ಬೆಂಗಳೂರು, ಫೆಬ್ರವರಿ 1: ಸಂಸತ್ನಲ್ಲಿ 2023-2024ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸುತ್ತಿದ್ದಾರೆ. ಸಚಿವೆ ನಿರ್ಮಲಾ ಸೀತಾರಾಮನ್ ಸತತ 5ನೇ ಬಾರಿಗೆ ಬಜೆಟ್ ಮಂಡಿಸುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಸರ್ಕಾರದ 2ನೇ ಅವಧಿಯ ಕೊನೆಯ ಪೂರ್ಣ ಬಜೆಟ್ ಇದಾಗಿದೆ..ಬಜೆಟ್ನಲ್ಲಿ ಮೂಲಸೌಕರ್ಯ ಮತ್ತು ಉತ್ಪಾದನೆ ಮತ್ತು ಉದ್ಯೋಗ ಸೃಷ್ಟಿಯಂತಹ ಪ್ರಮುಖ ಕ್ಷೇತ್ರಗಳನ್ನು ಉತ್ತೇಜಿಸುವತ್ತ ಗಮನಹರಿಸುವುದಾಗಿ ಹೇಳಿದರು.
ಇದೇ ವೇಳೆ ಆದಾಯ ತೆರಿಗೆ ಮಿತಿಯನ್ನು ಏಳು ಲಕ್ಷಕ್ಕೆ ಏರಿಸುವ ಘೋಷಣೆಯನ್ನೂ ಮಾಡಿದ್ದಾರೆ. ಬಹುನಿರೀಕ್ಷಿತ ಕೇಂದ್ರ ಬಜೆಟ್ (Budget 2023) ಮಂಡನೆಯಾಗಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬುಧವಾರ ಸಂಸತ್ತಿನಲ್ಲಿ ಬಜೆಟ್ ಮಂಡಿಸಿದ್ದು, ಇದು ಮಧ್ಯಮ ವರ್ಗದ ಜನರ ಹೊರೆಯನ್ನು ಬಹಳಷ್ಟು ಮಟ್ಟಿಗೆ ಇಳಿಸಿದೆ. ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣದಲ್ಲಿ ಆರ್ಥಿಕ ಬೆಳವಣಿಗೆಯ ವ್ಯಾಪ್ತಿ ವಿಸ್ತರಣೆ, ಮೂಲಸೌಕರ್ಯ ಮತ್ತು ಉತ್ಪಾದನೆ ಮತ್ತು ಉದ್ಯೋಗ ಸೃಷ್ಟಿಯಂತಹ ಪ್ರಮುಖ ಕ್ಷೇತ್ರಗಳನ್ನು ಉತ್ತೇಜಿಸುವತ್ತ ಗಮನಹರಿಸುವುದಾಗಿ ಹೇಳಿದರು. ಇದೇ ವೇಳೆ ಆದಾಯ ತೆರಿಗೆ ಮಿತಿಯನ್ನು ಏಳು ಲಕ್ಷಕ್ಕೆ ಏರಿಸುವ ಘೋಷಣೆಯನ್ನೂ ಮಾಡಿದ್ದಾರೆ.ಹಾಗಾದ್ರೆ ಇಂದಿನ ಬಜೆಟ್ನಲ್ಲಿ ಮಾಡಲಾದ ಪ್ರಮುಖ ಘೋಷಣೆಗಳು ಯಾವುದು? ಇಲ್ಲಿದೆ ನೋಡಿ ವಿವರ,
ಕೃಷಿ ಸಾಲದ ಗುರಿ 20 ಲಕ್ಷ ಕೋಟಿಗೆ ಏರಿಕೆ
ಪ್ರವಾಸೋದ್ಯಮಕ್ಕಾಗಿ ಚಾಲೆಂಜ್ ಮೋಡ್ ಮೂಲಕ 50 ಸ್ಥಳಗಳನ್ನು ಆಯ್ಕೆ ಮಾಡಿ ಅಭಿವೃದ್ಧಿ.
ಹಿರಿಯ ನಾಗರಿಕರ ಉಳಿತಾಯ ಯೋಜನೆ ಠೇವಣಿ ಮಿತಿ 15 ಲಕ್ಷದಿಂದ 30 ಲಕ್ಷಕ್ಕೆ ಏರಿಕೆ
ಮೊಬಿಲಿಟಿ ಇನ್ಫ್ರಾದಡಿ 50 ಹೆಚ್ಚುವರಿ ವಿಮಾನ ನಿಲ್ದಾಣಗಳು, ಹೆಲಿಪೋರ್ಟ್‌ಗಳ ನಿರ್ಮಾಣ
ರೈಲ್ವೆಗೆ 2.4 ಲಕ್ಷ ಕೋಟಿ ರೂಪಾಯಿಗಳು ಅನುದಾನ, ಇದು ಇದುವರೆಗಿನ ಅತಿ ಹೆಚ್ಚು ಹಂಚಿಕೆಯಾಗಿದೆ
ಪ್ರಧಾನಿ ಆವಾಸ್ ಯೋಜನೆಗೆ ಶೇ 66ರಷ್ಟು ಹೆಚ್ಚಳವಾಗಿದ್ದು, 79,000 ಕೋಟಿ ರೂ. ಮಾಡಲಾಗಿದೆ.
ಪ್ರಮುಖ ಸ್ಥಳಗಳಲ್ಲಿ 157 ಹೊಸ ನರ್ಸಿಂಗ್ ಕಾಲೇಜುಗಳು
ಕರ್ನಾಟಕದ ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರೂ. ಅನುದಾನ ಘೋಷಣೆ.
ಕೇಂದ್ರದ ಪರಿಣಾಮಕಾರಿ ಬಂಡವಾಳ ವೆಚ್ಚ – 13.7 ಲಕ್ಷ ಕೋಟಿ ರೂ
ಬಂಡವಾಳ ಹೂಡಿಕೆ ವೆಚ್ಚವನ್ನು 33 ಪ್ರತಿಶತದಿಂದ 10 ಲಕ್ಷ ಕೋಟಿಗೆ ಹೆಚ್ಚಿಳ, ಇದು 2024 ರ ಆರ್ಥಿಕ ವರ್ಷದಲ್ಲಿ GDP ಶೇಕಡಾ 3.3 ಆಗಿದೆ.
63,000 ಕ್ರೆಡಿಟ್ ಸೊಸೈಟಿಗಳ ಗಣಕೀಕರಣಕ್ಕೆ 2,516 ಕೋಟಿ ರೂ.
ಏಕಲವ್ಯ ಮಾದರಿ ವಸತಿ ಶಾಲೆಗಳು, ಇದಕ್ಕಾಗಿ 38,800 ಶಿಕ್ಷಕರ ನೇಮಕ.
4000 MWh ಬ್ಯಾಟರಿ ಶಕ್ತಿ ಶೇಖರಣಾ ವ್ಯವಸ್ಥೆಗಳನ್ನು ಬೆಂಬಲಿಸಲಾಗುತ್ತದೆ
ನಿವ್ವಳ-ಶೂನ್ಯ ಹೊರಸೂಸುವಿಕೆ ಗುರಿಗಳಿಗೆ ಶಕ್ತಿ ಪರಿವರ್ತನೆಗಾಗಿ 35,000 ಕೋಟಿ ರೂ
ನೈಸರ್ಗಿಕ ಕೃಷಿ – ಒಂದು ಕೋಟಿ ರೈತರಿಗೆ ನೆರವು ಸಿಗಲಿದೆ.