾಡಿ ಮುಖ್ಯದ್ವಾರ ಇಟ್ಟರೂ ಮನೆ ಒಡೆಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಪೂರ್ವ ಭಾಗದ ಎರಡನೇ ದಿಕ್ಕಿನಲ್ಲಿ ಮಹಾದ್ವಾರ ಇಟ್ಟರೆ, ಹೆಣ್ಣು ಮಕ್ಕಳ ಸಂತಾನ ಹೆಚ್ಚಾಗಿ, ಬಹಳಷ್ಟು ವ್ಯರ್ಥ ವೆಚ್ಚವಾಗುತ್ತದೆ. ಅಂದರೆ ದುಂದು ವೆಚ್ಚಕ್ಕೆ ನಾಂದಿಯಾಡುತ್ತದೆ ಎನ್ನುತ್ತದೆ ವಾಸ್ತು ಶಾಸ್ತ್ರ.

ಪೂರ್ವ ದಿಕ್ಕಿನ 3ನೇ ಭಾಗದಲ್ಲಿಟ್ಟರೆ?
ಒಂದು ಮನೆಯ ಪೂರ್ವ ದಿಕ್ಕಿನ ಮೂರನೇ ಭಾಗದಲ್ಲಿ ಮುಖ್ಯದ್ವಾರ ಇಟ್ಟರೆ, ಈ ಪ್ರವೇಶವು ಮನೆ ಮಾಲೀಕರಿಗೆ ಮಂಗಳಕರ. ಹಣ, ಯಶಸ್ಸು, ಲಾಭ ತಂದುಕೊಡುತ್ತದೆ. ಅಂದರೆ ಈಶಾನ್ಯ ದಿಕ್ಕಿನಿಂದ 40 ಅಡಿ ನಿವೇಶನ ಅಳತೆ ಇದ್ದರೆ, ಹತ್ತು ಅಡಿ ಬಿಟ್ಟು 11 ನೇ ಅಡಿಯಿಂದ 13 -14 ನೇ ಅಡಿ ಅಂತರದಲ್ಲಿ ಮುಖ್ಯ ದ್ವಾರ ಇಡಬೇಕಾಗುತ್ತದೆ. ಅತಿ ಸೂಕ್ಷ್ಮವಾಗಿ ನಿವೇಶನ ಅಳತೆ ಮಾಡಿ ಮುಖ್ಯದ್ವಾರ ಇಡಬೇಕು.

ಪೂರ್ವ ದಿಕ್ಕಿನ 4ನೇ ಭಾಗದ ಮುಖ್ಯದ್ವಾರ ವಿವರ:
ಒಂದು ನಿವೇಶನದ ಪೂರ್ವ ದಿಕ್ಕಿನ ನಾಲ್ಕನೇ ಸಮ ಭಾಗದಲ್ಲಿ ಮನೆಯ ಮುಖ್ಯದ್ವಾರ ಇಟ್ಟರೆ ಮಂಗಳಕರ, ಉತ್ತಮ ವೈಯಕ್ತಿಕ ಲಾಭವಾಗುತ್ತದೆ. ಸರ್ಕಾರದ ಅಧಿಕಾರಿಗಳೊಂದಿಗೆ ಉತ್ತಮ ಬಾಂಧವ್ಯ ವೃದ್ಧಿಯಾಗುತ್ತದೆ. ಉತ್ತಮ ಬಾಂಧವ್ಯ ಮತ್ತು ಸಂಬಂಧಗಳು ವೃದ್ಧಿಯಾಗುತ್ತವೆ ಎನ್ನುತ್ತದೆ ವೇದಿಕ್ ವಾಸ್ತು ಶಾಸ್ತ್ರ.

ಪೂರ್ವ ದಿಕ್ಕಿನ 5ನೇ ಸಮಭಾಗದಲ್ಲಿ ಮುಖ್ಯದ್ವಾರ:
ಮನೆಯ ಪೂರ್ವ ದಿಕ್ಕಿನಲ್ಲಿ ಈಶಾನ್ಯದಿಂದ ಆಗ್ನೇಯ ವಲಯಕ್ಕೆ ಐದನೇ ಸಮ ಭಾಗದಲ್ಲಿ ಮುಖ್ಯದ್ವಾರ ಇಟ್ಟರೆ, ಮನೆಯವರಲ್ಲಿ ಕೋಪ ಜಾಸ್ತಿ ಇರುತ್ತದೆ. ಅಲ್ಪ ಮನೋಭಾವನೆ ಉಂಟು ಮಾಡುತ್ತದೆ. ಇದರಿಂದ ಮನೆಯ ಶಾಂತಿ ವಾತಾವರಣ ಭಂಗವಾಗುತ್ತದೆ. ಈ ಸಮಭಾಗದಲ್ಲಿ ಮುಖ್ಯದ್ವಾರ ಇಡುವುದು ಸೂಕ್ತವಲ್ಲ ಎನ್ನುತ್ತದೆ ವಾಸ್ತು ಶಾಸ್ತ್ರ.

