22.9 C
Bengaluru
Friday, July 5, 2024

ಬಿಡಿಎ ಹಂಚಿಕೆ ಮಾಡಿರುವ ನಿವೇಶನಗಳ ಮಾಲೀಕರಿಗೆ ಮನೆ ಕಟ್ಟಲು ಸಾಧ್ಯವಾಗುತ್ತಿಲ್ಲ

ಬೆಂಗಳೂರು, ಮಾ. 16 : ನಿವೇಶನಗಳ ಹಂಚಿಕೆ ವಿಚಾರದಲ್ಲೂ ಬಿಡಿಎ ಎಡವಟ್ಟು ಮಾಡಿಕೊಂಡಿದೆ. ಈಗಾಗಲೇ ಬನಶಂಕರಿ 6 ನೇ ಹಂತದಲ್ಲಿ ಬಿಡಿಎ ನಿವೇಶನಗಳನ್ನು ಹಂಚಿಕೆ ಮಾಡಿದೆ. ಆದರೆ, ನಿವೇಶನಗಳ ಮಾಲೀಕರು ಈಗ ಅಲ್ಲಿ ಮನೆಗಳನ್ನು ಕಟ್ಟಲು ಸಾಧ್ಯವಾಗುತ್ತಿಲ್ಲ. ಮನೆ ನಿರ್ಮಾಣ ಮಾಡಲು ಮುಂದಾದ ಮಾಲೀಕರಿಗೆ ಹಲವು ಅಡಚಣೆಗಳು ಎದುರಾಗಿದೆ. ಈ ಬಗ್ಗೆ ಸಾರ್ವಜನಿಕ ಕುಂದುಕೊರತೆಗಳ ಸಭೆಯಲ್ಲಿ ಬಹಿರಂಗಪಡಿಸಲಾಗಿದೆ. ನಿವೇಶನಗಳನ್ನು ಹಂಚಿರುವ ಸಮೀಪದಲ್ಲೇ ತುರಹಳ್ಳಿ ಅರಣ್ಯ ಇದೆ. ಹೀಗಾಗಿ ಅರಣ್ಯ ಇಲಾಖೆ ಮನೆ ನಿರ್ಮಾಣಕ್ಕೆ ಅನುಮತಿ ನೀಡುತ್ತಿಲ್ಲ. ಈ ಬಗ್ಗೆ ಸಾವರ್ಜನಿಕ ಕುಂದುಕೊರತೆ ಸಭೆ ನಡೆಸಿದಾಗ ವಿಚಾರ ತಿಳಿದಿದೆ.

2003-04 ರ ಅವಧಿಯಲ್ಲಿ ಬಿಡಿಎ ಒಟ್ಟು 2006 ನಿವೇಶನಗಳನ್ನು ಹಂಚಿಕೆ ಮಾಡಿತ್ತು. ಈಗ ಈ ನಿವೇಶನಗಳ ಮಾಲಿಕರು ಮನೆ ನಿರ್ಮಾಣಕ್ಕೆ ಮುಂದಅಗಿದ್ದಾರೆ. ಆಗ ಅರಣ್ಯ ಇಲಾಖೆ ಅನುಮತಿ ನೀಡದಿರುವುದು ಸಮಸ್ಯೆಗೆ ಕಾರಣವಾಗಿದೆ. ಇನ್ನು ಅರಣ್ಯ ಇಲಾಖೆ ಈ ಪ್ರದೇಶದಲ್ಲಿರುವ ಬಹಳಷ್ಟು ಭೂಮಿ ಅರಣ್ಯಕ್ಕೆ ಸೇರಿದ್ದು ಎಂದು 2009 ರಲ್ಲಿ ಹೇಳಿದೆ. ಇದರಿಂದ ಬಿಡಿಎಗೆ 849 ನಿವೇಶನಗಳು ಕೈ ತಪ್ಪಿದೆ. ಇದರಿಂದ ನಷ್ಟವನ್ನು ಎದುರಿಸಿದೆ. ಇನ್ನು ಬಿಡಿಎ ಮೂಲಕ ನಿವೇಶನಗಳನ್ನು ಪಡೆದ ಮಾಲೀಕರು ಎರಡು ವರ್ಷಗಳ ಹಿಂದೆ ಮನೆ ನಿರ್ಮಾಣಕ್ಕೆ ಮುಂದಾಗಿದ್ದಾರೆ.

ಈ ಸಂದರ್ಭದಲ್ಲಿ ಅರಣ್ಯ ಇಲಾಖೆ ಗೋಡೆ ನಿರ್ಮಾಣ ಮಾಡಿರುವ 100ಮೀಟರ್‌ ವರೆಗೂ ಬಫರ್‌ ಝೋನ್‌ ಎಂದು ನಿವೇಶನ ನಿರ್ಮಾಣಕ್ಕೆ ಅನುಮತಿಯನ್ನು ನೀಡಿಲ್ಲ. ಇದರಿಂದ ಮತ್ತೆ ಬಿಡಿಎಗೆ ಮತ್ತಷ್ಟು ನಿವೇಶನಗಳ ನಷ್ಟವುಂಟಾಗಿದೆ. ಒಟ್ಟಾರೆಯಾಗಿ, 1,157 ನಿವೇಶನಗಳು ತೊಂದರೆಗೆ ಈಡಾಗಿವೆ ಎಂದು ಬಿಡಿಎ ಅಧಿಕಾರಿ ಹೇಳಿದ್ದಾರೆ. ಇದಲ್ಲದೇ, ಬಿಡಿಎ ಅಧಿಕಾರಿಗಳು 30 ಮೀಟರ್‌ ಬಫರ್‌ ಝೋನ್‌ ಎಂದು ಗುರುತಿಸುವಂತೆ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಿದ್ದು, ಸದ್ಯ ಬಿಡಿಎ ಹಂಚಿದ ನಿವೇಶನಗಳಲ್ಲಿ ಮನೆ ಕಟ್ಟಲಾಗದೇ ಮಾಲೀಕರು ಸಂಕಷ್ಟಕ್ಕೀಡಾಗಿದ್ದಾರೆ.

Related News

spot_img

Revenue Alerts

spot_img

News

spot_img