ಬೆಂಗಳೂರು, ಫೆ. 20 : ಬೆಂಗಳುರಿನಲ್ಲಿ ಕೆಲಸವೇನೋ ಸುಲಭವಾಗಿ ಒಂದಲ್ಲ ಮತ್ತೊಂದು ಎಂದು ಸಿಗಬಹುದು. ಆದರೆ ಬಾಡಿಗೆಗೆ ಮನೆಗಳು ಸಿಗುವುದು ಬಹಳ ಕಷ್ಟ. ಐಟಿ-ಬಿಟಿ ಕಂಪನಿಗಳು ಹೆಚ್ಚಾದಂತೆ ಬೆಂಗಳೂರಿನಲ್ಲಿ ಜನಸಾಮಾನ್ಯರ ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇದರಿಂದ ಬಾಡಿಗೆ ಮನೆಗಳು ಸದಾ ಫುಲ್ ಆಗಿರುತ್ತವೆ. ಹಾಗಾಗಿ ಬೆಂಗಳೂರಿನಲ್ಲಿ ಬಾಡಿಗೆ ಮನೆಗಳ ಬೇಡಿಕೆ ಬೆಂಗಳೂರಿನಲ್ಲಿ ಹೆಚ್ಚಾಗಿಯೇ ಇರುತ್ತದೆ. ಕೋವಿಡ್ ಸಂದರ್ಭದಲ್ಲಿ ಬಾಡಿಗೆ ಮನೆಗಳಲ್ಲಿದ್ದವರು ಮನೆ ಖಾಲಿ ಮಾಡಿಕೊಂಡು ಊರಿಗೆ ಹೋಗಿದ್ದರು. ಆ ಸಂದರ್ಭದಲ್ಲಿ ಬಿಟ್ಟರೆ, ಬಾಡಿಗೆ ಮನೆಗಳ ಬೇಡಿಕೆ ಕೊಂಚವೂ ಕಡಿಮೆ ಆಗಿಲ್ಲ.
ನೀವ್ಯಾರಾದರೂ ಬಾಡಿಗೆ ಮನೆಯನ್ನು ಹುಡುಕುತ್ತಿದ್ದು, ಕೊಂಚ ಕಡಿಮೆ ಬೆಲೆಗೆ ಬಾಡಿಗೆ ಮನೆ ಸಿಗಬಹುದೆಂದು ನೋಡುತ್ತಿದ್ದೀರಾ. ಹಾಗಾದರೆ, ಬೆಂಗಳೂರಿನ ಆರು ಪ್ರದೇಶಗಳಲ್ಲಿ ಅಗ್ಗದ ಬೆಲೆಗೆ ಬಾಡಿಗೆ ಮನೆಗಳು ಸಿಗುತ್ತವೆ ಎಂದು ಸಂಸ್ಥೆಯೊಂದು ವರದಿ ಮಾಡಿವೆ. ಆ ಆರು ಪ್ರದೇಶಗಳು ಯಾವುವು.? ಅಲ್ಲಿ ಎಷ್ಟು ಕಡಿಮೆಗೆ ಬಾಡಿಗೆ ಮನೆಗಳು ಅಭ್ಯವಿದೆ.? ಬಾಡಿಗೆ ಎಷ್ಟಿರಬಹುದು ಎಂಬುದನ್ನು ನೋಡೋಣ ಬನ್ನಿ.
ಹೆಬ್ಬಾಳ: ಮೊದಲನೇಯದಾಗಿ ಹೆಬ್ಬಾಳದಲ್ಲಿ ಬಾಡಿಗೆ ಮನೆಗಳು ಅಗ್ಗವಾಗಿವೆ. ಹೆಬ್ಬಾಳದಲ್ಲಿ ಅತಿ ಹೆಚ್ಚು ಅಪಾರ್ಟ್ ಮೆಂಟ್ ಗಳಿವೆ. ಹೆಬ್ಬಾಳದಲ್ಲಿ ಉತ್ತಮ ಸಂಪರ್ಕ ಸೇವೆ ಇದ್ದು, ಮೂಲಸೌಕರ್ಯಕ್ಕೂ ಕೊರತೆ ಇಲ್ಲ. ಇನ್ನು ಇಲ್ಲಿ ಶೇ. 49ರಷ್ಟು ಬಹಮಹಡಿ ಅಪಾರ್ಟ್ ಮೆಂಟ್ ಗಳಿವೆ. ಪ್ರಸ್ತುತ ಶೇ. 36 ರಷ್ಟು ಬಾಡಿಗೆ ಮನೆಗಳು ಲಭ್ಯವಿದೆ. ಇದರಲ್ಲಿ ಸುಮಾರು ಶೇ.16 ರಷ್ಟು ಬಾಡಿಗೆ ಮನೆಗಳು ಹತ್ತರಿಂದ ಹದಿನೈದು ಸಾವಿರದವರೆಗೆ ಬಾಡಿಗೆಯನ್ನು ನಿಗದಿ ಪಡಿಸಲಾಗಿದೆ. ಇನ್ನು ಶೇ. 14 ರಷ್ಟು ಮನೆಗಳು ಐದರಿಂದ ಹತ್ತಯ ಸಾವಿರದವರೆಗೂ ಬಾಡಿಗೆ ದೊರೆಯುತ್ತದೆ. ಹೆಬ್ಬಾಳದಲ್ಲಿ ಹೆಚ್ಚು ಮೂರು ಕೊಠಡಿಗಳಿರುವ ಮನೆಗಳು ಕಂಡು ಬರುತ್ತವೆ.
