ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಬಡವರಿಗೆ ಮನೆ ಹಂಚುವ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಸರ್ಕಾರ ನಿರ್ಧರಿಸಿದೆ. ಫಲಾನುಭವಿಗಳಿಂದ ₹1 ಲಕ್ಷ ಮಾತ್ರ ಸಂಗ್ರಹಿಸಿ ಉಳಿದ ಮೊತ್ತವನ್ನು ರಾಜ್ಯ ಸರ್ಕಾರವೇ ಭರಿಸಲು ಸಂಪುಟ ತೀರ್ಮಾನಿಸಿದೆ. ಯೋಜನೆಯಡಿ ಟೆಂಡರ್ ಆಹ್ವಾನಿಸಿ ಅನುಷ್ಠಾನಗೊಳಿಸುತ್ತಿರುವ ಮನೆಗಳ ಪೈಕಿ ಮುಕ್ತಾಯ ಹಂತದಲ್ಲಿ 48,796 ಮನೆಗಳಿವೆ. ಫಲಾನುಭವಿಗಳು ಕೇವಲ ₹1 ಲಕ್ಷ ಪಾವತಿಸಿ ಮನೆಯನ್ನು ಪಡೆಯಬಹುದು. ಇನ್ನು ಈ ಯೋಜನೆಯಡಿ ಕೇಂದ್ರ ಸರ್ಕಾರವೂ ₹1.5 ಲಕ್ಷ ನೀಡುತ್ತದೆ.ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ವಸತಿ ಸಚಿವ ಬಿ.ಜೆಡ್.ಜಮೀರ್ ಅಹಮದ್ ಖಾನ್ ಸುದ್ದಿಗಾರರಿಗೆ ತಿಳಿಸಿದರು.
ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಕೊಳ ಗೇರಿ ಮಂಡಳಿ ಮೂಲಕ 2015ರಿಂದ 2023ರವರೆಗೆ 1,80,253 ಮನೆಗಳು ಮಂಜೂರಾಗಿದ್ದರೂ ಒಂ ದೂ ಮನೆ ನೀಡಲು ಸಾಧ್ಯವಾಗಿಲ್ಲ. ಈ ಯೋಜನೆಗೆ 7.50 ಲಕ್ಷ ರು. ವೆಚ್ಚವಾಗುತ್ತಿದ್ದು, ಈ ಪೈಕಿ ಕೇಂದ್ರ ಸರಕಾರ 1.5 ಲಕ್ಷ ರು. ಮತ್ತು ರಾಜ್ಯ ಸರಕಾರ ಸಾಮಾನ್ಯರಿಗಾದರೆ 1.20 ಲಕ್ಷ ರು. ಮತ್ತು ಎಸ್‌ಸಿ, ಎಸ್‌ಟಿಗಳಿಗೆ 2 ಲಕ್ಷ ರು. ಸಹಾಯಧನ ನೀಡುತ್ತದೆ. ಉಳಿದ ಸರಾಸರಿ 4.5 ಲಕ್ಷ ರು. ಫಲಾನುಭವಿಗಳು ಭರಿಸಬೇಕಾಗುತ್ತದೆ ಎಂದು ಹೇಳಿದರು. ಅದರಂತೆ ಫಲಾನುಭವಿಗಳಿಂದ 6,601 ಕೋಟಿ ರು. ಬರಬೇ ಕಿತ್ತಾದರೂ 110 ಕೋಟಿ ರು. ಮಾತ್ರ ಬಂದಿದೆ. ಈ ಹಿನ್ನೆಲೆಯಲ್ಲಿ ಫಲಾನುಭವಿಗಳಿಗೆ ತೊಂದರೆಯಾಗ ದಂತೆ ಅವರಿಂದ 1 ಲಕ್ಷ ರು. ಮಾತ್ರ ವಂತಿಗೆ ಸಂಗ್ರ ಹಿಸಿ ಉಳಿದ 3.5 ಲಕ್ಷ ರು. ಅನ್ನು ಸರಕಾರದಿಂದ ನೀಡಲು ತೀರ್ಮಾನಿಸಲಾಗಿದೆ ಎಂದರು.ಪಿಎಂ ಆವಾಸ್ ಮನೆಗೆ 4.5 ಲಕ್ಷ ರೂ. ಬದಲು ಒಂದು ಲಕ್ಷ ರೂಪಾಯಿ ಪಾವತಿಸಿದರೆ ಸಾಕು. ಮೊದಲ ಹಂತದಲ್ಲಿ 48,796 ಮನೆಗಳ ಪೂರ್ಣಗೊಳಿಸಲು 500 ಕೋಟಿ ರೂ. ಬಿಡುಗಡೆಗೆ ಅನುಮೋದನೆ ನೀಡಲಾಗಿದೆ. 5 ವರ್ಷದಲ್ಲಿ ಅಂತಂತವಾಗಿ ಉಳಿದ 1.3 ಲಕ್ಷ ಮನೆಗಳನ್ನು ಪೂರ್ಣಗೊಳಿಸಲಾಗುವುದು ಎಂದು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ತಿಳಿಸಿದ್ದಾರೆ.ಕಳೆದ ಹತ್ತು ವರ್ಷಗಳಿಂದ ವಸತಿ ಯೋಜನೆಗಳು ಕುಂಟುತ್ತ ಸಾಗುತ್ತಿದ್ದ ಕಾರಣ ಸಚಿವ ಜಮೀರ್ ಅಹಮದ್ ಯೋಜನೆಯನ್ನು ಪೂರ್ಣಗೊಳಿಸಿ ಫಲಾನುಭವಿಗಳಿಗೆ ನೀಡಲು ವಿಶೇಷ ಪ್ರಯತ್ನ ನಡೆಸಿದ್ದರು. ಮುಖ್ಯಮಂತ್ರಿ ಹಾಗೂ ಹಣಕಾಸು ಇಲಾಖೆಯ ಜತೆಗೆ ಹತ್ತಕ್ಕೂ ಹೆಚ್ಚು ಸಭೆ ನಡೆಸಿ ಯಶಸ್ವಿಯಾದರು.