ಮನೆ ಖರೀದಿಗೆ ಮನಸೋ ಇಚ್ಛೆ ದರ ನಿಗದಿ, ಖರೀದಿದಾರರ ಗಮನಕ್ಕೆ ತರದೇ ಮನೆ, ಅಪಾರ್ಟ್‌ಮೆಂಟ್ ಲೇಔಟ್‌ನಲ್ಲಿ ದಿಡೀರ್ ಬದಲಾವಣೆ, ಉದ್ದೇಶಪೂರ್ವಕವಾಗಿ ಮನೆ ನಿರ್ಮಾಣ ಅಥವಾ ಹಸ್ತಾಂತರದಲ್ಲಿ ವಿಳಂಬ ಇಂತಹ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಬಿಲ್ಡರ್‌ಗಳ ಆಟಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಾಜ್ಯವುರಿಯಲ್ ಎಸ್ಟೇಟ್ ಅಭಿವೃದ್ಧಿ ಮತ್ತು ನಿಯಂತ್ರಣ ಕಾಯಿದೆ (ರೇರಾ) ಜಾರಿಗೊಳಿಸಿದೆ. ಈ ಕಾಯ್ದೆ ಜಾರಿ ಆಗಿ ಐದು ವರ್ಷಗಳಾಗಿವೆ. ಆದರೆ ಈ ಅವಧಿಯಲ್ಲಿ ಪ್ರಾಧಿಕಾರದಲ್ಲಿ ಅಧಿಕೃತವಾಗಿ ದಾಖಲಾಗಿರುವ ದೂರುಗಳಲ್ಲಿ ಶೇ. 50ಕ್ಕೂ ಅಧಿಕ ಇತ್ಯರ್ಥಕ್ಕೆ ಬಾಕಿಯಿವೆ ಎಂದು ಅಂಕಿಅಂಶಗಳು ತಿಳಿಸಿವೆ.
ರಾಜ್ಯದಲ್ಲಿ ರಿಯಲ್ ಎಸ್ಟೇಟ್ ಸಂಸ್ಥೆ ಅಥವಾ ನಿರ್ಮಾಣ ಸಂಸ್ಥೆಗಳು ತಾವು ನಿರ್ಮಿಸುವವಸತಿ ಬಡಾವಣೆ, ಅಪಾರ್ಟ್‌ಮೆಂಟ್, ವಾಣಿಜ್ಯ ಸಮುಚ್ಚಯ ಸೇರಿದಂತೆ ಎಲ್ಲಾ ಬಗೆಯ ನಿರ್ಮಾಣಯೋಜನೆಗಳನ್ನು ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದಲ್ಲಿ ನೋಂದಣಿ ಮಾಡುವುದುಕಡ್ಡಾಯ. ರಿಯಲ್ ಎಸ್ಟೇಟ್ ಏಜೆಂಟರು ಕೂಡ ಪ್ರಾಧಿಕಾರದಲ್ಲಿ ನೋಂದಣಿ ಮಾಡಿಕೊಳ್ಳಬೇಕು ಎಂಬ ನಿಯಮಗಳು ಇವೆ. ಇದರಿಂದ ಈ ಕಾಯಿದೆ ಜಾರಿಯಿಂದ ಖರೀದಿದಾರರಿಗೆ ಅನುಕೂಲವಾಗುತ್ತದೆ. ರಿಯಲ್ ಎಸ್ಟೇಟ್ ವಹಿವಾಟಿನಲ್ಲಿ ಪಾರದರ್ಶಕತೆ ಇರುತ್ತದೆ ಎಂದು ನಂಬಲಾಗಿತ್ತು. ಆದರೆ ರಿಯಲ್ ಎಸ್ಟೇಟ್ ಉದ್ಯಮಿಗಳ ಕೈಯಲ್ಲಿ ಮನೆ ಖರೀದಿದಾರ ಅಥವಾ ಗ್ರಾಹಕ ಪರದಾಡುವುದು ತಪ್ಪಿಲ್ಲ ಎಂಬುದು ಸತ್ಯ.