ಬಿಟಿಎಂ ಲೇಔಟ್: ದಕ್ಷಿಣ ಬೆಂಗಳೂರಿನಲ್ಲಿರುವ ಬಿಟಿಎಂ ಲೇಔಟ್, ಉತ್ತಮವಾಗಿ ಅಭಿವೃದ್ಧಿ ಹೊಂದಿದೆ ನಗರವಾಗಿದೆ. ಬಿಟಿಎಂ ಲೇಔಟ್ ಸಾಮಾಜಿಕ ಹಾಗೂ ಸಾಂಸ್ಕೃತಿಕ ಜೀವನ ಶೈಲಿಯನ್ನು ಹೊಂದಿದೆ. ಬಿಟಿಎಂ ಲೇಔಟ್ ನಲ್ಲಿ ಹೆಚ್ಚು ಸಿಂಗಲ್ ಬೆಡ್ರೂಮ್ ಮನೆಗಳಿದ್ದು, ಶೇ.34 ರಷ್ಟು ಮನೆಗಳು ಹತ್ತರಿಂದ ಹದಿನೈದು ಸಾವಿರಕ್ಕೆ ಲಭ್ಯವಿದೆ. ಇನ್ನು ಶೇ.21 ರಷ್ಟು ಮನೆಗಳು ಐದರಿಂದ ಹತ್ತು ಸಾವಿರಕ್ಕೆ ಬಾಡಿಗೆಗೆ ದೊರೆಯುತ್ತವೆ.
ಚಂದಾಪುರ: ಚಂದಾಪುರ ಪ್ರದೇಶವು ಇತರೆ ಉದ್ಯೋಗ ಸ್ಥಳಗಳಿಗೆ ಹೆಚ್ಚು ಸಂಪರ್ಕವನ್ನು ಹೊಂದಿದೆ. ಚಂದಾಪುರದಲ್ಲಿ ಇಂಡಿಪೆಂಡೆಂಟ್ ಮನೆಗಳು, ವಿಲ್ಲಾಗಳು, ಪೆಂಟ್ ಹೌಸ್ ಗಳು, ಅಪಾರ್ಟ್ ಮೆಂಟ್ ಗಳು ಸೇರಿದಂತೆ ಬಾಡಿಗೆಗೆ ಮನೆಗಳು ಸಿಗುತ್ತವೆ. ಇಲ್ಲಿಯೂ ಅಗ್ಗದ ಬೆಲೆಗೆ ಬಾಡಿಗೆ ಮನೆಗಳು ಸಿಗುತ್ತವೆ. ಶೇ. 36 ರಷ್ಟು ಮನೆಗಳು ಹತ್ತರಿಂದ ಹದಿನೈದು ಸಾವಿರಕ್ಕೆ ಲಭ್ಯವಿದ್ದು, ಹಾಗೆಯೇ ಶೇ. 36 ರಷ್ಟು ಮನೆಗಳು ಐದರಿಂದ ಹತ್ತು ಸಾವಿರದವರೆಗೆ ಬಾಡಿಗೆಗೆ ಸಿಗುತ್ತದೆ. ಚಂದಾಪುರದಲ್ಲಿ ಶೇ. 58 ರಷ್ಟು ಮನೆಗಳು ಬಾಡಿಗೆಗೆ ಇದ್ದು, ಇದರಲ್ಲಿ ಶೇ. 39 ರಷ್ಟು ಮನೆಗಳು ಅಪಾರ್ಟ್ ಮೆಂಟ್ ಗಳಾಗಿವೆ.
