#Stamp Duty #Registration Fee #IGR, #Revenue Department News,
ಬೆಂಗಳೂರು, ಡಿ. 18: ಕಡಿಮೆ ನೋಂದಣಿ ಮತ್ತು ಮುದ್ರಾಂಕ ಸುಲ್ಕ ಸಂಗ್ರಹಿಸಿರುವ 27,119 ಪ್ರಕರಣಗಳಲ್ಲಿ 243 ಕೋಟಿ ರೂ. ಕೊರತೆ ಮೊತ್ತ ವಸೂಲಿ ಮಾಡುವಂತೆ ನೋಂದಣಿ ಮತ್ತು ಮುದ್ರಾಂಕ ಅಯುಕ್ತ ಬಿ.ಅರ್. ಮಮತಾ ಅವರು ಕಾಲಮಿತಿ ನಿಗಧಿ ಮಾಡಿದ್ದಾರೆ. ಮುಂದಿನ ಮಾರ್ಚ್ ಅಂತ್ಯದ ವೇಳೆಗೆ ಕನಿಷ್ಠ 50 ರಷ್ಟು ಪ್ರಕರಣಗಳಲ್ಲಿ ಕೊರತೆ ಮೊತ್ತ ವಸೂಲಿ ಮಾಡುವಂತೆ ಸೂಚಿಸಿದ್ದಾರೆ.
ಕಳೆದ ಹನ್ನೊಂದು ತಿಂಗಳ ಹಿಂದೆಯೇ ಈ ಸುತ್ತೋಲೆ ಹೊರಡಿಸಿದ್ದರೂ, ವಸೂಲಿ ಬಗ್ಗೆ ಯಾವುದೇ ಕ್ರಮ ಜರುಗಿಸಿಲ್ಲ. ವರ್ಷಾಂತ್ಯಕ್ಕೆ ಹಣಕಾಸು ಇಲಾಖೆಗೆ ವರದಿ ನೀಡಬೇಕಿದ್ದು, ಈ ಕೂಡಲೇ ಕೊರತೆ ಮೊತ್ತವನ್ನು ಭೂ ಕಂದಾಯ ಮಾದರಿಯಲ್ಲಿ ವಸೂಲಿ ಮಾಡುವಂತೆ ತಿಳಿಸಿದ್ದಾರೆ.
ಏನಿದು ಕೊರತೆ ಮೊತ್ತ : ಸಾಮಾನ್ಯವಾಗಿ ಉಪ ನೋಂದಣಾಧಿಕಾರಿಗಳು ಸ್ವತ್ತುಗಳ ನೊಂದಣಿಗೆ ಸಂಬಂಧಿಸಿದಂತೆ EC ನೋಡುವುದಿಲ್ಲ. ಆದರೆ ವಾಸ್ತವದಲ್ಲಿ ಸೇಲ್ ಅಗ್ರಿಮೆಂಟ್ ನಲ್ಲಿ ಹೆಚ್ಚು ಮೊತ್ತ ತೋರಿಸಿ ನೋಂದಣಿ ವೇಳೆ ಕಡಿಮೆ ಮೊತ್ತ ತೋರಿಸಿ ನೋಂದಣಿ ಮಾಡಿಸಲಾಗಿರುತ್ತದೆ. ಇದರಿಂದ ನೋಂದಣಿ ಮತ್ತು ಮುದ್ರಾಂಕ ಶುಲ್ಕದಲ್ಲಿ ಕೊರತೆ ಎದುರಾಗಿ ಸರ್ಕಾರಕ್ಕೆ ಬರಬೇಕಿರುವ ಶುಲ್ಕದಲ್ಲಿ ನಷ್ಟವಾಗಿರುತ್ತದೆ. ಇಂತಹ ಪ್ರಕರಣಗಳ ಬಗ್ಗೆ ಅಡಿಟ್ ಮಾಡುವಾಗ ಅಥವಾ ಜಿಲ್ಲಾ ನೋಂದಣಾಧಿಕಾರಿಗಳ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ ಕೊರತೆ ಶುಲ್ಕ ಪಾವತಿಸುವಂತೆ ನೋಟಿಸ್ ನೀಡುತ್ತಾರೆ. ಆದರೂ ಪಾವತಿ ಮಾಡದಿದ್ದ ಪಕ್ಷದಲ್ಲಿ ಅಂತಹ ಪ್ರಕರಣಗಳಲ್ಲಿ ಮುದ್ರಾಂಕ ಕಾಯ್ದೆ ನಿಯಮದ ಅನ್ವಯ ಜಿಲ್ಲಾಧಿಕಾರಿಗಳು ಮತ್ತು ತಹಶೀಲ್ದಾರರು ಭೂ ಕಂದಾಯ ರೀತಿ ಕೊರತೆ ವಸೂಲಿ ಮಾಡಿಕೊಡುವಂತೆ ಸೂಚಿಸಿತ್ತಾರೆ.