ಪೂರ್ವ ದಿಕ್ಕಿನ 6ನೇ ಭಾಗದ ವಿವರ
ಪೂರ್ವ ದಿಕ್ಕಿನಲ್ಲಿ ಆರನೇ ಸಮ ಭಾಗದಲ್ಲಿ ಮನೆಯ ಮುಖ್ಯದ್ವಾರ ಇಟ್ಟರೆ, ಮನೆಯವರಿಗೆ ಒಳಿತು ಆಗಲ್ಲ. ಇಂತಹ ಮನೆಯಲ್ಲಿರುವರಿಗೆ ಕೊಟ್ಟ ಮಾತು ಉಳಿಸಿಕೊಳ್ಳಲು ಕಷ್ಟಕರವಾಗುತ್ತದೆ. ಜನರ ವಿಶ್ವಾಸ ಅರ್ಹರಾಗಿರುವುದಿಲ್ಲ ಎಂದು ಹೇಳುತ್ತದೆ ವೈದಿಕ ವಾಸ್ತು ಶಾಸ್ತ್ರ.

ಪೂರ್ವ ದಿಕ್ಕಿನ 7 ನೇ ಭಾಗದ ವಿವರ:
ಪೂರ್ವ ದಿಕ್ಕಿನ ಏಳನೇ ಸಮ ಭಾಗದಲ್ಲಿ ಮುಖ್ಯದ್ವಾರ ಇಡುವುದು ವಾಸ್ತು ಶಾಸ್ತ್ರದ ಪ್ರಕಾರ ಒಳ್ಳೆಯದಲ್ಲ. ಇಲ್ಲಿ ಮುಖ್ಯದ್ವಾರ ಇಟ್ಟರೆ, ಮನೆಯವರು ಜನರ ಸಮಸ್ಯೆಗಳಿಗೆ ಸ್ಪಂದನೆ ಮಾಡಲ್ಲ. ಇತರೆ ಜನರ ಅನನುಕೂಲತೆಗಳ ಬಗ್ಗೆ ಸ್ಪಂದನೆ ಮಾಡುವುದಿಲ್ಲ. ಹೀಗಾಗಿ ಪೂರ್ವ ದಿಕ್ಕಿನ ಏಳನೇ ಭಾಗದಲ್ಲಿ ಮುಖ್ಯದ್ವಾರ ಇರುವುದು ಒಳಿತಲ್ಲ ಎಂಬುದು ವಾಸ್ತು ತಜ್ಞರು ಹೇಳುವ ಮಾತು.

ಪೂರ್ವ ದಿಕ್ಕಿನ 8 ನೇ ಭಾಗದಲ್ಲಿ ವಿವರ:
ಈ ಪ್ರವೇಶ ದ್ವಾರದಲ್ಲಿ ಮುಖ್ಯ ಬಾಗಿಲು ಇಡುವುದು ತುಂಬಾ ಅಪಾಯಕಾರಿ. ಇಲ್ಲಿ ಮುಖ್ಯದ್ವಾರ ಇದ್ದರೆ, ಅಪಘಾತ, ಹಣಕಾಸಿನ ನಷ್ಟ, ಕಳ್ಳತನ ಇತರೆ ಸಂಬಂಧಿಸಿದ ಸಮಸ್ಯೆಗಳು ಎದುರಾಗುತ್ತವೆ. ವಾಸ್ತು ಶಾಸ್ತ್ರದಲ್ಲಿ ನಂಬಿಕೆ ಇರುವರು ಯಾರೂ ಈ ಭಾಗದಲ್ಲಿ ಮನೆ ಮುಖ್ಯದ್ವಾರ ಇಡುವುದೇ ಇಲ್ಲ ಎನ್ನುತ್ತಾರೆ ವಾಸ್ತು ತಜ್ಞ ನಯನ್ ಕುಮಾರ್.

ಮುಖ್ಯಧ್ವಾರ ವಾಸ್ತು ಕುರಿತ ಗೊಂದಲ, ಸಮಸ್ಯೆಗಳ ಬಗ್ಗೆ ಸಲಹೆಗಾಗಿ ವಾಸ್ತು ತಜ್ಞ ನಯನ್ ಕುಮಾರ್ ಅವರ ಸಂಪರ್ಕಿಸಿ: 6363386332

Related News

spot_img

Revenue Alerts

spot_img

News

spot_img