ಕಳೆದ ಐದು ವರ್ಷಗಳಲ್ಲಿ ರೇರಾದಲ್ಲಿ 6,906 ದೂರುಗಳು ಸಲ್ಲಿಕೆಯಾಗಿವೆ. 3,381 ಪ್ರಕರಣಗಳಲ್ಲಿ ಆದೇಶ ಹೊರಡಿಸಲಾಗಿದೆ ಎನ್ನಲಾಗಿದೆ. ಇನ್ನೂ 3,522 ಕೇಸ್‌ಗಳು ಬಾಕಿ ಇವೆ. ರಾಜ್ಯ ಸರ್ಕಾರ ಹಾಗೂ ಪ್ರಾಧಿಕಾರ ಕಾಯಿದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ವಿಫಲವಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ರಾಜ್ಯದಲ್ಲಿರೇರಾ ನಿಯಮಗಳು ಸಡಿಲವಾಗಿವೆ ಎಂಬ ಆರೋಪಗಳೂ ಇವೆ. ವಸತಿ ಯೋಜನೆಗಳ ಪ್ರಗತಿ ಬಗ್ಗೆ ರೇರಾಗೆ ತ್ರೈಮಾಸಿಕ ವರದಿಗಳನ್ನು ಸಲ್ಲಿಸಬೇಕು. ಆದರೆಬಹುತೇಕ ಬಿಲ್ಡರ್‌ಗಳು ಸಲ್ಲಿಸುತ್ತಿಲ್ಲ. ರೇರಾ ಕಾಯಿದೆಯ ಯಾವುದೇ ನಿಯಮವನ್ನು ಉಲ್ಲಂಘಿಸಿದರೆ ನಿರ್ಮಾಣ ಸಂಸ್ಥೆಯ ಬ್ಯಾಂಕ್ ಖಾತೆಯನ್ನುಸ್ಥಗಿತಗೊಳಿಸಬಹುದು.
ಯೋಜನೆಯ ನಕ್ಷೆ ಮತ್ತು ವಿವರ ಅಪ್‌ಡೇಟ್ ಮಾಡದೇ ಇದ್ದರೆಯೋಜನಾವೆಚ್ಚದ ಶೇ.10ರಷ್ಟು ದಂಡ ವಿಧಿಸಬಹುದು.ಎರಡನೇ ಬಾರಿ ನಿಯಮ ಉಲ್ಲಂಘಿಸಿದರೆಹೆಚ್ಚುವರಿಯಾಗಿ ಶೇ.10 ದಂಡ ವಿಧಿಸಬಹುದು. ನಿಯಮ ಉಲ್ಲಂಘಿಸುವ ಏಜೆಂಟರಿಗೂಅಪಾರ್ಟ್‌ಮೆಂಟ್‌ನ ಒಟ್ಟು ವೆಚ್ಚದ ಶೇ.10ರಷ್ಟು ದಂಡ ವಿಧಿಸುವ ಅವಕಾಶ ಇದೆ. ಇಂತಹ ಕಾಯಿದೆ ನಿಯಮಗಳು ಪಾಲನೆಯಾಗುತ್ತಿಲ್ಲ ಎನ್ನಲಾಗಿದೆ.
ಮಾತುಕತೆ ವೇಳೆ ಗ್ರಾಹಕರಿಂದ ಮುಂಗಡ ಪಡೆಯುವ ಮೊತ್ತದಲ್ಲಿ ಶೇ.70ರಷ್ಟನ್ನು ಆ ಯೋಜನೆಯಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆದು ಠೇವಣಿ ಇಡಬೇಕು. ಯೋಜನೆಯಲ್ಲಿ ಯಾವುದೇ ಹಂತದಲ್ಲಿಬದಲಾವಣೆ ಮಾಡಲು ಮೂರನೇ ಎರಡಷ್ಟು ಗ್ರಾಹಕರ ಒಪ್ಪಿಗೆ ಕಡ್ಡಾಯ.ವಸತಿ ಯೋಜನೆಗಳನ್ನುಜಾರಿಗೊಳಿಸುತ್ತಿರುವ ಪ್ರವರ್ತಕರು ಮತ್ತು ಬಿಲ್ಡರ್‌ಗಳು ತಮ್ಮಲ್ಲಿರುವ ನಿಧಿ (ಹಣಕಾಸುಲಭ್ಯತೆ) ಸ್ಥಿತಿಗತಿಯ ಬಗ್ಗೆ ಪ್ರಾಧಿಕಾರಕ್ಕೆ ಮಾಹಿತಿ ನೀಡಬೇಕು. ಆದರೆ ಈಗ ಅಂತಹ ನಿಯಮಗಳನ್ನು ಬಿಲ್ಡರ್‌ಗಳು ಪಾಲನೆ ಮಾಡುತ್ತಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ.