26.7 C
Bengaluru
Sunday, December 22, 2024

ಸಿಂಗಲ್‌ ಯುನಿಟ್‌ ಪ್ಲೋರ್‌ಗಳಲ್ಲಿ ಬಹಮಹಡಿ ಕಟ್ಟಡ: ಒಪ್ಪಿಗೆ ನೀಡಿದ ಅಧಿಕಾರಿಗಳಿಗೆ ಡಿಸಿ ಎಚ್ಚರಿಕೆ

ಸಿಂಗಲ್‌ ಯುನಿಟ್‌ ಪ್ಲೋರ್‌ಗಳಲ್ಲಿ ಬಹುವಸತಿ ಕಟ್ಟಡಗಳ ನಿರ್ಮಾಣ ಹಾಗೂ ಅಕ್ರಮ ಕಟ್ಟಡ ನಿರ್ಮಾಣಕ್ಕೆ ತಡೆ ಹಾಕುವ ಉದ್ದೇಶದಿಂದ ಆಸ್ತಿ ನೋಂದಣಿ ನಿಯಮಗಳನ್ನು ಉಲ್ಲಂಘಿಸಿ, ಅನುಮತಿ ನೀಡಿದ ಕಂದಾಯ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಿಮಿನಲ್‌ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ಗುರುಗ್ರಾಮದ ಡೆಪ್ಯುಟಿ ಕಮೀಷನರ್‌ ನೀಡಿದ್ದಾರೆ.

ಹರಿಯಾಣ ಕಟ್ಟಡ ನಿರ್ಮಾಣ ಕೋಡ್‌ 2017 ಹಾಗೂ ನಗರಾಭಿವೃದ್ಧಿ ನಿಯಮಗಳ ಪ್ರಕಾರ, ರಾಜ್ಯದಲ್ಲಿ ಮಂಜೂರಾದ ಸಿಂಗಲ್‌ ಪ್ಲೋರ್ ಜಾಗದಲ್ಲಿ ಒಂದೇ ಮನೆ ಅಥವಾ ಕಟ್ಟಡ ಕಟ್ಟಲು ಅನುಮತಿ ನೀಡಲಾಗಿದೆ.

ಮಂಜೂರಾದ ಸಿಂಗಲ್‌ ಪ್ಲೋರ್‌ಗಳಲ್ಲಿ ಬಹುವಸತಿ ಕಟ್ಟಡ ನಿರ್ಮಾಣದಿಂದ ಆಸ್ತಿತ್ವದಲ್ಲಿರುವ ಮೂಲಸೌಕರ್ಯಗಳ ಮೇಲೆ ಪರಿಣಾಮ ಬೀರುತ್ತದೆ ಹಾಗೂ ಯೋಜಿತ ಕಾಲೋನಿಗಳು ನಗರದ ಸ್ಲಮ್‌ ಆಗಿ ಬದಲಾಗಬಹುದು ಎಂದು ಡಿಪಾರ್ಟ್‌ಮೆಂಟ್‌ ಆಫ್‌ ಟೌನ್‌ ಆ್ಯಂಡ್‌ ಕಂಟ್ರಿ ಪ್ಲಾನಿಂಗ್‌ (ಡಿಟಿಸಿಪಿ) ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

180 ಚದರ ಗಜಗಳಿಗಿಂತ ದೊಡ್ಡದಾದ ಜಾಗದಲ್ಲಿ ನಾಲ್ಕು ವಸತಿ ಮಹಡಿ ಕಟ್ಟಡಕ್ಕೆ ಅನುಮತಿ ನೀಡಬಹುದು. 180 ಚದರ ಗಜಕ್ಕಿಂತ ಸಣ್ಣ ಜಾಗದಲ್ಲಿ ಒಂದೇ ಕಟ್ಟಡ ಯುನಿಟ್‌ ನಿರ್ಮಾಣಕ್ಕೆ ಅನುಮತಿಸಬೇಕು ಎಂದು ಕಂದಾಯ ಇಲಾಖೆ ಅಧಿಕಾರಿಗಳ ಜೊತೆ ನಡೆದ ಮಾತುಕತೆಯ ವೇಳೆ ಡೆಪ್ಯುಟಿ ಕಮೀಷನರ್‌ ನಿಶಾಂತ್‌ ಯಾದವ್‌ ಸ್ಪಷ್ಟಪಡಿಸಿದರು.

ಆಸ್ತಿ ನೋಂದಣಿ ವಿಚಾರದಲ್ಲಿ ನಿಯಮಗಳಿಗೆ ವಿರುದ್ಧವಾಗಿ ಕಟ್ಟಡ ನಿರ್ಮಾಣಕ್ಕೆ ಒಪ್ಪಿಗೆ ನೀಡಿದ್ದಲ್ಲಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಎಫ್‌ಐಆರ್‌ ದಾಖಲು ಸೇರಿದಂತೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಯಾದವ್‌ ತಿಳಿಸಿದ್ದಾರೆ.

ಡಿಪಾರ್ಟ್‌ಮೆಂಟ್‌ ಆಫ್‌ ಟೌನ್‌ ಆ್ಯಂಡ್‌ ಕಂಟ್ರಿ ಪ್ಲಾನಿಂಗ್‌ (ಡಿಟಿಸಿಪಿ) ಅಧಿಕಾರಿಗಳು ಹಾಗೂ ಪಾಲಮ್ ವಿಹಾರ್‌ನ ನಿವಾಸಿಗಳ ಕಲ್ಯಾಣ ಸಂಘ (ಆರ್‌ಡಬ್ಲ್ಯೂಎ) ಈಚೆಗೆ ಸಿಂಗಲ್‌ ಪ್ಲೋಟ್‌ಗಳಲ್ಲಿ ಬಹುವಸತಿ ಕಟ್ಟಡಗಳ ಅಕ್ರಮ ನಿರ್ಮಾಣ ಹಾಗೂ ನಿಯಮಗಳನ್ನು ಉಲ್ಲಂಘಿಸಿ ಕಂದಾಯ ಇಲಾಖೆ ಅಧಿಕಾರಿಗಳಿಂದ ಆಸ್ತಿ ನೋಂದಣಿ ವಿಚಾರಗಳ ದೂರು ಸಲ್ಲಿಸಿದ್ದರು. ಕಳೆದ ವಾರ ಇಂತಹ ಐದು ನಿಯಮಬಾಹಿರ ಆಸ್ತಿ ನೋಂದಣಿಗಳನ್ನು ಡೆಪ್ಯುಟಿ ಕಮೀಷನರ್‌ ರದ್ದುಗೊಳಿಸಿದ್ದರು.

Related News

spot_img

Revenue Alerts

spot_img

News

spot_img