ಹೊಸಕೋಟೆ: ನಗರ ಪ್ರದೇಶದಿಂದ ಕೊಂಚ ಹೊರಗಿದ್ದು, ಪ್ರಶಾಮತವಾಗಿದೆ. ವಿಶಾಲವಾಗಿರುವ ಹೊಸಕೋಟೆಯಲ್ಲಿ ಶೇ. 46 ರಷ್ಟು ಮನೆಗಳು ಹತ್ತರಿಂದ ಹದಿನೈದು ಸಾವಿರಕ್ಕೆ ಬಾಡಿಗೆಗೆ ಸಿಗುತ್ತವೆ. ಶೇ. 36 ರಷ್ಟು ಮನೆಗಳು ಐದರಿಂದ ಹತ್ತು ಸಾವಿರಕ್ಕೆ ಲಭ್ಯವಿದೆ. ಅತಿ ಹೆಚ್ಚು ಡಬಲ್ ಬೆಡ್ ರೂಮ್ ಗಳು ಇದ್ದು, ಶೇ.48 ಮನೆಗಳು ಭರ್ತಿಯಾಗಿವೆ. ಇನ್ನು ಹೊಸಕೋಟೆಯಲ್ಲಿ ಶೇ. 27 ರಷ್ಟು ಅಪಾರ್ಟ್ ಮೆಂಟ್ ಗಳಿವೆ.
ಎಲೆಕ್ಟ್ರಾನಿಕ್ ಸಿಟಿ: ಬೆಮಗಳೂರಿನ ಇತರೆ ನಗರಗಳಿಗೆ ಹೋಲಿಸಿದರೆ, ಎಲೆಕ್ಟ್ರಾನಿಕ್ ಸಿಟಿಯಲ್ಲಿ ಬಾಡಿಗೆ ಮನೆಗಳು ಕೊಂಚ ಹೆಚ್ಚೇ ಅಗ್ಗವಾಗಿದೆ. ಶೇ. 34 ಮನೆಗಳು ಐದರಿಂದ ಹತ್ತು ಸಾವಿರಕ್ಕೆ ಬಾಡಿಗೆಗೆ ಮನೆಗಳು ಸಿಗುತ್ತವೆ. ಶೇ. 19 ರಷ್ಟು ಮನೆಗಳು ಹತ್ತರಿಂದ ಹದಿನೈದು ಸಾವಿರದವರೆಗೂ ಬಾಡಿಗೆಗೆ ಮನೆಗಳು ಸಿಗುತ್ತವೆ. ಇಲ್ಲಿ ಹೆಚ್ಚು ಡಬಲ್ ಬೆಡ್ ರೂಮ್ ಮನೆಗಳೇ ಇವೆ. ಇನ್ನು ಶೇ. 44 ಮನೆಗಳು ಬಾಡಿಗೆಗೆ ಲಭ್ಯವಿದ್ದು, ಶೇ. 41 ರಷ್ಟು ಮನೆಗಳು ಅಪಾರ್ಟ್ ಮೆಂಟ್ ಗಳಿವೆ.
ಕನಕಪುರ ರಸ್ತೆ: ಕನಕಪುರ ರಸ್ತೆಯಲ್ಲಿ ರಿಯಲ್ ಎಸ್ಟೇಟ್ ಉದ್ಯಮ ಅತಿವೇಗವಾಗಿ ಬೆಳೆಯುತ್ತಿದೆ. ಶೇ. 15 ರಷ್ಟು ಮನೆಗಳು ಐದರಿಂದ ಹತ್ತು ಸಾವಿರಕ್ಕೆ ಲಭ್ಯವಿದ್ದರೆ, ಶೇ. 13 ರಷ್ಟು ಮನೆಗಳು ಹತ್ತರಿಂದ ಹದಿನೈದು ಸಾವಿರಕ್ಕೆ ಸಿಗುತ್ತವೆ. ಇಲ್ಲಿ ಹೆಚ್ಚು ಮೂರು ಮಲಗುವ ಕೊಠಡಿಗಳು ಇದ್ದು, ಶೇ. 41 ರಷ್ಟು ಬಾಡಿಗೆ ಮನೆಗಳಿವೆ. ಒಟ್ಟು ಶೇ. 53 ರಷ್ಟು ಮನೆಗಳು ಅಪಾರ್ಟ್ ಮೆಂಟ್ ಗಳಾಗಿವೆ.