ಜಿಲ್ಲಾಧಿಕಾರಿಗಳು ನೋಟಿಸ್ ನೀಡಿಯೂ ಕೊರತೆ ಶುಲ್ಕ ಪಾವತಿಸದಿದ್ದರೆ, ಪಹಣಿಯಲ್ಲಿ ಜಮೀನು ಸರ್ಕಾರ ವಶ ಎಂಬುದಾಗಿ ನಮೂದಿಸುತ್ತಾರೆ. ಒಮ್ಮೆ ಪಹಣಿಗಳಲ್ಲಿ ಸರ್ಕಾರಿ ಎಂದು ನಮೂದು ಮಾಡಿದರೆ ಅಂತಹ ಆಸ್ತಿಯನ್ನು ಯಾರಿಗೂ ಪರಭಾರೆ ಮಾಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಕಡ್ಡಾಯವಾಗಿ ಈ ಪ್ರಕರಣಗಳಲ್ಲಿ ಕೊರತೆ ಶುಲ್ಕವನ್ನು ಪಾವತಿ ಮಾಡಬೇಕು. ಮಾಡದಿದ್ದರೆ ಆಸ್ತಿಯ ದಾಖಲೆಗಳಲ್ಲಿ ಸರ್ಕಾರಿ ಎಂದು ನಮೂದಿಸುತ್ತಾರೆ.
ಕಳೆದ ಹನ್ನೊಂದು ತಿಂಗಳ ಹಿಂದೆಯೇ ಜಿಲ್ಲಾಧಿಕಾರಿಗಳಿಗೆ ಕೊರತೆ ಶುಲ್ಕ ವಸೂಲಿ ಮಾಡಲು ಸೂಚಿಸಿದರೂ ಜಿಲ್ಲಾಧಿಕಾರಿಗಳು ಯಾವುದೇ ಕ್ರಮ ಜರುಗಿಸಿಲ್ಲ. ಮುಂದಿನ ಮಾರ್ಚ್ ಅಂತ್ಯಕ್ಕೆ ಬಾಕಿ ಇರುವ 243 ಕೋಟಿ ರೂ. ಶುಲ್ಕ ವಸೂಲಿ ಮಾಡಲು ಸೂಚಿಸಲಾಗಿದೆ. ಈ ಕುರಿತು ಕ್ರಮ ಜರುಗಿಸಲು ಜಿಲ್ಲಾ ನೋಂದಣಾಧಿಕಾರಿಗಳಿಗೆ ಸೂಚಿಸಲಾಗಿದೆ.
ಜಿಲ್ಲಾವಾರು ಕೊರತೆ ನೊಂದಣಿ ಮತ್ತು ಮುದ್ರಾಂಕ ಶುಲ್ಕ ವಸೂಲಿ ಬಾಕಿ ಇರುವ ಪ್ರಕರಣಗಳ ವಿವರ.
ಜಿಲ್ಲಾ ನೋಂದಣಾಧಿಕಾರಿಗಳ ಕಚೇರಿ ಪ್ರಕರಣಗಳ ಸಂಖ್ಯೆ ಬಾಕಿ ಮೊತ್ತ ( ಲಕ್ಷ ಗಳಲ್ಲಿ) ನಿಗದಿ ಪಡಿಸಿರುವ ಗುರಿ
ಬಸನವಗುಡಿ 64 238.18 32
ಜಯನಗರ 21 106 10
ಗಾಂಧಿನಗರ 1677 7881 838
ರಾಜಾಜಿನಗರ 1854 2927 927
ಶಿವಾಜಿನಗರ 1575 7640 787
ಬೆಂಗಳೂರು ಗ್ರಾ. 2005 705 1002
ರಾಮನಗರ 792 1417 396
ಬಾಗಲಕೋಟೆ 362 32 181
ಬೆಳಗಾವಿ 3129 555 1564
ಬಳ್ಳಾರಿ 261 46 130
ಬೀದರ್ 111 3.43 55
ಬಿಜಾಪುರ 556 236 278
ಚಾಮರಾಜನಗರ 169 31.48 84
ಚಿಕ್ಕಮಗಳೂರು 635 70 317
ಚಿತ್ರದುರ್ಗ 1129 275 564
ದಾವಣಗೆರೆ 738 99.85 369
ಧಾರವಾಡ 420 436 210
ಗದಗ 299 53 150
ಕಲಬುರಗಿ 508 105 254
ಹಾಸನ 1188 74 619
ಹಾವೇರಿ 202 23.70 101
ಕಾರವಾರ 244 43 122
ಕೋಲಾರ 380 386 190
ಚಿಕ್ಕಬಳ್ಳಾಪುರ 556 236 278
ಕೊಪ್ಪಳ 362 42 181
ಕೊಡಗು 116 160 58
ಮಂಡ್ಯ 1238 73 619
ದಕ್ಷಿಣ ಕನ್ನಡ 77 158 38
ಮೈಸೂರು 314 470 157
ರಾಯಚೂರು 1122 122 561
ಶಿವಮೊಗ್ಗ 296 66 148
ತುಮಕೂರು 3679 281 1839
ಉಡುಪಿ 82 9 41
ಯಾದಗಿರಿ 232 34 116
ವಿಜಯನಗರ 212 23 106
ಒಟ್ಟು 26,240 240,20 13120